ETV Bharat / entertainment

ತಾಯಿ ಕಸ್ತೂರ್ ಬಾ ಪಾತ್ರದಲ್ಲಿ ಹರಿಪ್ರಿಯಾ ಕಮಾಲ್

author img

By

Published : Apr 19, 2022, 7:24 PM IST

ಬರಗೂರರೇ ಚಿತ್ರಕತೆ, ಸಂಭಾಷಣೆ ಮತ್ತು ಗೀತೆಗಳನ್ನು ಬರೆದಿರುವ 'ತಾಯಿ ಕಸ್ತೂರ್​ ಗಾಂಧಿ' ಕನ್ನಡ ಚಿತ್ರವು 12ನೇ ದಾದಾ ಸಾಹೇಬ್ ಫಾಲ್ಕೆ ಅಂತರರಾಷ್ಟ್ರೀಯ ಚಿತ್ರೋತ್ಸವದ ಸ್ಫರ್ಧಾ ವಿಭಾಗಕ್ಕೆ ಆಯ್ಕೆಯಾಗಿದೆ. ಕಸ್ತೂರ್ ಬಾ ಪಾತ್ರದಲ್ಲಿ ಕನ್ನಡದ ಖ್ಯಾತ ನಟಿ ಹರಿಪ್ರಿಯಾ ಅಭಿನಯಿಸಿದ್ದಾರೆ. ಗಾಂಧಿ ಪಾತ್ರದಲ್ಲಿ ಬಹುಭಾಷಾ ನಟ ಕಿಶೋರ್ ಅಭಿನಯಿಸಿದ್ದಾರೆ.

Thayi Kastur Gandhi cinema selected for the 12th Dada Saheb Phalke International Film Festival
ತಾಯಿ ಕಸ್ತೂರ್ ಬಾ ಪಾತ್ರದಲ್ಲಿ ಹರಿಪ್ರಿಯಾ

ಬರಗೂರು ರಾಮಚಂದ್ರಪ್ಪ ಕನ್ನಡ ಚಿತ್ರರಂಗದಲ್ಲಿ ಸಮಾಜಿಕ ಕಳಕಳಿ ಸಿನಿಮಾಗಳನ್ನು ಮಾಡಿ ತಮ್ಮದೇ ಛಾಪು ಮೂಡಿಸಿದ ನಿರ್ದೇಶಕ. ಇದೀಗ ಅವರ ನಿರ್ದೇಶನದ ಬತ್ತಳಿಕೆಯಿಂದ ಹೊರಬಂದ ತಾಯಿ ಕಸ್ತೂರ್ ಗಾಂಧಿ ಸಿನಿಮಾವು 12ನೇ ದಾದಾ ಸಾಹೇಬ್ ಫಾಲ್ಕೆ ಅಂತರರಾಷ್ಟ್ರೀಯ ಚಿತ್ರೋತ್ಸವದ ಸ್ಫರ್ಧಾ ವಿಭಾಗಕ್ಕೆ ಆಯ್ಕೆಯಾಗಿದೆ. ಅಲ್ಲದೆ, ಈಗಾಗಲೇ ಲಾಸ್ ಏಂಜಲೀಸ್ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಭಾಗವಹಿಸುವ ಮೂಲಕವೂ ಹೆಚ್ಚು ಸದ್ದು ಮಾಡುತ್ತಿದೆ.

Thayi Kastur Gandhi cinema selected for the 12th Dada Saheb Phalke International Film Festival
ತಾಯಿ ಕಸ್ತೂರ್ ಬಾ ಪಾತ್ರದಲ್ಲಿ ಹರಿಪ್ರಿಯಾ

ದೆಹಲಿಯ ಸಂಸ್ಥೆಯೊಂದು ದಾದಾ ಸಾಹೇಬ್ ಫಾಲ್ಕೆ ಅವರ ಜನ್ಮದಿನದಂದು ಹನ್ನೊಂದು ವರ್ಷಗಳಿಂದ ಈ ಚಿತ್ರೋತ್ಸವವನ್ನು ನಡೆಸಿಕೊಂಡು ಬಂದಿದೆ. ಈ ಚಿತ್ರೋತ್ಸವಕ್ಕೆ ಆಯ್ಕೆಯಾದ 'ತಾಯಿ ಕಸ್ತೂರ್ ಗಾಂಧಿ' ಚಿತ್ರವು ಬರಗೂರರ 'ಕಸ್ತೂರ್ ಬಾ ವರ್ಸಸ್ ಗಾಂಧಿ' ಎಂಬ ಕಾದಂಬರಿಯನ್ನು ಆಧರಿಸಿದೆ. ಬರಗೂರರೇ ಚಿತ್ರಕತೆ, ಸಂಭಾಷಣೆ ಮತ್ತು ಗೀತೆಗಳನ್ನು ಬರೆದಿದ್ದಾರೆ. ಈ ಚಿತ್ರವು ಕಸ್ತೂರ್ ಬಾ ಮತ್ತು ಗಾಂಧಿಯವರನ್ನು ಮುಖಾಮುಖಿಯಾಗಿಸುತ್ತ ಇಬ್ಬರ ಸಕಾರಾತ್ಮಕ ವ್ಯಕ್ತಿತ್ವವನ್ನು ಅನಾವರಣಗೊಳಿಸುತ್ತದೆ.

Thayi Kastur Gandhi cinema selected for the 12th Dada Saheb Phalke International Film Festival
ಗಾಂಧಿ ಪಾತ್ರದಲ್ಲಿ ಬಹುಭಾಷಾ ನಟ ಕಿಶೋರ್

ಮುಖ್ಯವಾಗಿ ಕಸ್ತೂರ್ ಬಾ ಅವರ ಅನುಭವದ ನೋಟದಲ್ಲಿ ಗಾಂಧಿಯವರನ್ನು ಕಂಡುಕೊಳ್ಳುವ ಅಭಿವ್ಯಕ್ತಿ ವಿಧಾನವನ್ನು ಅನುಸರಿಸಲಾಗಿದೆ. ಕಸ್ತೂರ್ ಬಾ ಅವರು ತಾಯಿ, ಪತ್ನಿ ಮತ್ತು ಹೋರಾಟಗಾರ್ತಿಯಾಗಿ ಎದುರಿಸಿದ ಮಾನಸಿಕ ತಲ್ಲಣಗಳನ್ನು ಚಿತ್ರಿಸಲಾಗಿದೆ.

Thayi Kastur Gandhi cinema selected for the 12th Dada Saheb Phalke International Film Festival
ತಾಯಿ ಕಸ್ತೂರ್ ಬಾ ಪಾತ್ರದಲ್ಲಿ ಹರಿಪ್ರಿಯಾ

ಕಸ್ತೂರ್ ಬಾ ಪಾತ್ರದಲ್ಲಿ ಕನ್ನಡದ ಖ್ಯಾತ ನಟಿ ಹರಿಪ್ರಿಯಾ ಅಭಿನಯಿಸಿದ್ದಾರೆ. ಗಾಂಧಿ ಪಾತ್ರದಲ್ಲಿ ಬಹುಭಾಷಾ ನಟ ಕಿಶೋರ್ ಅಭಿನಯಿಸಿದ್ದಾರೆ. ಶ್ರೀನಾಥ್ ಅವರು ಡಾ. ಅಂಬೇಡ್ಕರ್ ಪಾತ್ರದಲ್ಲಿದ್ದಾರೆ. ಸುಂದರ್​​ ರಾಜ್, ರೇಖಾ, ಪ್ರಮೀಳಾ ಜೋಷಾಯ್, ಸುಂದರರಾಜ ಅರಸು, ರಾಘವ್, ವೆಂಕಟರಾಜು, ವತ್ಸಲಾ ಮೋಹನ್ ಮುಂತಾದವರು ತಾರಾಗಣದಲ್ಲಿದ್ದಾರೆ. ಈ ಚಿತ್ರಕ್ಕೆ ಸುರೇಶ ಅರಸು ಸಂಕಲನ, ನಾಗರಾಜ್ ಆದವಾನಿ ಛಾಯಾಗ್ರಹಣ ಮತ್ತು ಶಮಿತಾ ಮಲ್ನಾಡ್ ಸಂಗೀತ ನಿರ್ದೇಶನವಿದೆ. ಶ್ರೀಮತಿ ಬಿ.ಜಿ.ಗೀತಾ ಅವರ ಜನಮಿತ್ರ ಮೂವೀಸ್ ಮೂಲಕ ತಾಯಿ ಕಸ್ತೂರ್ ಗಾಂಧಿ ಸಿನಿಮಾವನ್ನ ನಿರ್ಮಾಣ ಮಾಡಲಾಗಿದೆ.

Thayi Kastur Gandhi cinema selected for the 12th Dada Saheb Phalke International Film Festival
ತಾಯಿ ಕಸ್ತೂರ್ ಬಾ ಪಾತ್ರದಲ್ಲಿ ಹರಿಪ್ರಿಯಾ

ಇದನ್ನೂ ಓದಿ: 'RRR' ಸಕ್ಸಸ್​: ಗೋಲ್ಡನ್​ ಟೆಂಪಲ್​​ನಲ್ಲಿ 'ಲಂಗರ್ ಸೇವಾ' ಆಯೋಜಿಸಿದ ರಾಮ್​ಚರಣ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.