ETV Bharat / sports

ಐಪಿಎಲ್‌ 2022: 'ಎಂಐ ಅರೆನಾ'ದಲ್ಲಿ ಮುಂಬೈ ಇಂಡಿಯನ್ಸ್‌ ಮೋಜು ಮಸ್ತಿ..!

author img

By

Published : Mar 21, 2022, 1:09 PM IST

Updated : Mar 21, 2022, 1:25 PM IST

'ಎಂಐ ಅರೆನಾ' ಕಾರ್ಯಕ್ರಮದಲ್ಲಿ ಮುಂಬೈ ಇಂಡಿಯನ್ಸ್‌ ತನ್ನೆಲ್ಲಾ ನಿರ್ವಹಣೆ, ಸಹಾಯಕ ಸಿಬ್ಬಂದಿ ಹಾಗೂ ಆಟಗಾರರು ಒಗ್ಗಟ್ಟು ಪ್ರದರ್ಶಿಸಿದ್ದಾರೆ. ಆಟಗಾರರು ಹಾಗೂ ಸಿಬ್ಬಂದಿ ವಿವಿಧ ಮನರಂಜನೆಯಲ್ಲಿ ಭಾಗವಹಿಸಿದ್ದನ್ನು ಫ್ರಾಂಚೈಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದೆ.

Rohit Sharma, Other Mumbai Indians Stars Have A Blast At The Sprawling New 'MI Arena'
ಐಪಿಎಲ್‌ 2022: 'ಎಂಐ ಅರೆನಾ'ದಲ್ಲಿ ಮುಂಬೈ ಇಂಡಿಯನ್ಸ್‌ ಮೋಜು ಮಸ್ತಿ..!

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ 15ನೇ ಆವೃತ್ತಿ ಇದೇ 26 ರಿಂದ ಆರಂಭವಾಗುತ್ತಿದ್ದ ಹೊಡಿ ಬಡಿ ಆಟವನ್ನು ಕಣ್ತುಂಬಿಕೊಳ್ಳಲು ಕೋಟಿ ಕೋಟಿ ಕ್ರೀಡಾಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ.

ಐಪಿಎಲ್‌ ಟಿ - 20 ಪಂದ್ಯಗಳಿಗಾಗಿ ಈಗಾಗಲೇ ಎಲ್ಲ ತಂಡಗಳು ಅಭ್ಯಾಸ ಆರಂಭಿಸಿದ್ದು, ಬಹುತೇಕ ಫ್ರಾಂಚೈಸಿಗಳು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಆಟಗಾರರು ನೆಟ್‌ನಲ್ಲಿ ಬೆವರು ಹರಿಸುತ್ತಿರುವ ದೃಶ್ಯಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳ ಕುತೂಹಲ ಮತ್ತಷ್ಟು ಹೆಚ್ಚಿಸುತ್ತಿವೆ.

ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡದ ನಿರ್ವಹಣೆ, ಸಹಾಯಕ ಸಿಬ್ಬಂದಿ ಸೇರಿದಂತೆ ಇಡೀ ತಂಡದ ಒಟ್ಟಾಗಿ ಸೇರಿಕೊಂಡಿದ್ದು, 'ನ್ಯೂ ಎಂಐ ಅರೆನಾ' ಉದ್ಘಾಟನೆಗೊಳಿಸಿ ಸಹೋದರತ್ವ ಮತ್ತು ಏಕತೆ ಪ್ರದರ್ಶಿಸಿದೆ.

ಮುಂಬೈ ಇಂಡಿಯನ್ಸ್ ಇಡೀ ತಂಡದೊಂದಿಗೆ ರೋಹಿತ್ ಶರ್ಮಾ ವಿವಿಧ ಆಟಗಳಲ್ಲಿ ಭಾಗವಹಿಸಿದ್ದ ವಿಡಿಯೋವನ್ನು ಫ್ರಾಂಚೈಸಿ ಪೋಸ್ಟ್ ಮಾಡಿದೆ. ರೋಹಿತ್ ಮಾತ್ರವಲ್ಲದೇ, ಮುಖ್ಯ ಕೋಚ್ ಮಹೇಲಾ ಜಯವರ್ಧನೆ ಮತ್ತು ಬೌಲಿಂಗ್ ಕೋಚ್ ಶೇನ್ ಬಾಂಡ್ ಸೇರಿದಂತೆ ಉನ್ನತ ಸಿಬ್ಬಂದಿ ಕೂಡ ಇದ್ದರು. ಇಶಾನ್ ಕಿಶನ್ ಮತ್ತು ಜಸ್ಪ್ರೀತ್ ಬುಮ್ರಾ ಕೂಡ ವಿಭಿನ್ನ ಆಟಗಳನ್ನು ಆನಂದಿಸುತ್ತಿದ್ದಾರೆ. ಮುಂಬೈ ಇಂಡಿಯನ್ಸ್ ಮಾರ್ಚ್ 27 ರಂದು ಮುಂಬೈನ ಬ್ರಬೋರ್ನ್ ಸ್ಟೇಡಿಯಂನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ) ವಿರುದ್ಧ ತನ್ನ ಮೊದಲ ಪಂದ್ಯವನ್ನು ಆಡಲಿದೆ.

ಇದನ್ನೂ ಓದಿ: ಐಪಿಎಲ್​ನಲ್ಲಿ ಅತಿ ಹೆಚ್ಚು ಬಾರಿ 200ರನ್ ಸಿಡಿಸಿದ - ನೀಡಿದ ತಂಡಗಳ ವಿವರ ಇಲ್ಲಿದೆ

Last Updated : Mar 21, 2022, 1:25 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.