ETV Bharat / entertainment

3 ಮಿಲಿಯನ್​ ವೀಕ್ಷಣೆ ಕಂಡ 'ಕಬ್ಜ' ಚಿತ್ರದ ಮಾಸ್ ಸಾಂಗ್​: ರೆಟ್ರೋ ಅವತಾರದಲ್ಲಿ ಅಬ್ಬರಿಸಿದ ರಿಯಲ್ ಸ್ಟಾರ್

author img

By

Published : Feb 6, 2023, 1:09 PM IST

3 ಮಿಲಿಯನ್​ ವೀಕ್ಷಣೆ ಕಂಡ ಉಪೇಂದ್ರ ಹಾಗೂ ಕಿಚ್ಚ ಸುದೀಪ್​​ ಅಭಿನಯದ ಕಬ್ಜ ಚಿತ್ರದ ಮಾಸ್ ಹಾಡು. ರಿಯಲ್ ಸ್ಟಾರ್ ರೆಟ್ರೋ ಅವತಾರಕ್ಕೆ ಅಭಿಮಾನಿಗಳು ಫಿದಾ.

Most Awaited Pan India Movie Kabzaa
'ಕಬ್ಜ' ಚಿತ್ರ

ಭಾರತ ಮಾತ್ರವಲ್ಲದೇ ವಿವಿಧ ದೇಶಗಳಲ್ಲಿಯೂ ಎದುರು ನೋಡುತ್ತಿರುವ ಈ ವರ್ಷದ ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ ಕಬ್ಜ. ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಕಿಚ್ಚ ಸುದೀಪ್ ಮುಖ್ಯ ಭೂಮಿಕೆಯಲ್ಲಿರುವ ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆಯಾದಾಗಿನಿಂದ ಚಿತ್ರದ ಮೇಲಿನ ನಿರೀಕ್ಷೆ ದುಪ್ಪಟ್ಟಾಗಿದೆ. ಜತೆಗೆ ಐಎಂಡಿಬಿ 2023ರ ನಿರೀಕ್ಷಿತ ಸಿನಿಮಾಗಳ ಸರ್ವೇ ಪಟ್ಟಿಯಲ್ಲಿ ಕಬ್ಜ ಸಿನಿಮಾ ಸ್ಥಾನ ಪಡೆದಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಷಯ.

ರೆಟ್ರೋ ಅವತಾರದಲ್ಲಿ ಅಬ್ಬರಿಸಿದ ರಿಯಲ್ ಸ್ಟಾರ್: ನಿರ್ದೇಶಕ ಆರ್. ಚಂದ್ರು ಕಬ್ಜ ಚಿತ್ರದ ಮೊದಲ ಮಾಸ್ ಸಾಂಗ್​ನ್ನು ಬಿಡುಗಡೆ ಮಾಡಿದ್ದಾರೆ. ಕೆಲ‌ ದಿನದ ಹಿಂದೆ ಹೈದರಾಬಾದ್​​ನಲ್ಲಿ ಅದ್ದೂರಿ ಕಾರ್ಯಕ್ರಮ ಮಾಡುವ ಮೂಲಕ ಕಬ್ಜ ಚಿತ್ರದ ಟೈಟಲ್ ಟ್ರಾಕ್ ಹಾಡು ಬಿಡುಗಡೆ ಮಾಡಲಾಯಿತು. ರೌಡಿಸಂಗೆ ಓಂಕಾರ ಹಾಕಿದ ರಿಯಲ್ ಸ್ಟಾರ್ ಉಪೇಂದ್ರ ರೆಟ್ರೋ ಅವತಾರದಲ್ಲಿ ಅಬ್ಬರಿಸಿದ್ದಾರೆ‌. ಹೈದ್ರಾಬಾದ್​​ನಲ್ಲಿ ನಡೆದ ಕಾರ್ಯಕ್ರಮದಲ್ಲಿ ರವಿ ಬ್ರಸೂರ್ ಸಂಗೀತ ನಿರ್ದೇಶನ ಕಬ್ಜ ಟೈಟಲ್ ಟ್ರ್ಯಾಕ್​ ಐದು ಭಾಷೆಗಳಲ್ಲಿ ರಿಲೀಸ್ ಆಗಿದೆ.

3 ಮಿಲಿಯನ್​ ವೀಕ್ಷಣೆ: 'ಯಾರೋ ಇವನು ಭಯಂಕರ ಎನ್ನುವ ಟೈಟಲ್ ಟ್ರ್ಯಾಕ್​ಗೆ ರವಿ ಬಸ್ರೂರ್ ಸಂಗೀತದ ಜತೆಗೆ ಸಾಹಿತ್ಯ ಕೂಡ ಬರೆದಿದ್ದಾರೆ. ಸಂತೋಷ್ ವೆಂಕಿ ಮತ್ತು ಭವ್ಯಶ್ರೀ ಬಂಡಿಮಠ ಈ ಹಾಡನ್ನು ಹಾಡಿದ್ದಾರೆ. ಈ ಟೈಟಲ್ ಟ್ರ್ಯಾಕ್​ ಯೂಟ್ಯೂಬ್​​ನಲ್ಲಿ ಧೂಳ್ ಎಬ್ಬಿಸಿದ್ದು ಬರೋಬ್ಬರಿ 3 ಮಿಲಿಯನ್​​ಗಿಂತ ಹೆಚ್ಚು ವೀಕ್ಷಣೆ ಕಂಡು ದಾಖಲೆ ಬರೆದಿದೆ. ಈ‌‌ ಮೂಲಕ ರಿಯಲ್ ಸ್ಟಾರ್ ಕಬ್ಜ ಚಿತ್ರದ ಮಾಸ್ ಸಾಂಗ್ ನಾಗಲೋಟ ಶುರು ಮಾಡಿದೆ. ಸದ್ಯ ಈ ಹಾಡಿನ‌ ಮೇಕಿಂಗ್​ನ್ನು ಚಿತ್ರತಂಡ ರಿವೀಲ್ ಮಾಡಿದೆ.

  • " class="align-text-top noRightClick twitterSection" data="">

ಇದನ್ನೂ ಓದಿ: 'ಕಬ್ಜ' ಚಿತ್ರದ ತೆಲುಗು ವಿತರಣಾ ಹಕ್ಕುಗಳು ನಟ ನಿತಿನ್ ಪಾಲು!

ಕಬ್ಜ ಚಿತ್ರ ಅದ್ದೂರಿ ಮೇಕಿಂಗ್: 1960 ಹಾಗೂ 80ರಲ್ಲಿ ನಡೆಯುವ ಕಥೆಯಾದ್ದರಿಂದ ಈ ಚಿತ್ರ ಬಹು ದೊಡ್ಡ ಸ್ಟಾರ್ ಕಾಸ್ಟ್​​ನ್ನು ಹೊಂದಿದೆ. ಉಪೇಂದ್ರಗೆ ನಾಯಕಿಯಾಗಿ ಶ್ರೀಯಾ ಶರಣ್ ಕಾಣಿಸಿಕೊಂಡಿದ್ದಾರೆ. ತೆಲುಗಿನ ಖ್ಯಾತ ನಟರಾರ ಪೊಸಾನಿ ಕೃಷ್ಣ ಮುರಳಿ ಮತ್ತು ಮುರಳಿ ಶರ್ಮಾ, ಐ ಮೂವಿ ಖ್ಯಾತಿಯ ಕಾಮರಾಜನ್, ನವಾಬ್ ಷಾ, ಜಗಪತಿ ಬಾಬು, ರಾಹುಲ್ ಜಗತಪ್, ಅನೂಪ್ ರೇವಣ್ಣ, ಜಾನ್ ಕೊಕ್ಕಿನ್, ರಾಹುಲ್ ದೇವ್, ನವೀನ್, ಕೋಟ ಶ್ರೀನಿವಾಸ್, ಜಯಪ್ರಕಾಶ್, ಕಾಟ್ ರಾಜು, ಸುಬ್ಬರಾಜು ಹೀಗೆ ದೊಡ್ಡ ಕಲಾವಿರ ದಂಡು ಚಿತ್ರದಲ್ಲಿದೆ.

ಎಂಟಿಬಿ ನಾಗರಾಜ್ ಅರ್ಪಿಸುವ, ಶ್ರೀ ಸಿದ್ದೇಶ್ವರ ಎಂಟರ್ ಪ್ರೈಸಸ್ ಲಾಂಛನದಲ್ಲಿ ಆರ್ ಚಂದ್ರು ಅವರೆ ನಿರ್ಮಿಸುತ್ತಿರುವ ಕಬ್ಜ ಚಿತ್ರಕ್ಕೆ ಕೆ.ಜಿ.ಎಫ್ ಖ್ಯಾತಿಯ ರವಿ ಬಸ್ರೂರು ಸಂಗೀತ ನಿರ್ದೇಶನವಿದೆ. ಕಾರ್ಯಕಾರಿ ನಿರ್ಮಾಪಕರಾಗಿ ಮುನೀಂದ್ರ ಹಾಗೂ ಲೈನ್ ಪ್ರೊಡ್ಯೂಸರ್ ಆಗಿ ರಾಜಶೇಖರ್ ಕಾರ್ಯ ನಿರ್ವಹಿಸುತ್ತಿದ್ದಾರೆ. ಎ.ಜೆ ಶೆಟ್ಟಿ ಛಾಯಾಗ್ರಹಣ, ಮಹೇಶ್ ಸಂಕಲನ, ರಾಜು ಸುಂದರಂ, ಗಣೇಶ್, ಶೇಖರ್ ನೃತ್ಯ ನಿರ್ದೇಶನ ಹಾಗೂ ರವಿವರ್ಮ, ವಿಕ್ರಂಮೋರ್, ವಿಜಯ್ ಸಾಹಸ ನಿರ್ದೇಶನವಿದೆ.

ಕಬ್ಜ ಚಿತ್ರದ ಮೊದಲ ಹಾಡಿಗೆ ಸಿಕ್ಕಿರುವ ಪ್ರತಿಕ್ರಿಯೆ ನಿರ್ದೇಶಕ ಆರ್.ಚಂದ್ರು ಅವರಿಗೆ ಈ ಚಿತ್ರದ ಮೇಲಿನ ನಿರೀಕ್ಷೆಯನ್ನ ಮತ್ತಷ್ಟು ಹೆಚ್ಚಿಸಿದೆ. ಈಗಾಗಲೇ ಬಿಸಿನೆಸ್ ವಿಚಾರದಲ್ಲಿ ದೊಡ್ಡ ಮಟ್ಟದಲ್ಲಿ ವ್ಯಾಪಾರ ಮಾಡಿರುವ ನಿರ್ಮಾಪಕ ಆರ್ ಚಂದ್ರುಗೆ ಖುಷಿ ತಂದಿದೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ಸಾಲು ಸಾಲು ಯಶಸ್ವಿ ಸಿನಿಮಾಗಳ ಮೂಲಕ ಸ್ಯಾಂಡಲ್ ವುಡ್ ಮತ್ತಷ್ಟು ಎತ್ತರಕ್ಕೆ ಹೋಗಿದೆ. ಕೆಜಿಎಫ್, ವಿಕ್ರಾಂತ್ ರೋಣ, 777 ಚಾರ್ಲಿ ಹಾಗೂ ಕಾಂತಾರ ಯಶಸ್ಸಿನ ಬಳಿಕ ಕನ್ನಡದ ಕೀರ್ತಿ ಪತಾಕೆಯನ್ನು ಹಾರಿಸಲು ಈ ವರ್ಷ ಕಬ್ಜ ಸಜ್ಜಾಗಿದೆ.

ಇದನ್ನೂ ಓದಿ: ರಿಯಲ್​ ಸ್ಟಾರ್​ ಉಪ್ಪಿ ನಟನೆಯ ಕಬ್ಜ ಟೈಟಲ್​ ಟ್ರ್ಯಾಕ್​ ರಿಲೀಸ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.