ETV Bharat / international

ದೋಷಾರೋಪಣೆ ಪ್ರಕರಣ.. ಕಾನೂನು ವಿವರ ಸಲ್ಲಿಸಿದ ಟ್ರಂಪ್ ಪರ ವಕೀಲರ ತಂಡ..

author img

By

Published : Feb 3, 2021, 6:58 PM IST

ಈ ದೋಷಾರೋಪಣೆಯು ಮುಂದಿನ ವಾರದಿಂದ ಸೆನೆಟ್​​ನಲ್ಲಿ ವಿಚಾರಣೆ ಆರಂಭವಾಗುವ ಸಾಧ್ಯತೆ ಇದೆ. ಟ್ರಂಪ್ ಅಮೆರಿಕ ಇತಿಹಾಸದಲ್ಲಿಯೇ ಎರಡೆರಡು ಬಾರಿ ವಾಗ್ದಂಡನೆಗೊಳಗಾದ ಅಧ್ಯಕ್ಷ ಎಂಬ ಅಪಕೀರ್ತಿಗೆ ಒಳಗಾಗಿದ್ದಾರೆ..

US House Democrat
ಶ್ವೇತ ಭವನ

ವಾಷಿಂಗ್ಟನ್ ​​: ಟ್ರಂಪ್​ ಮೇಲಿನ ದೋಷಾರೋಪಣೆ ಪ್ರಕರಣ ಸಂಬಂಧದಲ್ಲಿ ಟ್ರಂಪ್ ಪರ ವಕೀಲರು ಕಾನೂನು ವಿವರಗಳನ್ನು ಸಲ್ಲಿಸಿದ್ದಾರೆ. ಈಗಾಗಲೇ ವಾಗ್ದಂಡನೆಯಿಂದ ಪಾರಾಗಲು ಟ್ರಂಪ್ ಸಿದ್ಧತೆ ನಡೆಸಿದ್ದು ಈ ಕುರಿತು ವಾದ ಮಾಡಲು ವಕೀಲರನ್ನ ನೇಮಿಸಿದ್ದಾರೆ.

ಕಳೆದ ವರ್ಷ ಶ್ವೇತ ಭವನದ ಮೇಲೆ ದಾಳಿ ವೇಳೆ ಪ್ರತಿಭಟನಾನಿರತರಿಗೆ ಪ್ರಚೋದನೆ ನೀಡಿದ್ದಾರೆ ಎಂಬ ದೋಷಾರೋಪ ಹೊತ್ತಿರುವ ಟ್ರಂಪ್ ವಿರುದ್ಧ ವಾಗ್ದಂಡನೆ ಅಸ್ತ್ರ ಹೂಡಲು ಡೆಮಾಕ್ರೆಟಿಕ್​​​ ಪಾರ್ಟಿ ಆಗ್ರಹಿಸಿದೆ.

ಅಲ್ಲದೆ ಅಧಿಕಾರದಿಂದ ಅವರನ್ನು ತಡೆ ಹಿಡಿದು, ಶಿಕ್ಷೆಗೆ ಗುರಿಪಡಿಸುವಂತೆಯೂ ಆಗ್ರಹಿಸಿವೆ. ಆದರೆ, ಈ ದೋಷಾರೋಪಣೆ ಅಸಂವಿಧಾನಿಕವಾಗಿದೆ. ಅಧಿಕಾರ ತೊರೆದಿರುವುದರಿಂದ ವಾಗ್ದಂಡನೆ ಸಂವಿಧಾನ ಬದ್ಧ ವಾದವಾಗಿಲ್ಲ ಎಂದು ಟ್ರಂಪ್ ಪರವಾಗಿ ವಾದಿಸಲಾಗಿದೆ.

ಈ ದೋಷಾರೋಪಣೆಯು ಮುಂದಿನ ವಾರದಿಂದ ಸೆನೆಟ್​​ನಲ್ಲಿ ವಿಚಾರಣೆ ಆರಂಭವಾಗುವ ಸಾಧ್ಯತೆ ಇದೆ. ಟ್ರಂಪ್ ಅಮೆರಿಕ ಇತಿಹಾಸದಲ್ಲಿಯೇ ಎರಡೆರಡು ಬಾರಿ ವಾಗ್ದಂಡನೆಗೊಳಗಾದ ಅಧ್ಯಕ್ಷ ಎಂಬ ಅಪಕೀರ್ತಿಗೆ ಒಳಗಾಗಿದ್ದಾರೆ.

ಇದನ್ನೂ ಓದಿ: $1.9 ಟ್ರಿಲಿಯನ್​ ಪ್ಯಾಕೇಜ್​ ಅನುಮೋದಿಸುವ ಪ್ರಕ್ರಿಯೆ ಆರಂಭಿಸಿದ ಬೈಡನ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.