ETV Bharat / sports

ಏಷ್ಯನ್ ಗೇಮ್ಸ್‌, ಜಾವೆಲಿನ್‌ ಥ್ರೋ: ನೀರಜ್‌ ಚೋಪ್ರಾಗೆ ಚಿನ್ನ, ಬೆಳ್ಳಿ ಗೆದ್ದ ಕಿಶೋರ್‌; 4x400 ಮೀ ರಿಲೇಯಲ್ಲಿ ಚಿನ್ನ

author img

By ETV Bharat Karnataka Team

Published : Oct 4, 2023, 6:20 PM IST

Updated : Oct 4, 2023, 7:45 PM IST

Asian Games 2023: ಜಾವೆಲಿನ್ ಥ್ರೋನಲ್ಲಿ ಭಾರತದ ಅಥ್ಲೀಟ್​​ಗಳಾದ ನೀರಜ್ ಚೋಪ್ರಾ ಮತ್ತು ಕಿಶೋರ್ ಕ್ರಮವಾಗಿ ಚಿನ್ನ ಮತ್ತು ಬೆಳ್ಳಿ ಪದಕ ಗೆದ್ದರು. ರಿಲೇಯಲ್ಲೂ ಅಥ್ಲೀಟ್‌ಗಳು ಬಂಗಾರದ ಸಾಧನೆ ಮಾಡಿದ್ದಾರೆ.

Neeraj Chopra
Neeraj Chopra

ಹ್ಯಾಂಗ್‌ಝೌ (ಚೀನಾ): ಭಾರತದ ಸ್ಟಾರ್ ಅಥ್ಲೀಟ್ ನೀರಜ್ ಚೋಪ್ರಾ 19ನೇ ಏಷ್ಯಾನ್​ ಗೇಮ್ಸ್​ನಲ್ಲಿ 88.88 ಮೀಟರ್‌ ದೂರ ಜಾವೆಲಿನ್ ಎಸೆದು ಚಿನ್ನ ಗೆದ್ದರು. ಇನ್ನೋರ್ವ ಅಥ್ಲಿಟ್​​ ಕಿಶೋರ್ ಜೆನಾ 87.54 ಮೀಟರ್ ದೂರ ಎಸೆದು ಬೆಳ್ಳಿ ಪದಕ ತನ್ನದಾಗಿಸಿಕೊಂಡರು. ಇದು ಜೆನಾ ಅವರ ದಾಖಲೆಯ ಎಸೆತವಾಗಿದೆ. ಈ ಮೂಲಕ ಜಾವೆಲಿನ್ ಸ್ಪರ್ಧೆಯಲ್ಲಿ ಇಂದು ಭಾರತಕ್ಕೆ ಎರಡು ಪದಕ ದೊರೆಯಿತು.

ನೀರಜ್ ಚೋಪ್ರಾ ಈ ವರ್ಷದ ಎರಡನೇ ಚಿನ್ನದ ಪದಕವನ್ನು ತಮ್ಮ ಅತ್ಯುತ್ತಮ ಎರಡನೇ ದೂರವನ್ನು ದಾಖಲಿಸಿ ಪಡೆದರು. ಇದಕ್ಕೂ ಮೊದಲು ಅವರು 89 ಮೀ ದೂರ ಜಾವೆಲಿನ್ ಎಸೆದರು. ತಮ್ಮ ಮುಂದಿನ ಗುರಿ 90 ಮೀಟರ್​ ಮೀರುವುದು ಎಂದು ಹೇಳಿದ್ದಾರೆ. ನೀರಜ್‌ಗೆ ಫೈನಲ್​ನಲ್ಲಿ ಪೈಪೋಟಿ ನೀಡಿದ್ದು ಭಾರತದವರೇ ಆದ ಕಿಶೋರ್ ಜೆನಾ.

ಮೊದಲ ಎಸೆತದಲ್ಲಿ ನೀರಜ್​ ಚೋಪ್ರಾ 82.38 ಮೀ ದಾಖಲಿಸಿದ್ದರು. ಎರಡನೇ ಎಸೆತದಲ್ಲಿ 84.49 ಮೀ ಮಾಡಿದ್ದರು. ಈ ವೇಳೆ ಒಡಿಶಾದ ಕಿಶೋರ್ ಜೆನಾ 86.77 ಮೀ ಎಸೆದು ಅಗ್ರಸ್ಥಾನಕ್ಕೇರಿದರು. ನೀರಜ್​ ಮೂರನೇ ಎಸೆತ ಫೌಲ್ ಆಯಿತು. ನಾಲ್ಕನೇ ಎಸೆತದಲ್ಲಿ 88.88 ಮೀಟರ್​ ದೂರಕ್ಕೆಸೆದು ದಾಖಲೆ ಬರೆದರು. ಕಿಶೋರ್ 87.54 ಮೀ ಎಸೆದು ಎರಡನೇ ಸ್ಥಾನ ಪಡೆದರು. ನೀರಜ್‌ ಐದನೇ ಎಸೆತ 80.80 ತಲುಪಿತು ಮತ್ತು ಆರನೇ ಪ್ರಯತ್ನ ಫೌಲ್​ ಆಯಿತು.

ಈ ಸ್ಪರ್ಧೆಯಲ್ಲಿ 88.88 ಮೀಟರ್​ ದೂರ ಮತ್ತು 87.54 ಮೀಟರ್​ ಹತ್ತಿರಕ್ಕೂ ಯಾರೂ ಸುಳಿಯಲಿಲ್ಲ. ಕಂಚು ಗೆದ್ದ ಜಪಾನ್‌ನ ಜೆಂಕಿ ರೊಡೆರಿಕ್ ಡೀನ್ 82.68 ಮೀಟರ್ ಎಸೆದಿದ್ದೇ ಮೂರನೇ ಅತಿ ಹೆಚ್ಚಿನ ದೂರವಾಯಿತು.

  • The Golden streak of 🇮🇳 #Athletics is going strong!!

    The Men's 4X400m Relay team comprising of @muhammedanasyah , Amoj Jacob, Muhammed Ajmal & Rajesh Ramesh led us to glory with their glamorous🥇and a timing of 3:01.58!

    Many congratulations to the rockstars ! Well done… pic.twitter.com/6j6feXqQZd

    — SAI Media (@Media_SAI) October 4, 2023 " class="align-text-top noRightClick twitterSection" data=" ">

ಪುರುಷರ 4x400 ಮೀ ರಿಲೇಯಲ್ಲಿ ಚಿನ್ನ: ಭಾರತದ ಪುರುಷರ 4x400 ಮೀ ರಿಲೇ ತಂಡವು 19ನೇ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಮುಡಿಗೇರಿಸಿಕೊಂಡಿದೆ. ಫೈನಲ್‌ನಲ್ಲಿ ಮುಹಮ್ಮದ್ ಅನಸ್ ಯಾಹಿಯಾ, ಅಮೋಜ್ ಜೇಕಬ್, ಮುಹಮ್ಮದ್ ಅಜ್ಮಲ್ ವರಿಯತ್ತೋಡಿ ಮತ್ತು ರಾಜೇಶ್ ರಮೇಶ್ ರಾಷ್ಟ್ರೀಯ ದಾಖಲೆಯ 3:01.58 ಸಮಯದಲ್ಲಿ ಗುರಿ ತಲುಪಿದರು. ಈ ಸ್ಪರ್ಧೆಯಲ್ಲಿ ಭಾರತ 2018 ರ ಏಷ್ಯನ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿತ್ತು.

ಹೈಜಂಪ್​ನಲ್ಲಿ ಕೈತಪ್ಪಿದ ಪದಕ: ಸರ್ವೇಶ್ ಅನಿಲ್ ಕುಶರೆ ಪುರುಷರ ಹೈಜಂಪ್ ಫೈನಲ್‌ನಲ್ಲಿ ಸೀಸನ್-ಅತ್ಯುತ್ತಮ 2.26 ಮೀಟರ್‌ಗಳೊಂದಿಗೆ ನಾಲ್ಕನೇ ಸ್ಥಾನ ಪಡೆದರು. ಜೆಸ್ಸಿ ಸಂದೇಶ್ 2.19 ಮೀ ಅತ್ಯುತ್ತಮ ಜಿಗಿತದೊಂದಿಗೆ ಒಂಬತ್ತನೇ ಸ್ಥಾನ ಪಡೆದರು.

ಇದನ್ನೂ ಓದಿ: ಷ್ಯನ್​ ಗೇಮ್ಸ್​​: ಬ್ಯಾಡ್ಮಿಂಟನ್​ನಲ್ಲಿ ನಾಲ್ಕು ಪದಕ ನಿರೀಕ್ಷೆ, ಮಹಿಳಾ ಕಬಡ್ಡಿ ತಂಡಕ್ಕೆ ಪದಕ ಖಚಿತ

Last Updated : Oct 4, 2023, 7:45 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.