ETV Bharat / entertainment

ಗೋಲ್ಡನ್​ ಬಾಯ್​ ನೀರಜ್​ ಚೋಪ್ರಾ ಜೊತೆ ಉಪಹಾರ ಸೇವಿಸಿದ ರಾಹುಲ್​ ರವೀಂದ್ರನ್, ಆನಂದ್​ ದೇವರಕೊಂಡ

author img

By ETV Bharat Karnataka Team

Published : Oct 10, 2023, 11:05 AM IST

ಭಾರತದ ಸ್ಟಾರ್ ಅಥ್ಲೀಟ್ ನೀರಜ್ ಚೋಪ್ರಾ ಅವರೊಂದಿಗೆ ಟಾಲಿವುಡ್​ ನಟ, ನಿರ್ದೇಶಕ ರಾಹುಲ್​ ರವೀಂದ್ರನ್ ಮತ್ತು ನಟ ಆನಂದ್​ ದೇವರಕೊಂಡ ಉಪಾಹಾರ ಸೇವಿಸಿದರು.

Tollywood actors Anand Devarakonda, Rahul Ravindran had breakfast with javelin thrower Neeraj Chopra
ಗೋಲ್ಡನ್​ ಬಾಯ್​ ನೀರಜ್​ ಚೋಪ್ರಾ ಜೊತೆ ಉಪಹಾರ ಸೇವಿಸಿದ ರಾಹುಲ್​ ರವೀಂದ್ರನ್, ಆನಂದ್​ ದೇವರಕೊಂಡ

ಚೀನಾದ ಹ್ಯಾಂಗ್​ಝೌನಲ್ಲಿ ನಡೆದ 19ನೇ ಏಷ್ಯಾನ್​ ಗೇಮ್ಸ್​ನಲ್ಲಿ ಚಿನ್ನ ಗೆದ್ದ ಭಾರತದ ಸ್ಟಾರ್ ಅಥ್ಲೀಟ್ ನೀರಜ್ ಚೋಪ್ರಾ ಅವರೊಂದಿಗೆ ಟಾಲಿವುಡ್​ ನಟ ಹಾಗೂ ನಿರ್ದೇಶಕ ರಾಹುಲ್​ ರವೀಂದ್ರನ್ ಉಪಾಹಾರ ಸೇವಿಸಿದರು. ಇವರೊಂದಿಗೆ 'ಬೇಬಿ' ಸಿನಿಮಾ ಖ್ಯಾತಿಯ ನಟ ಆನಂದ್​ ದೇವರಕೊಂಡ ಕೂಡ ಇದ್ದರು. ಉಪಹಾರ ಸೇವಿಸುತ್ತಿರುವ ಫೋಟೋಗಳನ್ನು ರಾಹುಲ್​ ರವೀಂದ್ರನ್​ ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಈ ಪೋಟೋಗಳು ವೈರಲ್​ ಆಗಿವೆ.

  • Anyone who knows me or even just follows me on Twitter will know what this means to me. ♥️ This breakfast with the champion will never ever be forgotten ♥️ pic.twitter.com/TaXLXnD2tD

    — Rahul Ravindran (@23_rahulr) October 9, 2023 " class="align-text-top noRightClick twitterSection" data=" ">

"ನನಗೆ ತಿಳಿದಿರುವ ಅಥವಾ ಟ್ವಿಟರ್​ನಲ್ಲಿ ನನ್ನನ್ನು ಅನುಸರಿಸುವ ಯಾರಿಗಾದರೂ ಇದರ ಅರ್ಥವೇನೆಂದು ತಿಳಿಯುತ್ತದೆ. ಚಾಂಪಿಯನ್​ನೊಂದಿಗೆ ನಾನು ಸೇವಿಸಿದ ಈ ಉಪಹಾರವನ್ನು ನಾನು ಎಂದಿಗೂ ಮರೆಯುವುದಿಲ್ಲ" ಎಂದು ನಿರ್ದೇಶಕ ರಾಹುಲ್​ ರವೀಂದ್ರನ್​ ತಮ್ಮ ಎಕ್ಸ್​ನಲ್ಲಿ ಫೋಟೋಗಳನ್ನು ಹಂಚಿಕೊಂಡು ಕ್ಯಾಪ್ಶನ್​ ನೀಡಿದ್ದಾರೆ.

ರಾಹುಲ್​ ರವೀಂದ್ರನ್ ಬಗ್ಗೆ.. 'ಅಂದಾಲ ರಾಕ್ಷಸಿ' ಚಿತ್ರದ ಮೂಲಕ ರಾಹುಲ್​ ರವೀಂದ್ರನ್​ ಹೀರೋ ಆಗಿ ಉತ್ತಮ ಕ್ರೇಜ್​ ಗಳಿಸಿದ್ದಾರೆ. ಆ ನಂತರ ಹಲವು ಸಿನಿಮಾಗಳ ಮೂಲಕ ನಟನಾಗಿ ಪ್ರೇಕ್ಷಕರನ್ನು ಗೆದ್ದರು. ಇದಲ್ಲದೇ ಇತ್ತೀಚಿನ ದಿನಗಳಲ್ಲಿ ಸ್ಟಾರ್​ ನಟರ ಚಿತ್ರಗಳಲ್ಲಿ ಕ್ಯಾರೆಕ್ಟರ್​ ಆರ್ಟಿಸ್ಟ್​ ಆಗಿ ನಟಿಸುತ್ತಿದ್ದಾರೆ. ರಾಹುಲ್​ ರವೀಂದ್ರನ್​ ನಟ ಮಾತ್ರವಲ್ಲ, ನಿರ್ದೇಶಕರಾಗಿಯೂ ಉತ್ತಮ ಮನ್ನಣೆ ಪಡೆದುಕೊಂಡಿದ್ದಾರೆ. ಅವರು ತಮ್ಮ ಚೊಚ್ಚಲ ಚಿತ್ರ 'ಚಿ ಲಾ ಸೌ'ಗಾಗಿ ರಾಷ್ಟ್ರ ಪ್ರಶಸ್ತಿ ಪಡೆದರು.

ಇದನ್ನೂ ಓದಿ: 'ಬೇಬಿ' ಸಿನಿಮಾ ಇನ್ನೂ ನೋಡಿಲ್ವಾ? ಹಾಗಿದ್ರೆ OTTನಲ್ಲಿ ವೀಕ್ಷಿಸಿ, ಎಲ್ಲಿ? ಯಾವಾಗ?

ಸದ್ಯ ರಾಹುಲ್​ ರವೀಂದ್ರನ್​ ಅವರು ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಜೊತೆ ಮಹಿಳಾ ಪ್ರಧಾನ ಸಿನಿಮಾ ಮಾಡಲು ಮುಂದಾಗಿದ್ದಾರೆ. ಆರಂಭದಲ್ಲಿ ಈ ಪ್ರಾಜೆಕ್ಟ್​ಗೆ ಸೌತ್​ ಸ್ಟಾರ್​ ನಟಿ ಸಮಂತಾ ರುತ್​ ಪ್ರಭು ಅವರ ಹೆಸರು ಕೇಳಿ ಬಂದಿತ್ತು. ಆದರೆ, ಕೆಲವು ಅನಿರೀಕ್ಷಿತ ಕಾರಣಗಳಿಂದ ನ್ಯಾಷನಲ್​ ಕ್ರಶ್​ಗೆ ಈ ಅವಕಾಶವನ್ನು ನೀಡಲಾಗಿದೆ. ಸದ್ಯದಲ್ಲೇ ಈ ಚಿತ್ರದ ಬಗ್ಗೆ ಅಧಿಕೃತ ಘೋಷಣೆಯೂ ಹೊರಬೀಳುವ ಸಾಧ್ಯತೆಯಿದೆ.

ಇನ್ನೂ, ಯುವ ನಟ ಆನಂದ್​ ದೇವರಕೊಂಡ ನಟಿಸಿದ ಇತ್ತೀಚೆಗಿನ 'ಬೇಬಿ' ಚಿತ್ರ ಸೂಪರ್​ ಹಿಟ್​ ಆಗಿತ್ತು. ಸಾಯಿ ರಾಜೇಶ್​ ನಿರ್ದೇಶನದ ಈ ಚಿತ್ರ ಯುವಜನತೆಯನ್ನು ಅಪಾರವಾಗಿ ಆಕರ್ಷಿಸಿತು. ಜುಲೈ 14 ರಂದು ಚಿತ್ರಮಂದಿರಗಳಲ್ಲಿ ತೆರೆ ಕಂಡ ಸಿನಿಮಾವು ಬಾಕ್ಸ್​ ಆಫೀಸ್​ನಲ್ಲಿ 80 ಕೋಟಿ ರೂ. ಗಳಿಸಿತ್ತು. ಸದ್ಯ ಆನಂದ್​ ದೇವರಕೊಂಡ ಕ್ರೈಂ ಕಾಮಿಡಿ ಸಿನಿಮಾ 'ಗಂ ಗಮ್​ ಗಣೇಶ'ದಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ಈ ಚಿತ್ರದ ಟೀಸರ್​ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಭಾರತದ ಸ್ಟಾರ್ ಅಥ್ಲೀಟ್ ನೀರಜ್ ಚೋಪ್ರಾ ಚೀನಾದ ಹ್ಯಾಂಗ್​ಝೌನಲ್ಲಿ ನಡೆದ 19ನೇ ಏಷ್ಯಾನ್​ ಗೇಮ್ಸ್​ನಲ್ಲಿ 88.88 ಮೀಟರ್‌ ದೂರ ಜಾವೆಲಿನ್ ಎಸೆದು ಚಿನ್ನ ಗೆದ್ದರು. ಇದಕ್ಕೂ ಮೊದಲು ಅವರು 89 ಮೀ ದೂರ ಜಾವೆಲಿನ್ ಎಸೆದು ಗಮನ ಸೆಳೆದಿದ್ದರು. ತಮ್ಮ ಮುಂದಿನ ಗುರಿ 90 ಮೀಟರ್​ ಮೀರುವುದು ಎಂದು ಅವರು ಹೇಳಿಕೊಂಡಿದ್ದರು.

ಇದನ್ನೂ ಓದಿ: ಏಷ್ಯನ್ ಗೇಮ್ಸ್‌, ಜಾವೆಲಿನ್‌ ಥ್ರೋ: ನೀರಜ್‌ ಚೋಪ್ರಾಗೆ ಚಿನ್ನ, ಬೆಳ್ಳಿ ಗೆದ್ದ ಕಿಶೋರ್‌; 4x400 ಮೀ ರಿಲೇಯಲ್ಲಿ ಚಿನ್ನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.