ETV Bharat / international

ವಿಚಾರಣೆ ಹಂತದಲ್ಲಿ ಟ್ರಂಪ್ ದೋಷಾರೋಪಣೆ: ಫೆ. 9 ರಿಂದ ವಾದ - ಪ್ರತಿವಾದಗಳು ಪ್ರಾರಂಭ

author img

By

Published : Jan 27, 2021, 6:59 AM IST

2020 ರ ಚುನಾವಣೆಯಲ್ಲಿ ಅಧ್ಯಕ್ಷ ಜೋ ಬೈಡನ್​ ಅವರ ಗೆಲುವನ್ನು ಕಾಂಗ್ರೆಸ್ ಪರಿಶೀಲಿಸದಂತೆ ತಡೆಯಲು ಜನವರಿ 6 ರಂದು ಯುಎಸ್ ಕ್ಯಾಪಿಟಲ್ ಕಟ್ಟಡದಲ್ಲಿ ದಂಗೆಯನ್ನು ಮಾಡುವಂತೆ ಟ್ರಂಪ್​​ ಪ್ರಚೋದಿಸಿದ್ದಾರೆ ಎಂದು ಆರೋಪಿಸಿ ಸೋಮವಾರ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಅವರ ವಿರುದ್ಧ ದೋಷಾರೋಪಣೆಯನ್ನು ಮಂಡಿಸಿತು.

Trump impeachment trial underway
ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್​​ ಟ್ರಂಪ್

ವಾಷಿಂಗ್ಟನ್ ಡಿಸಿ: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್​​ ಟ್ರಂಪ್​​ ಅವರ ಎರಡನೇ ದೋಷಾರೋಪಣೆ ವಿಚಾರಣೆ ಮಂಗಳವಾರ ಸೆನೆಟ್​ನಲ್ಲಿ ಆರಂಭವಾಯಿತು. ಸೆನೆಟ್​ನ ಅಧ್ಯಕ್ಷ ಪ್ರೊ-ಟೆಂಪೋರ್ ಪ್ಯಾಟ್ರಿಕ್ ಲೀಹಿ ಅವರು ವಿಚಾರಣೆ ನಡೆಸಿದರು.

2020 ರ ಚುನಾವಣೆಯಲ್ಲಿ ಅಧ್ಯಕ್ಷ ಜೋ ಬೈಡನ್​ ಅವರ ಗೆಲುವನ್ನು ಕಾಂಗ್ರೆಸ್ ಪರಿಶೀಲಿಸದಂತೆ ತಡೆಯಲು ಜನವರಿ 6 ರಂದು ಯುಎಸ್ ಕ್ಯಾಪಿಟಲ್​ನಲ್ಲಿ ದಂಗೆ ಮಾಡಲು ಪ್ರಚೋದಿಸಿದ್ದಾರೆ ಎಂದು ಆರೋಪಿಸಿ ಸೋಮವಾರ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಟ್ರಂಪ್ ವಿರುದ್ಧ ದೋಷಾರೋಪಣೆ ಪಟ್ಟಿಯನ್ನು ಸಲ್ಲಿಸಿತ್ತು.

ಓದಿ:ಟ್ರಂಪ್ ದೋಷಾರೋಪಣೆ ಪ್ರಕರಣ; ವಿಚಾರಣೆಗೆ ವೇದಿಕೆ ಸಿದ್ಧ ಆದರೆ ನಿಗದಿಯಾಗಿಲ್ಲ ಸಮಯ

ಈ ಸಂಬಂಧ ಫೆಬ್ರವರಿ 9 ರಂದು ದೋಷಾರೋಪಣೆ ವಿಚಾರಣೆಯ ವಾದಗಳು ನಡೆಯಲಿವೆ. ಸೆನೆಟರ್‌ಗಳ ಪ್ರಮಾಣವಚನ ಸ್ವೀಕರಿಸಿದ ನಂತರ, ಟ್ರಂಪ್ ದೋಷಾರೋಪಣೆ ವಿಚಾರಣೆಯನ್ನು ಅಸಾಂವಿಧಾನಿಕ ಎಂದು ಘೋಷಿಸುವ ರಿಪಬ್ಲಿಕನ್ ಸೆನೆಟರ್ ರಾಂಡ್ ಪಾಲ್ ಅವರ ಪ್ರಯತ್ನವನ್ನು ಸೆನೆಟ್ ತಿರಸ್ಕರಿಸಿತು. ಪಾಲ್ ಅವರ ಸಾಂವಿಧಾನಿಕ ಕ್ರಮವನ್ನು ತಡೆಯಲು ಸೆನೆಟ್ 55-45 ಮತ ಚಲಾಯಿಸಿತು.

ದೋಷಾರೋಪಣೆ ವಿಚಾರಣೆಯಲ್ಲಿ ಟ್ರಂಪ್ ಅವರನ್ನು ಖುಲಾಸೆಗೊಳಿಸಲಾಗುವುದು ಎಂದು ಮತ ಎಣಿಕೆ ತೋರಿಸುತ್ತದೆ ಎಂದು ಪಾಲ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.