ETV Bharat / international

ಭಾರತ - ಅಮೆರಿಕ ಸಂಬಂಧ ವೃದ್ಧಿಸುವುದು ನಮ್ಮ ರಾಷ್ಟ್ರೀಯ ಹಿತಾಸಕ್ತಿ: ಡೊನಾಲ್ಡ್​ ಲು

author img

By

Published : Jul 29, 2021, 6:36 AM IST

ಡೊನಾಲ್ಡ್​ ಲು
ಡೊನಾಲ್ಡ್​ ಲು

ಇತ್ತೀಚಿನ ದಿನಗಳಲ್ಲಿ ಭಾರತ-ಅಮೆರಿಕ ಸಂಬಂಧ ವೃದ್ಧಿಸುತ್ತಿದ್ದು, ಮತ್ತಷ್ಟು ಬಲ ಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ದಕ್ಷಿಣ ಏಷ್ಯಾ ವ್ಯವಹಾರಗಳ ಸಹಾಯಕ ರಾಜ್ಯ ಕಾರ್ಯದರ್ಶಿಯಾಗಿ ನಾಮನಿರ್ದೇಶನಗೊಂಡಿರುವ ಡೊನಾಲ್ಡ್ ಲು ಹೇಳಿದ್ದಾರೆ.

ವಾಷಿಂಗ್ಟನ್: ಭಾರತ- ಅಮೆರಿಕ ಮಧ್ಯೆ ಆರ್ಥಿಕತೆ ಮತ್ತು ಸಂಬಂಧ ವೃದ್ಧಿಸುವುದು ನಮ್ಮ ರಾಷ್ಟ್ರೀಯ ಹಿತಾಸಕ್ತಿಯಾಗಿದೆ ಎಂದು ದಕ್ಷಿಣ ಏಷ್ಯಾಗೆ ನಾಮ ನಿರ್ದೇಶನಗೊಂಡಿರುವ ಹಿರಿಯ ಯುಎಸ್ ರಾಜತಾಂತ್ರಿಕರು ಮತ್ತು ಮಧ್ಯ ಏಷ್ಯಾ ನಾಯಕರು ಅಭಿಪ್ರಾಯ ಪಟ್ಟಿದ್ದಾರೆ

ದಕ್ಷಿಣ ಏಷ್ಯಾ ವ್ಯವಹಾರಗಳ ಸಹಾಯಕ ರಾಜ್ಯ ಕಾರ್ಯದರ್ಶಿಯಾಗಿ ನಾಮನಿರ್ದೇಶನಗೊಂಡಿರುವ ಡೊನಾಲ್ಡ್ ಲು, ಸೆನೆಟ್ ವಿದೇಶಾಂಗ ಸಮಿತಿಯ ಸದಸ್ಯರಿಗೆ ಹೇಳಿದ್ದಾರೆ. ಭಾರತದೊಂದಿಗೆ ನಮ್ಮ ಕಾರ್ಯತಂತ್ರ, ಆರ್ಥಿಕತೆ ವೇಗವಾಗಿ ಬೆಳೆಯುತ್ತಿದೆ. ಇದನ್ನು ಮತ್ತಷ್ಟು ಬಲಪಡಿಸುವುದು ನಮ್ಮ ರಾಷ್ಟ್ರೀಯ ಹಿತಾಸಕ್ತಿಯಾಗಿದೆ. ಆದರೆ, ಮಾನವ ಹಕ್ಕುಗಳು ಮತ್ತು ಪ್ರಜಾಪ್ರಭುತ್ವ ಮೌಲ್ಯಗಳ ಬಗ್ಗೆ ನೇರವಾಗಿ ಮಾತಾಡಬೇಕಿದೆ ಎಂದರು.

ಭಾರತ-ಅಮೆರಿಕ ಎರಡು ಪ್ರಜಾಪ್ರಭುತ್ವ ರಾಷ್ಟ್ರಗಳು. ಪ್ರಜಾಪ್ರಭುತ್ವವು ಶಾಂತಿ, ಸ್ಥಿರತೆ ಮತ್ತು ವೈಯಕ್ತಿಕ ಸ್ವಾತಂತ್ರ್ಯಗಳನ್ನು ಉತ್ತೇಜಿಸುತ್ತವೆ ಎಂದು ಲು ತಿಳಿಸಿದ್ದಾರೆ. ವಿದೇಶಾಂಗ ಇಲಾಖೆಯಲ್ಲಿ 30 ವರ್ಷಗಳ ಅವಧಿಯಲ್ಲಿ ಭಾರತ, ಪಾಕಿಸ್ತಾನ ಮತ್ತು ಮಧ್ಯ ಏಷ್ಯಾದಲ್ಲಿ ಕೆಲಸ ಮಾಡಿದ್ದಾರೆ.

ಇಂಡೋ-ಅಮೆರಿಕ ಎರಡು ದೇಶಗಳು ಮುಕ್ತ ಮಾರುಕಟ್ಟೆಯಾಗಿದ್ದು, ನಾವು ಸ್ಥಿರ ಮತ್ತು ಅಂತರ್ಗತ ಜಾಗತಿಕ ಆರ್ಥಿಕತೆಯನ್ನು ನಿರ್ಮಿಸಬಹುದು. ವಿಶ್ವದ ಶೇಕಡಾ 60 ರಷ್ಟು ಲಸಿಕೆಗಳನ್ನು ಭಾರತ ಉತ್ಪಾದಿಸುತ್ತಿದ್ದು, ಕೋವಿಡ್ ವಿರುದ್ಧದ ಹೋರಾಟದಲ್ಲಿ ನಿರ್ಣಾಯಕ ಪಾತ್ರವಹಿಸಿದೆ. ಜಾಗತಿಕ ಬಿಕ್ಕಟ್ಟಾಗಿರುವ ಕೋವಿಡ್​ ನಿರ್ಮೂಲನೆಗಾಗಿ ಭಾರತದೊಂದಿಗೆ ಅಮೆರಿಕ ಕೆಲಸ ಮಾಡಲಿದೆ. ಹವಾಮಾನ ಬಿಕ್ಕಟ್ಟನ್ನು ಎದುರಿಸಲು ನಾವು ಪಾಲುದಾರರಾಗಿ ಕೆಲಸ ಮಾಡಲು ಬದ್ಧನಾಗಿದ್ದೇನೆ ಎಂದಿದ್ದಾರೆ.

ಇದನ್ನೂ ಓದಿ: "ಕ್ಯಾಪಿಟಲ್​ ದಾಳಿಯಲ್ಲಿ ವರ್ಣಭೇದ ನೀತಿ ಕಂಡುಬಂತು": ಕಹಿ ಘಟನೆ ನೆನೆದ ಯುಎಸ್​ ಪೊಲೀಸರು

ಸೆನೆಟ್ ವಿದೇಶಾಂಗ ಸಮಿತಿಯ ಅಧ್ಯಕ್ಷ ಸೆನೆಟರ್ ರಾಬರ್ಟ್ ಮೆನೆಂಡೆಜ್ ಮಾತನಾಡಿ, ಅಮೆರಿಕದೊಂದಿಗೆ ಭಾರತದ ಸಂಬಂಧ ವೃದ್ಧಿಸಿದೆ. ಬಾಂಗ್ಲಾದೇಶದಲ್ಲಿ, ಪ್ರತಿ ವಲಯದ ಕಾರ್ಮಿಕರು ಸುರಕ್ಷಿತ ಪರಿಸ್ಥಿತಿಗಳಲ್ಲಿ ಕೆಲಸ ಮಾಡಬಹುದೆಂದು ಖಚಿತಪಡಿಸಿಕೊಳ್ಳಲು ನಾನು ಕಾರ್ಮಿಕ ಹಕ್ಕುಗಳಿಗಾಗಿ ಮತ್ತು ಒಕ್ಕೂಟಗಳ ಸ್ಥಾಪನೆಗಾಗಿ ಒತ್ತಾಯಿಸಿದ್ದೇನೆ ಎಂದರು.

ಭಯೋತ್ಪಾದನೆ ನಿಗ್ರಹ ಮತ್ತು ಭದ್ರತೆಯ ಪ್ರಿಸ್ಮ್ ಮೂಲಕ ಪಾಕಿಸ್ತಾನದೊಂದಿಗೆ ಅಮೆರಿಕ 20 ವರ್ಷಗಳಿಗೂ ಅಧಿಕ ಸಮಯದಿಂದ ಸಂಬಂಧ ಹೊಂದಿದೆ ಎಂದು ಲು ತನ್ನ ಸಾಕ್ಷ್ಯದಲ್ಲಿ ಹೇಳಿದ್ದಾರೆ.

ಮಾನವ ಹಕ್ಕುಗಳು, ಧಾರ್ಮಿಕ ಸ್ವಾತಂತ್ರ್ಯ, ಭಯೋತ್ಪಾದನೆ ನಿಗ್ರಹದ ಸಹಕಾರ ಮತ್ತು ಅಮೆರಿಕದ ಹೂಡಿಕೆದಾರರಿಗೆ ಸುಧಾರಿತ ವ್ಯಾಪಾರ ವಾತಾವರಣವನ್ನು ಹೆಚ್ಚಿಸಲು ಪಾಕಿಸ್ತಾನದೊಂದಿಗಿನ ನಮ್ಮ ಸುದೀರ್ಘ ಇತಿಹಾಸವನ್ನು ನಾನು ನಿರ್ಮಿಸುತ್ತೇನೆ ಎಂದು ಡೊನಾಲ್ಡ್ ಲು ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.