ETV Bharat / international

ಬ್ರಿಟನ್​ ರಾಣಿ ಎಲಿಜಬೆತ್‌ಗೆ ಕೊರೊನಾ ದೃಢ..

author img

By

Published : Feb 20, 2022, 9:55 PM IST

Queen Elizabeth
ರಾಣಿ ಎಲಿಜಬೆತ್‌

Queen Elizabeth Tested Positive: ಅವರು ಸೌಮ್ಯವಾದ ಶೀತದಂತಹ ಲಕ್ಷಣಗಳನ್ನು ಹೊಂದಿದ್ದು, ಆರೋಗ್ಯ ಸುಧಾರಿಸುವವರೆಗೆ ತಮ್ಮ ಕರ್ತವ್ಯವನ್ನು ಕಡಿಮೆ ಮಾಡಲಿದ್ದಾರೆ. ಎಲಿಜಬೆತ್ ಪ್ರಸ್ತುತ ವಿಂಡ್ಸರ್ ಕ್ಯಾಸಲ್‌ನಲ್ಲಿರುವ ತನ್ನ ಮನೆಯಲ್ಲಿ ತಂಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಲಂಡನ್​: ಬ್ರಿಟನ್ ರಾಣಿ ಎಲಿಜಬೆತ್ ಅವರಿಗೆ ಕೊರೊನಾ ಸೋಂಕು ತಗುಲಿದೆ. ಈ ಬಗ್ಗೆ ಬಕಿಂಗ್ಹ್ಯಾಮ್ ಅರಮನೆಯು ಮಾಹಿತಿಯನ್ನು ಬಹಿರಂಗಪಡಿಸಿದೆ.

ಅವರು ಸೌಮ್ಯವಾದ ಶೀತದಂತಹ ಲಕ್ಷಣಗಳನ್ನು ಹೊಂದಿದ್ದು, ಆರೋಗ್ಯ ಸುಧಾರಿಸುವವರೆಗೆ ತಮ್ಮ ಕರ್ತವ್ಯವನ್ನು ಕಡಿಮೆ ಮಾಡಲಿದ್ದಾರೆ. ಎಲಿಜಬೆತ್ ಪ್ರಸ್ತುತ ವಿಂಡ್ಸರ್ ಕ್ಯಾಸಲ್‌ನಲ್ಲಿರುವ ತನ್ನ ಮನೆಯಲ್ಲಿ ತಂಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಸ್ತುತ ಇಂಗ್ಲೆಂಡ್‌ನಲ್ಲಿ ಯಾರಾದರೂ ಕೊರೊನಾದಿಂದ ಬಳಲುತ್ತಿದ್ದರೆ, ಅವರಿಗೆ 10 ದಿನಗಳ ಸ್ವಯಂ ಲಾಕ್​ಡೌನ್​ ಕಡ್ಡಾಯವಾಗಿದೆ. 6,7 ದಿನಗಳಲ್ಲಿ ಎರಡು ಬಾರಿ ನೆಗೆಟಿವ್ ಬಂದರೆ, ಕ್ವಾರಂಟೈನ್ ಅನ್ನು ತೆಗೆದು ಹಾಕಬಹುದು.

ಎಲಿಜಬೆತ್ ಅವರ ಮಗ, ಉತ್ತರಾಧಿಕಾರಿ ಪ್ರಿನ್ಸ್ ಚಾರ್ಲ್ಸ್ ಮತ್ತು ಅವರ ಪತ್ನಿ ಕ್ಯಾಮಿಲ್ಲಾ ಕೂಡ ಈ ತಿಂಗಳ ಆರಂಭದಲ್ಲಿ ಕೊರೊನಾದಿಂದ ನಿಧನರಾದರು.

ಓದಿ: ಉತ್ತರ ಕೊರಿಯಾದಲ್ಲಿ ಆಹಾರ ಸಮಸ್ಯೆ ಎದುರಿಸಲು ಕಿಮ್ ಸಜ್ಜು: ಬೃಹತ್ ಗ್ರೀನ್​ಹೌಸ್ ನಿರ್ಮಾಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.