ETV Bharat / international

'ಅಫ್ಘಾನಿಸ್ತಾನದಲ್ಲಿ ಪ್ರಜಾಪ್ರಭುತ್ವ ಸರ್ಕಾರ ಇರಲ್ಲ': ಉಗ್ರ ನಾಯಕನ ಉಸ್ತುವಾರಿಯಲ್ಲಿ ತಾಲಿಬಾನ್‌ ಆಡಳಿತ

author img

By

Published : Aug 19, 2021, 10:38 AM IST

ಅಫ್ಘಾನಿಸ್ತಾನದಲ್ಲಿ ಸರ್ಕಾರ ನಡೆಸಲು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿರುವ ತಾಲಿಬಾನ್‌, ತನ್ನದೇ ಆಡಳಿತ ಮಂಡಳಿಯ ಮೂಲಕ ಅಧಿಕಾರ ನಡೆಸಲಿದೆ ಎನ್ನಲಾಗಿದೆ. ಇಸ್ಲಾಮಿಸ್ಟ್ ಭಯೋತ್ಪಾದಕ ಚಳವಳಿಯ ಸರ್ವೋಚ್ಚ ನಾಯಕ ಹೈಬತುಲ್ಲಾ ಅಖುಂಡಜಾ ಉಸ್ತುವಾರಿಯಲ್ಲಿ ಸರ್ಕಾರ ಇರಲಿದೆ ಎಂದು ತಿಳಿದುಬಂದಿದೆ.

No Democratic System At All," Say Taliban. Council May Rule Afghanistan
ಆಫ್ಘಾನ್‌ನಲ್ಲಿ ಪ್ರಜಾಪ್ರಭುತ್ವ ಸರ್ಕಾರ ಇಲ್ಲ; ಉಗ್ರ ನಾಯಕ ಹೈಬತುಲ್ಲಾ ಅಖುಂಡಜಾ ಉಸ್ತುವಾರಿಯಲ್ಲಿ ತಾಲಿಬಾನ್‌ ಆಡಳಿತ

ಕಾಬೂಲ್‌: ಅಫ್ಘಾನಿಸ್ತಾನದಲ್ಲಿ ತನ್ನದೇ ಆಡಳಿತ ಮಂಡಳಿಯನ್ನು ತಾಲಿಬಾನ್‌ ರಚಿಸಲಿದ್ದು, ಇಸ್ಲಾಮಿಸ್ಟ್ ಭಯೋತ್ಪಾದಕ ಚಳವಳಿಯ ಸರ್ವೋಚ್ಚ ನಾಯಕ ಹೈಬತುಲ್ಲಾ ಅಖುಂಡಜಾ ಅವರ ಒಟ್ಟಾರೆ ಉಸ್ತುವಾರಿಯಲ್ಲಿ ಆಡಳಿತ ನಡೆಯಲಿದೆ ಎಂದು ತಿಳಿದುಬಂದಿದೆ.

ವಾಯುಸೇನೆಯ ಪೈಲಟ್‌ಗಳು ಹಾಗೂ ಅಫ್ಘಾನ್‌ ಸೇನೆಯ ಯೋಧರನ್ನು ತಾನಿಬಾನ್ ನಾಯಕರು ಸಂಪರ್ಕಿಸುತ್ತಿದ್ದು, ತಮ್ಮ ಸಂಘಟನೆಗೆ ಸೇರಿಸಿಕೊಳ್ಳುತ್ತಿದ್ದಾರೆ. ಅಂತಿಮವಾಗಿ ಮಂಡಳಿಯ ಸದಸ್ಯರು ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಸಂದರ್ಶನವೊಂದರಲ್ಲಿ ಹೈಬತುಲ್ಲಾ ಹೇಳಿದ್ದಾರೆ.

ಈ ನೇಮಕಾತಿ ಎಷ್ಟು ಯಶಸ್ವಿಯಾಗುತ್ತದೆ ಎಂಬುದನ್ನು ಕಾದು ನೋಡಬೇಕು. ಕಳೆದ 20 ವರ್ಷಗಳಲ್ಲಿ ಸಾವಿರಾರು ಸೈನಿಕರನ್ನು ತಾಲಿಬಾನ್ ಭಯೋತ್ಪಾದಕರು ಹತ್ಯೆಗೈದಿದ್ದಾರೆ. ಇತ್ತೀಚೆಗೆ ತಾಲಿಬಾನಿಗಳು ಯುಎಸ್ ತರಬೇತಿ ಪಡೆದ ಅಫ್ಘಾನ್ ಪೈಲಟ್‌ಗಳನ್ನು ಟಾರ್ಗೆಟ್‌ ಮಾಡಿದ್ದಾರೆ.

ಇದನ್ನೂ ಓದಿ: ನೋಡಿ: ಬ್ಯೂಟಿ ಸಲೂನ್‌ನಲ್ಲಿ ಮಹಿಳೆಯರ ಚಿತ್ರಗಳಿಗೆ ತಾಲಿಬಾನ್ ಉಗ್ರರಿಂದ ಕಪ್ಪು ಮಸಿ

1996 ರಿಂದ 2001 ರವರೆಗೆ ತಾಲಿಬಾನಿಗಳು ಕೊನೆಯ ಬಾರಿಗೆ ಅಫ್ಘಾನಿಸ್ತಾನವನ್ನು ಹೇಗೆ ನಡೆಸುತ್ತಿದ್ದರು ಎಂಬುದನ್ನು ವಿವರಿಸಿರುವ ತಾಲಿಬಾನ್‌ ನಾಯಕ ವಹೀದುಲ್ಲಾ ಹಾಶಿಮಿ, ಅದೇ ಮಾದರಿಯಲ್ಲಿ ಅಧಿಕಾರವನ್ನು ನಡೆಸುವುದಾಗಿ ಹೇಳಿದ್ದಾರೆ. ಅಖುಂಡಜಾದ ಅವರು ಕೌನ್ಸಿಲ್‌ನ ಮುಖ್ಯಸ್ಥನ ಹುದ್ದೆ ವಹಿಸುವ ಸಾಧ್ಯತೆಯಿದೆ. ಅವರು ದೇಶದ ಅಧ್ಯಕ್ಷರಂತೆಯೇ ಇರುತ್ತಾರೆ ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.