ಡಬಲ್​ ಇಂಜಿನ್ ಜೆಟ್ ವಿಮಾನ ಅಪಘಾತ.. ಆರು ಮಂದಿ ದುರ್ಮರಣ!

author img

By

Published : Jul 29, 2021, 6:53 AM IST

ಡಬಲ್​ ಎಂಜಿನ್ ಜೆಟ್ ವಿಮಾನ ಅಪಘಾತ

ಅಮೆರಿಕದ ಟ್ರಕ್ರಿಯಲ್ಲಿ ವಿಮಾನ ಅಪಘಾತ ಸಂಭವಿಸಿ ಆರು ಜನರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಟ್ರಕ್ರಿ (ಅಮೆರಿಕ): ಲೇಕ್ ತಾಹೋ ಪ್ರದೇಶದ ಗಾಲ್ಫ್ ಕೋರ್ಸ್ ಬಳಿ ಡಬಲ್​ ಇಂಜಿನ್ ಜೆಟ್ ವಿಮಾನವು ಅಪಘಾತ ಸಂಭವಿಸಿದ್ದು, ಆರು ಜನರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೊಂಬಾರ್ಡಿಯರ್​ ಸಿಎಲ್​-600 ಎಂಬ ವಿಮಾನವು ಅರಣ್ಯವೊಂದರಲ್ಲಿ ಅಪಘಾತಕ್ಕೀಡಾಗಿದೆ.

ಈ ವಿಮಾನವು ಇಡಾಹೊದ ಕೊಯೂರ್ ಡಿ ಅಲೀನ್​ನಿಂದ ಹೊರಟಿತ್ತು. ಟ್ರಕೀ-ತಾಹೋ ವಿಮಾನ ನಿಲ್ದಾಣದಲ್ಲಿ ವಿಮಾನ ಇಳಿಸಲು ಪೈಲಟ್ ಯತ್ನಿಸಿದ್ರೂ, ಸಾಧ್ಯವಾಗದೇ ದುರಂತ ಸಂಭವಿಸಿದೆ ಎಂದು ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ತಿಳಿಸಿದೆ.

ಇದನ್ನೂ ಓದಿ: ಭಾರತ - ಅಮೆರಿಕ ಸಂಬಂಧ ವೃದ್ಧಿಸುವುದು ನಮ್ಮ ರಾಷ್ಟ್ರೀಯ ಹಿತಾಸಕ್ತಿ: ಡೊನಾಲ್ಡ್​ ಲು

ಘಟನೆಗೆ ಕಾರಣ ಏನೆಂಬುದು ಈವರೆಗೆ ತಿಳಿದು ಬಂದಿಲ್ಲ, ಅಪಘಾತ ಬಗ್ಗೆ ತನಿಖೆ ನಡೆಸಲು ಇಬ್ಬರು ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.