ETV Bharat / international

ದುರಂತಕ್ಕೀಡಾದ ಬೋಟ್: 46 ವಲಸಿಗರು ನೀರು ಪಾಲು, 84 ಮಂದಿಯ ರಕ್ಷಣೆ

author img

By

Published : Jul 4, 2021, 2:14 PM IST

At least 43 migrants drown off Tunisia; 84 rescued
ಟುನೇಶಿಯಾ ಬೋಟ್ ದುರಂತ

ಲಿಬಿಯಾದ ಜುವಾರದಿಂದ ಇಟಲಿ ಕಡೆಗೆ ಸಂಚರಿಸುತ್ತಿದ್ದ ವಲಸಿಗರನ್ನು ಹೊತ್ತ ಬೋಟ್ ಟುನೇಶಿಯಾ ಕರಾವಳಿಯಲ್ಲಿ ದುರಂತಕ್ಕೀಡಾಗಿದೆ.

ಟುನಿಶ್(ಆಫ್ರಿಕಾ) : ಇಲ್ಲಿನ ಕರಾವಳಿಯಲ್ಲಿ ಬೋಟ್ ಮುಳುಗಿ 43 ವಲಸಿಗರು ನೀರು ಪಾಲಾಗಿರುವ ಘಟನೆ ಶನಿವಾರ ನಡೆದಿದೆ. 84 ಜನರನ್ನು ರಕ್ಷಣೆ ಮಾಡಲಾಗಿದೆ ಎಂದು ಟುನೇಶಿಯಾ ರೆಡ್ ಕ್ರಸೆಂಟ್ ಹೇಳಿದೆ.

ಟುನೇಶಿಯಾ ರೆಡ್ ಕ್ರಸೆಂಟ್ ಮುಖ್ಯಸ್ಥ ಮೊಂಗಿ ಸ್ಲಿಮ್ ಮಾಧ್ಯಮಗಳಿಗೆ ನೀಡಿರುವ ಮಾಹಿತಿ ಪ್ರಕಾರ, ಒಟ್ಟು 127 ವಲಸಿಗರನ್ನು ಹೊತ್ತ ಬೋಟ್ ಶುಕ್ರವಾರ ಲಿಬಿಯಾದ ಕರಾವಳಿ ನಗರವಾದ ಜುವಾರಾದಿಂದ ಹೊರಟು ಮೆಡಿಟರೇನಿಯನ್ ಸಮುದ್ರವನ್ನು ದಾಟಿ, ಇಟಲಿ ಕಡೆಗೆ ಸಂಚರಿಸುತ್ತಿತ್ತು. ಈ ವೇಳೆ ಟುನೇಶಿಯಾ ಕರಾವಳಿಯಲ್ಲಿ ಮುಳುಗಡೆಯಾಗಿದೆ. ದುರಂತಕ್ಕೀಡಾದ ಬೋಟ್​​ನಲ್ಲಿ ಸುಡಾನ್​ನ 46, ಎರಿಟ್ರಿಯಾದ 16 ಮತ್ತು ಬಂಗಾಳದ 16 ವಲಸಿಗರು ಇದ್ದರು ಎಂದು ತಿಳಿದುಬಂದಿದೆ.

ಒಟ್ಟು 84 ವಲಸಿಗರನ್ನು ಮೀನುಗಾರರು ರಕ್ಷಿಸಿದ್ದಾರೆ ಎಂದು ರಕ್ಷಣಾ ಸಚಿವಾಲಯದ ವಕ್ತಾರ ಮೊಹಮ್ಮದ್ ಜೆಕ್ರಿ ಹೇಳಿದ್ದಾರೆ. ಇತರ ವಲಸಿಗರು ಮುಳುಗಿರುವ ಬಗ್ಗೆ ಅವರು ಖಚಿತಪಡಿಸಿಲ್ಲ.

ಓದಿ : ಯೋಧರನ್ನು ಹೊತ್ತೊಯ್ಯುತ್ತಿದ್ದ ಸೇನಾ ವಿಮಾನ ಪತನ : 17 ಸಾವು, 40 ಮಂದಿ ರಕ್ಷಣೆ

ಲಿಬಿಯಾ ಕರಾವಳಿಯಿಂದ ಅಗಾಗ ಇದೇ ರೀತಿ ಹೊರಡುವ ವಲಸಿಗರು, ಅಪಾಯಕಾರಿ ಮೆಡಿಟರೇನಿಯನ್ ಸಮುದ್ರವನ್ನು ದಾಟುವ ಪ್ರಯತ್ನ ಮಾಡುತ್ತಾರೆ. ಬೇಸಿಗೆಯ ವ್ಯತಿರಿಕ್ತ ಹವಾಮಾನದ ನಡುವೆಯೂ ಯುರೋಪ್ ತಲುಪಲು ಹಲವು ಕಳ್ಳಸಾಗಣೆದಾರರು ಪ್ರಯತ್ನಿಸುತ್ತಾರೆ. ಈ ವೇಳೆ ದೋಣಿ, ಹಡಗುಗಳು ದುರಂತಕ್ಕೀಡಾಗುತ್ತವೆ ಎಂದು ರಕ್ಷಣಾ ಸಚಿವಾಲಯದ ವಕ್ತಾರರು ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.