ETV Bharat / international

133 ಜನರಿದ್ದ ವಿಮಾನ ಪತನ... ಎಲ್ಲರೂ ಸುಟ್ಟು ಭಸ್ಮವಾಗಿರುವ ಶಂಕೆ!

author img

By

Published : Mar 21, 2022, 2:25 PM IST

Updated : Mar 21, 2022, 3:45 PM IST

ಚೀನಾದ ಗುವಾಂಗ್​ಕ್ಸಿಯಲ್ಲಿ ವಿಮಾನ ಪತನವಾಗಿದ್ದು ಸುಮಾರು 133 ಜನ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

Plane crashes in China, 133 members died in plane crash in China, Chian plane crash news, ಚೀನಾದಲ್ಲಿ ವಿಮಾನ ಪತನ, ಚೀನಾದಲ್ಲಿ 133 ಜನರಿದ್ದ ವಿಮಾನ ಪತನ, ಚೀನಾ ವಿಮಾನ ಪತನ ಸುದ್ದಿ,
133 ಜನ ಹೊತ್ತೊಯ್ದಿದ್ದ ವಿಮಾನ ಪತನ

ಬೀಜಿಂಗ್​: ಚೀನಾ ಈಸ್ಟರ್ನ್ ಏರ್‌ಲೈನ್ಸ್ ವಿಮಾನವು ಗುವಾಂಗ್‌ಕ್ಸಿ ಪ್ರದೇಶದಲ್ಲಿ ಪತನವಾಗಿದ್ದು, ನೂರಾರು ಸಂಖ್ಯೆಯ ಸಾವು - ನೋವುಗಳು ಸಂಭವಿಸಿವೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

ಓದಿ: ಐಪಿಎಲ್‌ 2022: 'ಎಂಐ ಅರೆನಾ'ದಲ್ಲಿ ಮುಂಬೈ ಇಂಡಿಯನ್ಸ್‌ ಮೋಜು ಮಸ್ತಿ..!

133 ಜನರನ್ನು ಹೊತ್ತೊಯ್ಯುತ್ತಿದ್ದ ಚೀನಾ ಪೂರ್ವ ಪ್ರಯಾಣಿಕ ವಿಮಾನವು ನೈಋತ್ಯ ಚೀನಾದಲ್ಲಿ ಪತನಗೊಂಡಿದೆ. ಸುಮಾರು 133 ಜನರು ಈ ದುರ್ಘಟನೆಯಲ್ಲಿ ಸಾವನ್ನಪ್ಪಿರಬಹುದು ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡುತ್ತಿವೆ.

133 ಜನ ಹೊತ್ತೊಯ್ದಿದ್ದ ವಿಮಾನ ಪತನ

ಓದಿ: ವಿಚ್ಛೇದನ ಬಳಿಕ ಪ್ರೀತಿಯ ಅಪ್ಪುಗೆ ನೀಡಿದ ನಟಿ ಸಮಂತಾ..

ಬೋಯಿಂಗ್ 737 ವಿಮಾನವು ಗುವಾಂಗ್​ಕ್ಸಿ ಪ್ರದೇಶದ ವುಝೌ ನಗರದ ಸಮೀಪವಿರುವ ಗ್ರಾಮೀಣ ಪ್ರದೇಶದಲ್ಲಿ ಪತನಗೊಂಡಿದೆ. ವಿಮಾನವು ನೆಲಕ್ಕಪ್ಪಳಿಸಿರುವುದರಿಂದ ಬ್ಲಾಸ್ಟ್​ ಆಗಿರುವ ಶಂಕೆಯಿದೆ. ರಕ್ಷಣಾ ತಂಡಗಳನ್ನು ಘಟನಾ ಸ್ಥಳಕ್ಕೆ ಕಳುಹಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ

Last Updated : Mar 21, 2022, 3:45 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.