ETV Bharat / international

ಉಕ್ರೇನ್‌ ಬಂಡಾಯ ಪ್ರದೇಶಗಳಿಗೆ 'ಸ್ವಾತಂತ್ರ್ಯ'ದ ಮಾನ್ಯತೆ ನೀಡಿದ ರಷ್ಯಾ; ಆರ್ಥಿಕ ನಿರ್ಬಂಧ ವಿಧಿಸಿದ ಅಮೆರಿಕ

author img

By

Published : Feb 22, 2022, 2:56 AM IST

Updated : Feb 22, 2022, 7:25 AM IST

ಉಕ್ರೇನ್ ವಿಚಾರಕ್ಕೆ ಸಂಬಂಧಿಸಿದಂತೆ ರಷ್ಯಾ ಉಕ್ರೇನ್​ನಲ್ಲಿರುವ ಪ್ರತ್ಯೇಕತಾವಾದಿಗಳಿಗೆ ಬೆಂಬಲ ನೀಡುವುದಾಗಿ ಹೇಳಿಕೊಂಡ ಬಳಿಕ ಅಮೆರಿಕ, ರಷ್ಯಾ ಬೆಂಬಲಿತ ಉಕ್ರೇನ್​ ಪ್ರದೇಶಗಳ ಮೇಲೆ ಆರ್ಥಿಕ ನಿರ್ಬಂಧಗಳನ್ನು ವಿಧಿಸಿದೆ.

US to impose sanctions on Russia amid Ukraine crisis
ಉಕ್ರೇನ್ ಬಿಕ್ಕಟ್ಟು: ರಷ್ಯಾ ಮೇಲೆ ಅಮೆರಿಕ ನಿರ್ಬಂಧ

ವಾಷಿಂಗ್ಟನ್, ಅಮೆರಿಕ: ಮಹತ್ವದ ಬೆಳವಣಿಗೆಯೊಂದರಲ್ಲಿ ರಷ್ಯಾ ಅತ್ಯಂತ ಮಹತ್ತರವಾದ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ಈ ನಿರ್ಧಾರಕ್ಕೆ ಪ್ರತಿಕ್ರಿಯೆಯಾಗಿ ಅಮೆರಿಕ ಕೂಡಾ ಪ್ರತಿತಂತ್ರವನ್ನು ಹೂಡಿದೆ.

ರಷ್ಯಾದ ಅಧ್ಯಕ್ಷ ವ್ಲಾಡಿಮೀರ್ ಪುಟಿನ್ ಉಕ್ರೇನ್ ಪೂರ್ವ ಭಾಗದಲ್ಲಿರುವ, ರಷ್ಯಾ ಪರ ಒಲವು ಹೊಂದಿರುವ, ಪ್ರತ್ಯೇಕತಾವಾದಿಗಳನ್ನು ಬೆಂಬಲಿಸುವುದಾಗಿ ಹೇಳಿಕೆ ನೀಡಿದ್ದು, ಈ ಹೇಳಿಕೆಯನ್ನು ಅಮೆರಿಕ ಖಂಡಿಸಿದ್ದು, ರಷ್ಯಾ ಬೆಂಬಲಿತ ಎರಡು ಪ್ರದೇಶಗಳ ಮೇಲೆ ಕೆಲವು ನಿರ್ಬಂಧಗಳನ್ನು ವಿಧಿಸಿದೆ.

ಉಕ್ರೇನ್ ಪ್ರತ್ಯೇಕತಾವಾದಿಗಳ ಪರವಾಗಿ ರಷ್ಯಾ ತೆಗೆದುಕೊಂಡ ನಿರ್ಧಾರದಿಂದಾಗಿ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಹೊಸ ನಿರ್ಬಂಧಗಳನ್ನು ಘೋಷಣೆ ಮಾಡಲಿದ್ದಾರೆ ಎಂದು ಶ್ವೇತ ಭವನ ಮಾಹಿತಿ ನೀಡಿದೆ.

ಈ ನಿರ್ಬಂಧದ ನಿಯಮಗಳಂತೆ ಹೊಸ ಹೂಡಿಕೆ, ವ್ಯಾಪಾರ ಮತ್ತು ಹಣಕಾಸು ವಿಚಾರದಲ್ಲಿ ನಿರ್ಬಂಧ ವಿಧಿಸಲಾಗುತ್ತದೆ. ಈ ಬೆನ್ನಲ್ಲೇ ಐರೋಪ್ಯ ಒಕ್ಕೂಟದ ಉನ್ನತ ಅಧಿಕಾರಿಗಳು ಕೂಡ ನಿರ್ಬಂಧಗಳನ್ನು ರಷ್ಯಾ ವಿರುದ್ಧ ವಿಧಿಸುವುದಾಗಿ ಹೇಳಿದ್ದಾರೆ.

ಇದನ್ನೂ ಓದಿ:ಉತ್ತರ ಕೊರಿಯಾದಲ್ಲಿ ಆಹಾರ ಸಮಸ್ಯೆ ಎದುರಿಸಲು ಕಿಮ್ ಸಜ್ಜು: ಬೃಹತ್ ಗ್ರೀನ್​ಹೌಸ್ ನಿರ್ಮಾಣ

Last Updated : Feb 22, 2022, 7:25 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.