ETV Bharat / entertainment

ಹೆಚ್ಚಿನ ಭಾರತೀಯರು ಥಿಯೇಟರ್​​ಗಳಲ್ಲೇ ಸಿನಿಮಾ ವೀಕ್ಷಿಸಲು ಬಯಸುತ್ತಾರೆ: ಅಧ್ಯಯನ

author img

By ETV Bharat Karnataka Team

Published : Oct 12, 2023, 10:51 AM IST

ಹೆಚ್ಚಿನ ಭಾರತೀಯರು ಥಿಯೇಟರ್​​ಗಳಲ್ಲೇ ಸಿನಿಮಾ ವೀಕ್ಷಿಸಲು ಬಯಸುತ್ತಾರೆ ಎಂಬುದನ್ನು ಸಮೀಕ್ಷೆಯೊಂದು ಬಹಿರಂಗಪಡಿಸಿದೆ.

Survey reveals that majority of Indians prefers  big screens
ಹೆಚ್ಚಿನ ಭಾರತೀಯರು ಥಿಯೇಟರ್​​ಗಳಲ್ಲೇ ಸಿನಿಮಾ ವೀಕ್ಷಿಸಲು ಬಯಸುತ್ತಾರೆ

'ದಿ ಸಿನಿಫೈಲ್ಸ್' ನಡೆಸಿದ ಹೊಸ ಸಮೀಕ್ಷೆಯು, ಹೆಚ್ಚಿನ ಸಂಖ್ಯೆಯ ಭಾರತೀಯ ಪ್ರೇಕ್ಷಕರು ಬಿಗ್​ ಸ್ಕ್ರೀನ್​​​ನಲ್ಲೇ ಸಿನಿಮಾಗಳನ್ನು ವೀಕ್ಷಿಸಲು ಬಯಸುತ್ತಾರೆ, ಥಿಯೇಟರ್​​ ಅನುಭವನ್ನು ಆನಂದಿಸುತ್ತಾರೆ ಎಂಬುದನ್ನು ಬಹಿರಂಗಪಡಿಸಿದೆ. ಶೇ. 74ರಷ್ಟು ಪ್ರೇಕ್ಷಕರು ಸಿನಿಮಾ ಬಿಡುಗಡೆಗೊಂಡ ಮೊದಲ ಮೂರು ದಿನಗಳಲ್ಲೇ ಬಿಗ್​ಸ್ಕ್ರೀನ್​​​ನಲ್ಲಿ ಸಿನಿಮಾ ವೀಕ್ಷಿಸುವ ಪ್ರಯತ್ನ ಮಾಡುತ್ತಾರೆ ಮತ್ತು ಥಿಯೇಟರ್‌ಗಳಲ್ಲಿ ತಮ್ಮ ಸಿನಿಮೀಯ ಅನುಭವನ್ನು ಆನಂದಿಸಲು ಪರ್ಫೆಕ್ಟ್​ ಪ್ಲಾನ್​ ಕೂಡ ಹಾಕುತ್ತಾರೆ ಎಂಬುದಾಗಿಯೂ ಅಧ್ಯಯನ ತಿಳಿಸಿದೆ.

ರಾಷ್ಟ್ರೀಯ ಸಿನಿಮಾ ದಿನದ (ಅಕ್ಟೋಬರ್​ 13) ಮುನ್ನ ಈ ಅಧ್ಯಯನ ನಡೆದಿದೆ. ಶೇ. 98ರಷ್ಟು ಭಾರತೀಯರು ಪರ್ಫೆಕ್ಟ್ ಸಿನಿಮೀಯ ಅನುಭವ ಅಥವಾ ಮ್ಯಾಜಿಕ್ ಬಿಗ್​ ಸ್ಕ್ರೀನ್​​ ಮೂಲಕ ಮಾತ್ರ ಸಾಧ್ಯ ಎಂದು ನಂಬುತ್ತಾರೆ ಎಂಬುದನ್ನು ಈ ವರದಿ ಬಹಿರಂಗಪಡಿಸಿದೆ.

ಅಧ್ಯಯನಕ್ಕೆ ಪ್ರತಿಕ್ರಿಯಿಸಿದವರ ಪೈಕಿ ಶೇ. 90ರಷ್ಟು ಜನರು, ಥಿಯೇಟರ್​​ಗಳಿಗೆ ಹೋಗಲು ಇಚ್ಛಿಸುತ್ತಾರೆ. ಔಟಿಂಗ್​​ ಎಂಬ ವಿಷಯ ಬಂದಾಗ ಶಾಪಿಂಗ್​​ ಸೇರಿದಂತೆ ಇತರ ಆಯ್ಕೆಗಳಿಗಿಂತ ಚಿತ್ರಮಂದಿರಕ್ಕೆ ಹೆಚ್ಚು ಪ್ರಾಶಸ್ತ್ಯ ಕೊಡುತ್ತಾರೆ. ಅದರಲ್ಲೂ ಯಂಗರ್​ ಜನರೇಶನ್​​ ಪ್ರತೀ ವಾರ ಥಿಯೇಟರ್​ಗೆ ಹೋಗುವ ಬಗ್ಗೆ ಆಲೋಚಿಸುತ್ತದೆ.

ಈ ವರದಿಯನ್ನು ಟಿಕೆಟ್​​ ಬುಕ್​ ಮಾಡುವ ವೇದಿಕೆ ಬುಕ್‌ ಮೈ ಶೋ ಬಿಡುಗಡೆ ಮಾಡಿದೆ. ಭಾರತದಲ್ಲಿನ 650 ನಗರಗಳು ಮತ್ತು ಪಟ್ಟಣಗಳಲ್ಲಿ ಟಿಕೆಟ್ ಪ್ಲಾಟ್‌ಫಾರ್ಮ್‌ನಲ್ಲಿ ವಹಿವಾಟು ನಡೆಸುವ ಗ್ರಾಹಕರ ನೆಲೆಯಲ್ಲಿ ಸಮೀಕ್ಷೆ ನಡೆಸಲಾಗಿದೆ. ಸಮೀಕ್ಷೆಗೆ ಪ್ರತಿಕ್ರಿಯಿಸಿದವರ ಪೈಕಿ ಶೇ. 41ರಷ್ಟು ಮಂದಿ ಯಂಗರ್​ ಜನರೇಶನ್​. 59 ಪ್ರತಿಶತದಷ್ಟು ಜನರು ಯಂಗರ್​ ಜನರೇಶನ್ ದಾಟಿದವರು.

ಪ್ರತಿಕ್ರಿಯಿಸಿದವರಲ್ಲಿ ಶೇ.74ರಷ್ಟು ಜನರು ಗುಣಮಟ್ಟದ ಆಡಿಯೋ - ವಿಡಿಯೋ ಅನುಭವಕ್ಕಾಗಿ ಚಿತ್ರಮಂದಿರದಲ್ಲೇ ಚಲನಚಿತ್ರವನ್ನು ವೀಕ್ಷಿಸಲು ಇಚ್ಚಿಸುತ್ತಾರೆ. ಸಮೀಕ್ಷೆಗೆ ಪ್ರತಿಕ್ರಿಯಿಸಿದವರ ಪೈಕಿ ಶೇ.40 ರಷ್ಟು ಜನರು ಯಾವಾಗಲೂ ಐಮ್ಯಾಕ್ಸ್, 4ಡಿಎಕ್ಸ್ ಸೇರಿದಂತೆ ಆಧುನಿಕ ಸ್ಕ್ರೀನ್​​​ಗಳನ್ನು ಆರಿಸಿಕೊಳ್ಳುತ್ತಾರೆ. 92 ಪ್ರತಿಶತದಷ್ಟು ವೀಕ್ಷಕರು ಬ್ಲಾಕ್‌ಬಸ್ಟರ್ ಸಿನಿಮಾ, ದೃಶ್ಯ ಪರಿಣಾಮ, ಬಿಗ್ ಬಜೆಟ್ ಚಲನಚಿತ್ರಗಳು, ಆ್ಯಕ್ಷನ್ ಚಲನಚಿತ್ರಗಳು, ಸೈನ್ಸ್​ ಫಿಕ್ಷನ್, ಫ್ಯಾಂಟಸಿ ಚಲನಚಿತ್ರಗಳು ಅಥವಾ ತ್ರಿಡಿ ಚಲನಚಿತ್ರಗಳಂತಹ ಕೆಲ ಅಂಶಗಳ ಆಧಾರದ ಮೇಲೆ ಬಿಗ್​ ಸ್ಕ್ರೀನ್​​ ಆಯ್ಕೆ ಮಾಡಿಕೊಳ್ಳುತ್ತಾರೆ.

ಇದನ್ನೂ ಓದಿ: ಯಶ್​​ ಕುರಿತು ಟಾಲಿವುಡ್‌ ನಟ ರವಿತೇಜ ಹೇಳಿಕೆಗೆ ಅಭಿಮಾನಿಗಳ ಅಸಮಾಧಾನ

ಎಲ್ಲದಕ್ಕಿಂತ ಹೆಚ್ಚು ಥಿಯೇಟರ್​ಗಳಿಗೆ ಹೋಗಲು ಗ್ರಾಯಕರು ಆಯ್ಕೆ ಮಾಡುವ ಪ್ರಮುಖ ನಿರ್ಣಾಯಕ ಅಂಶಗಳೆಂದರೆ - ಕಥಾಹಂದರ, ಪಾತ್ರವರ್ಗ, ನಿರ್ದೇಶಕರು, ವಿಮರ್ಶೆಗಳು, ರೇಟಿಂಗ್‌ಗಳು ಮತ್ತು ಅವರ ಮೇಲೆ ಟ್ರೇಲರ್‌ ಬೀರಿದ ಪ್ರಭಾವ.

ಇದನ್ನೂ ಓದಿ: ಸೌಂದರ್ಯದ ಪ್ರತಿರೂಪ ನಟಿ ತಮನ್ನಾ : ಸ್ಟೈಲಿಶ್​​ ಸೀರೆಯುಟ್ಟ ಹಾಲ್ಗೆನ್ನೆ ಚೆಲುವೆಯ ಬೆಡಗು ಭಿನ್ನಾಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.