ETV Bharat / international

ಸಂಸ್ಕೃತದಲ್ಲಿ ಟ್ವೀಟ್​ ಮಾಡಿದ ಅಮೇರಿಕಾದ ಪ್ರಖ್ಯಾತ ಸಿಂಗರ್​ ಲೇಡಿ ಗಾಗ​!

author img

By

Published : Oct 21, 2019, 3:04 AM IST

Lady Gaga

ವಿಶ್ವದಾದ್ಯಂತ ಅಭಿಮಾನಿ ಬಳಗ ಹೊಂದಿರುವ ಸ್ಟೆಫಾನಿ ಜೊನ್ನೆ ಏಂಜಲೀನಾ ಜರ್ಮನೊಟ್ಟ ಲೇಡಿ ಗಾಗ ಎಂದು ಪ್ರಸಿದ್ದರಾಗಿದ್ದಾರೆ. ಟ್ವಿಟರ್​ನಲ್ಲಿ ಸುಮಾರು 7.9 ಕೋಟಿ ಹಿಂಬಾಲಕರನ್ನು ಹೊಂದಿರುವ ಲೇಡಿ ಗಾಗ ಇದ್ದಕ್ಕಿಂದಂತೆ ಸಂಸ್ಕೃತದಲ್ಲಿ ಟ್ವೀಟ್​ ಮಾಡಿರುವುದು ಅಭಿಮಾನಿಗಳಿಗೆ ಆಶ್ಚರ್ಯ ತಂದಿದೆ.

ಮುಂಬೈ: ಪ್ರಪಂಚದಾದ್ಯಂತ ತನ್ನ ಅದ್ಭುತ ಗಾಯನದಿಂದ ಪ್ರಸಿದ್ದವಾಗಿರುವ ಅಮೇರಿಕಾದ ಖ್ಯಾತ ಸಿಂಗರ್​ ಭಾನುವಾರ ಸಂಸ್ಕೃತ ಭಾಷೆಯಲ್ಲಿ ಟ್ವೀಟ್​ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ವಿಶ್ವದಾದ್ಯಂತ ಅಭಿಮಾನಿ ಬಳಗ ಹೊಂದಿರುವ ಸ್ಟೆಫಾನಿ ಜೊನ್ನೆ ಏಂಜಲೀನಾ ಜರ್ಮನೊಟ್ಟ ಲೇಡಿ ಗಾಗ ಎಂದು ಪ್ರಸಿದ್ದರಾಗಿದ್ದಾರೆ. ಟ್ವಿಟರ್​ನಲ್ಲಿ ಸುಮಾರು 7.9 ಕೋಟಿ ಹಿಂಬಾಲಕರನ್ನು ಹೊಂದಿರುವ ಲೇಡಿ ಗಾಗ ಇದ್ದಕ್ಕಿಂದಂತೆ ಸಂಸ್ಕೃತದಲ್ಲಿ ಟ್ವೀಟ್​ ಮಾಡಿರುವುದು ಅಭಿಮಾನಿಗಳಿಗೆ ಆಶ್ಚರ್ಯ ತಂದಿದೆ.

  • Lokah Samastah Sukhino Bhavantu

    — Lady Gaga (@ladygaga) October 19, 2019 " class="align-text-top noRightClick twitterSection" data=" ">

ಲೇಡಿ ಗಾಗ ಭಾನುವಾರ ತಮ್ಮ ಟ್ವಿಟರ್​ನಲ್ಲಿ" ಲೋಕಾಃ ಸಮಸ್ತಾಃ ಸುಖಿನೋ ಭವಂತು" ಎಂದು ಟ್ವೀಟ್​ ಮಾಡಿದ್ದಾರೆ. ಇದು ಸಂಸ್ಕೃತ ಭಾಷೆ ಎಂದು ತಿಳಿಯದ ಅವರ ಫಾಲೋವರ್ಸ್​ ಆ ವಾಕ್ಯದ ಅರ್ಥ ತಿಳಿಯದೇ ಗೊಂದಲಕ್ಕೀಡಾಗಿದ್ದಾರೆ. ಆದರೆ ಭಾರತದ ಅಭಿಮಾನಿಗಳು ಅ ವಾಕ್ಯದ ಅರ್ಥವೇನು ಎಂಬುದನ್ನು ತಿಳಿಸಿದ್ದಾರೆ.

ಲೋಕಾಃ ಸಮಸ್ತಾಃ ಸುಖಿನೋ ಭವಂತು ಎಂದರೆ ಪ್ರಪಂಚದ ಸಕಲ ಜೀವರಾಶಿಗಳಿಗೂ ಸುಖ ಶಾಂತಿ ದೊರೆಯಲಿ ಎಂಬುದಾಗಿದೆ. ಆದರೆ ಈ ಸಂಸ್ಕೃತಿಯ ವಾಕ್ಯವನ್ನು ಲೇಡಿಗಾಗ ಏಕೆ ಟ್ವೀಟ್​ ಮಾಡಿಕೊಂಡಿದ್ದಾರೆ ಎಂಬುದು ಗೊಂದಲವಾಗಿದೆ. ಆದರೆ ಭಾರತೀಯರು ಮಾತ್ರ ಅಮೆರಿಕಾ ಗಾಯಕಿ ಸಂಸ್ಕೃತ ಭಾಷೆಯಲ್ಲಿ ಟ್ವೀಟ್​ ಮಾಡಿರುವುದಕ್ಕೆ ಫಿದಾ ಆಗಿದ್ದಾರೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.