ETV Bharat / international

ಕೊರೊನಾ ಮಹಾಮಾರಿ - ಭಾರತದಲ್ಲಿ ಏರಿಕೆ.. ಅಮೆರಿಕದಲ್ಲಿ ಇಳಿಕೆ: ನಿಟ್ಟುಸಿರು ಬಿಟ್ಟ ಬೈಡನ್​

author img

By

Published : Mar 16, 2021, 11:58 AM IST

US sees sharp drop in new Covid cases
ನಿಟ್ಟುಸಿರು ಬಿಟ್ಟ ಬೈಡನ್​

ಒಂದೂವರೆ ವರ್ಷದ ಬಳಿಕ ಅಮೆರಿಕದಲ್ಲಿ ಕೋವಿಡ್​ ಸಾವು - ನೋವಿನ ಪ್ರಮಾಣದಲ್ಲಿ ಇಳಿಕೆ ಕಂಡು ಬಂದಿದ್ದು, ಅಧ್ಯಕ್ಷ ಜೋ ಬೈಡನ್​ ನಿಟ್ಟುಸಿರು ಬಿಟ್ಟಿದ್ದಾರೆ.

ವಾಷಿಂಗ್ಟನ್​: ಕೋವಿಡ್​ ಕೇಸ್​ಗಳು ಹಾಗೂ ಸಾವಿನ ಸಂಖ್ಯೆಯಲ್ಲಿ ಪ್ರಪಂಚದಲ್ಲೇ ಮೊದಲ ಸ್ಥಾನದಲ್ಲಿರುವ ಅಮೆರಿಕದಲ್ಲಿ ದಿನವೊಂದಕ್ಕೆ ನಿರಂತರವಾಗಿ ದಾಖಲಾಗುತ್ತಿದ್ದ​ ಪಾಸಿಟಿವ್​ ಪ್ರಕರಣಗಳ ಪ್ರಮಾಣದಲ್ಲಿ ಭಾರಿ ಇಳಿಕೆ ಕಂಡು ಬಂದಿದೆ.

ನವೆಂಬರ್​ 2020ರ ಬಳಿಕ ಅಮೆರಿಕದಲ್ಲಿ ಇದೇ ಮೊದಲ ಬಾರಿ 24 ಗಂಟೆಗಳಲ್ಲಿ ಕೇವಲ 40,428 ಕೋವಿಡ್ ಪಾಸಿಟಿವ್ ಕೇಸ್​ಗಳು ಪತ್ತೆಯಾಗಿವೆ. ಪ್ರಸ್ತುತ ಅಮೆರಿಕದಲ್ಲಿ ಪ್ರತಿನಿತ್ಯ ಸರಾಸರಿ 65 ಸಾವಿರ ಪ್ರಕರಣಗಳು ದಾಖಲಾಗುತ್ತಿವೆ.

ಇದನ್ನೂ ಓದಿ: ಲಸಿಕೆ ಕುರಿತ ವದಂತಿ ಹರಡಲು ಸೋಷಿಯಲ್​ ಮೀಡಿಯಾ ಬಳಕೆದಾರರೇ ಕಾರಣ: ಫೇಸ್‌ಬುಕ್

ನಿನ್ನೆ ಅಮೆರಿಕದಲ್ಲಿ ಒಟ್ಟಾರೆ 589 ಮಂದಿ ಕೋವಿಡ್​ನಿಂದ ಅಸುನೀಗಿದ್ದರು. ಇದು 2020ರ ಅಕ್ಟೋಬರ್​ 6ರ ಬಳಿಕ ದಾಖಲಾದ ಅತಿ ಕಡಿಮೆ ಸಾವಿನ ಸಂಖ್ಯೆಯಾಗಿದೆ. ದಿನೇ ದಿನೆ ಅಮೆರಿಕದಲ್ಲಿ ಸಾವು ಹಾಗೂ ಪಾಸಿಟಿವ್​ ಸಂಖ್ಯೆಯಲ್ಲಿನ ಇಳಿಕೆ ಕಾಣುತ್ತಿರುವುದು ಜೋ ಬೈಡನ್ ಸರ್ಕಾರ ಹಾಗೂ ಜನರು ನಿರಾಳರಾಗುವಂತೆ ಮಾಡಿದೆ.

ಅಮೆರಿಕದಲ್ಲಿ ಇದುವರೆಗೂ 3.8 ಕೋಟಿ ಜನರಿಗೆ ಲಸಿಕೆ ನೀಡಲಾಗಿದೆ. ಇನ್ನು 135 ಮಿಲಿಯನ್​​ ಅಂದರೆ 13 ಕೋಟಿ ಲಸಿಕೆಗಳನ್ನ ದೇಶಾದ್ಯಂತ ಹಂಚಿಕೆ ಮಾಡಲಾಗಿದೆ ಎಂದು ಅಮೆರಿಕ ರೋಗ ನಿಯಂತ್ರಣ ಇಲಾಖೆ ಸಿಡಿಎಸ್​ ಹೇಳಿದೆ. ಇಲ್ಲಿಯವರೆಗೆ ಒಟ್ಟು 3,01,38,586 ಕೇಸ್​ಗಳು ಹಾಗೂ 5,48,013 ಸಾವು ವರದಿಯಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.