ETV Bharat / international

NASA Seeks Ideas: ಚಂದ್ರನ ಮೇಲೆ ಪರಮಾಣು ವಿದ್ಯುತ್ ಸ್ಥಾವರ ಇಳಿಸಲು ಐಡಿಯಾ ಕೇಳಿದ ನಾಸಾ..

author img

By

Published : Nov 20, 2021, 7:15 AM IST

ಪರಮಾಣು ವಿದ್ಯುತ್ ಸ್ಥಾವರವನ್ನು ಅನ್ನು ಭೂಮಿಯ ಮೇಲೆ ನಿರ್ಮಿಸಲಾಗುತ್ತದೆ. ಬಳಿಕ ಅದನ್ನು ಚಂದ್ರನ ಮೇಲೆ ಇಳಿಸಲು ಸಲಹೆ, ಐಡಿಯಾಗಳು ಇದ್ದರೆ ಕೊಡಿ ಎಂದು ನಾಸಾ ಕೇಳಿದೆ.

NASA
NASA

ಬೋಯಿಸ್ (ಅಮೆರಿಕ): ಚಂದ್ರನ ಮೇಲೆ ನ್ಯೂಕ್ಲಿಯರ್ ರಿಯಾಕ್ಟರ್ ಅಥವಾ ಪರಮಾಣು ವಿದ್ಯುತ್ ಸ್ಥಾವರವನ್ನು ಹೇಗೆ ಇಳಿಸಬೇಕು (NASA seeks ideas for a nuclear reactor on the moon) ಎಂಬುದರ ಕುರಿತು ಯಾರಿಗಾದರೂ ಒಳ್ಳೆಯ ಐಡಿಯಾಗಳು ಇದ್ದರೆ ನೀಡಬಹುದು ಎಂದು ನಾಸಾ ಹಾಗೂ ಅಮೆರಿಕ​ ಸರ್ಕಾರ ಕೇಳಿದೆ.

ಈ ದಶಕದ ಅಂತ್ಯದ ವೇಳೆಗೆ ಚಂದ್ರನ ಮೇಲಿನ ಕಾರ್ಯಾಚರಣೆಗಾಗಿ ಸೂರ್ಯನನ್ನೇ ಸ್ವತಂತ್ರ ವಿದ್ಯುತ್ ಮೂಲವನ್ನಾಗಿ (sun - independent power source) ಸ್ಥಾಪಿಸಲು ಯುಎಸ್​ ಇಂಧನ ಇಲಾಖೆಯ ಇಡಾಹೊ ರಾಷ್ಟ್ರೀಯ ಪ್ರಯೋಗಾಲಯ ( Idaho National Laboratory) ಕೂಡ ನಾಸಾದೊಂದಿಗೆ ಕೈಜೋಡಿಸಿದೆ. ಇಡಾಹೊ, ಇದು ರಾಷ್ಟ್ರದ ಉನ್ನತ ಫೆಡರಲ್ ಪರಮಾಣು ಸಂಶೋಧನಾ ಪ್ರಯೋಗಾಲಯವಾಗಿದೆ.

ಇಲ್ಲೇ ರಿಯಾಕ್ಟರ್​​​ ನಿರ್ಮಿಸಿ ಚಂದ್ರನಲ್ಲಿಗೆ ರವಾನೆ

ರಿಯಾಕ್ಟರ್ ಅನ್ನು ಭೂಮಿಯ ಮೇಲೆ ನಿರ್ಮಿಸಲಾಗುತ್ತದೆ ಮತ್ತು ನಂತರ ಚಂದ್ರನಿಗೆ ಕಳುಹಿಸಲಾಗುತ್ತದೆ. ಈ ಕಾರ್ಯಾಚರಣೆಯು ಯುರೇನಿಯಂ - ಇಂಧನದ ರಿಯಾಕ್ಟರ್ ಕೋರ್, ಪರಮಾಣು ಶಕ್ತಿಯನ್ನು ಬಳಸಬಹುದಾದ ಶಕ್ತಿಯನ್ನಾಗಿ ಪರಿವರ್ತಿಸುವ ವ್ಯವಸ್ಥೆಯಾಗಿದೆ.

ರಿಯಾಕ್ಟರ್ ಅನ್ನು ತಂಪಾಗಿರಿಸಲು ಉಷ್ಣ ನಿರ್ವಹಣಾ ವ್ಯವಸ್ಥೆ ಮತ್ತು 40 ಕಿಲೋವ್ಯಾಟ್‌ಗಳಿಗಿಂತ ಕಡಿಮೆಯಿಲ್ಲದ ನಿರಂತರ ವಿದ್ಯುತ್​ ಉತ್ಪಾದಿಸಬೇಕಿದೆ. ಚಂದ್ರನ ಅಂಗಳದಲ್ಲಿ ಸುಮಾರು 10 ವರ್ಷಗಳ ಕಾಲಕ್ಕಿಂತ ಕಡಿಮೆ ಇಲ್ಲದಂತೆ ಈ ವಿದ್ಯುತ್​ ವಿತರಣಾ ವ್ಯವಸ್ಥೆಯನ್ನು ಸ್ಥಾಪಿಸಬೇಕೆಂಬುದು ನಾಸಾ ಬಯಕೆಯಾಗಿದೆ.

ಇದನ್ನೂ ಓದಿ: ನಾಸಾದ ಉಪಗ್ರಹದೊಂದಿಗೆ ಚಂದ್ರಯಾನ-2 ಉಪಗ್ರಹದ ಡಿಕ್ಕಿ ತಪ್ಪಿಸಿದ ಇಸ್ರೋ

ಮುಂಬರುವ ಯೋಜನೆಗಳಿಗೆ ಚಂದ್ರನ ನೆಲ ಬಳಕೆಗೆ ನಾಸಾ ಯೋಚನೆ

ಚಂದ್ರನ ವಾತಾವರಣದಲ್ಲಿ 10 ವರ್ಷಗಳ ಕಾಲ ವಿದ್ಯುತ್ ಶಕ್ತಿ ಮುಂದುವರೆಯಬೇಕು. ಮಾನವನ ಸಹಾಯವಿಲ್ಲದೇ ಅದು ತನ್ನನ್ನು ತಾನೇ ಆಫ್ ಮಾಡಲು ಮತ್ತು ಆನ್ ಮಾಡಲು ಸಾಧ್ಯವಾಗಬೇಕು. ಚಂದ್ರನ ಲ್ಯಾಂಡರ್‌ನ ಡೆಕ್‌ನಿಂದ ಇದು ಕಾರ್ಯನಿರ್ವಹಿಸಬೇಕು. ಹೀಗೆ ಇತರ ಕೆಲವು ಅವಶ್ಯಕತೆಗಳು ಈ ಕಾರ್ಯಾಚರಣೆಗೆ ಬೇಕೆಂದು ನಾಸಾ ತಿಳಿಸಿದ್ದು, ಇದಕ್ಕಾಗಿ ಐಡಿಯಾಗಳಿದ್ದರೆ ಕೊಡುವಂತೆ ಕೇಳಿದೆ.

ಚಂದ್ರನ ಮೇಲೆ ವಿಶ್ವಾಸಾರ್ಹ, ಉನ್ನತ - ಶಕ್ತಿ ವ್ಯವಸ್ಥೆಯನ್ನು ಒದಗಿಸುವುದು ಮಾನವ ಬಾಹ್ಯಾಕಾಶ ಪರಿಶೋಧನೆಯಲ್ಲಿ ಪ್ರಮುಖ ಮುಂದಿನ ಹಂತವಾಗಿದೆ ಮತ್ತು ಅದನ್ನು ಸಾಧಿಸುವುದು ನಮ್ಮ ಗ್ರಹಿಕೆಯಲ್ಲಿದೆ ಎಂದು ಲ್ಯಾಬ್‌ನ ಫಿಸನ್​ ಸರ್ಫೇಸ್​ ಪವರ್​ ಪ್ರಾಜೆಕ್ಸ್​ ಮುಖ್ಯಸ್ಥ ಸೆಬಾಸ್ಟಿಯನ್ ಕಾರ್ಬಿಸಿರೊ ತಿಳಿಸಿದ್ದಾರೆ.

ಚಂದ್ರನ ಮೇಲೆ ಮಾನವ

ಚಂದ್ರನ ಮೇಲೆ ನಿರಂತರ ಮಾನವ ಉಪಸ್ಥಿತಿ ಬೆಂಬಲಿಸುವಲ್ಲಿ ಯಶಸ್ವಿಯಾದರೆ, ಮುಂದಿನ ಉದ್ದೇಶ ಮಂಗಳವಾಗಿರುತ್ತದೆ. ವಿದಳನ ಮೇಲ್ಮೈ ಶಕ್ತಿಯು ಚಂದ್ರ ಅಥವಾ ಮಂಗಳದ ಮೇಲಿನ ಪರಿಸರ ಪರಿಸ್ಥಿತಿಗಳ ಹೊರತಾಗಿಯೂ ನಿರಂತರ, ಹೇರಳವಾದ ಶಕ್ತಿಯನ್ನು ಒದಗಿಸುತ್ತದೆ ಎಂದು ನಾಸಾ ಹೇಳುತ್ತದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.