ETV Bharat / international

ಟಿಕ್‌ ಟಾಕ್ ಹಾಗೂ ಚೀನಿ ಇತರೆ ಆ್ಯಪ್​ಗಳ ನಿಷೇಧದತ್ತ ಅಮೆರಿಕ ಗಮನಹರಿಸಿದೆ: ಪೊಂಪಿಯೊ

author img

By

Published : Jul 7, 2020, 4:10 PM IST

ಟಿಕ್ ಟಾಕ್ ಸೇರಿದಂತೆ ಚೀನಾದ ಆ್ಯಪ್‌ಗಳನ್ನು ನಿಷೇಧಿಸುವ ಬಗ್ಗೆ ಅಮೆರಿಕ ಗಮನಹರಿಸಿದೆ ಎಂದು ಮೈಕ್ ಪೊಂಪಿಯೊ ಹೇಳಿದ್ದಾರೆ.

tik tok
tik tok

ವಾಷಿಂಗ್ಟನ್: ಟಿಕ್ ಟಾಕ್ ಸೇರಿದಂತೆ ಚೀನಾದ ಸಾಮಾಜಿಕ ಮಾಧ್ಯಮ ಆ್ಯಪ್‌ಗಳನ್ನು ನಿಷೇಧಿಸುವ ಬಗ್ಗೆ ಅಮೆರಿಕ ಗಮನಹರಿಸಿದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೊ ಹೇಳಿದ್ದಾರೆ.

ಸೋಮವಾರ ನಡೆದ ಫಾಕ್ಸ್ ನ್ಯೂಸ್ ಸಂದರ್ಶನವೊಂದರಲ್ಲಿ, "ನಾವು ಇದನ್ನು ಬಹಳ ಗಂಭೀರವಾಗಿ ಪರಿಗಣಿಸುತ್ತಿದ್ದೇವೆ" ಎಂದು ಪೊಂಪಿಯೊ ಹೇಳಿದ್ದಾರೆ.

ನಿಮ್ಮ ಖಾಸಗಿ ಮಾಹಿತಿಗಳು ಸೇರಿದಂತೆ ನೀವು ಚೀನಿ ಕಮ್ಯುನಿಸ್ಟ್ ಪಕ್ಷದ ಕೈಯಲ್ಲಿ ಇರಬೇಕೆಂದು ಬಯಸಿದರೆ ಮಾತ್ರ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ ಎಂದು ಪೊಂಪಿಯೊ ಹೇಳಿದ್ದಾರೆ.

ಚೀನಾ ಮೂಲದ ಸ್ಟಾರ್ಟ್ಅಪ್ ಬೈಟ್ ಡ್ಯಾನ್ಸ್ ಒಡೆತನದ ಟಿಕ್ ಟಾಕ್​ಅನ್ನು ಯುಎಸ್ ನಾಯಕರು ಈಗಾಗಲೇ ರಾಷ್ಟ್ರೀಯ ಭದ್ರತೆಗೆ ಅಪಾಯಕಾರಿ ಎಂದು ಪದೇ ಪದೆ ಟೀಕಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.