ETV Bharat / entertainment

ಎಸ್‌ಎಸ್ ರಾಜಮೌಳಿ ಜನ್ಮದಿನ: ದೂರದೃಷ್ಟಿಯ ನಿರ್ದೇಶಕರಿಂದ ಹೆಣೆಯಲ್ಪಟ್ಟ ಅತ್ಯುತ್ತಮ ಖಳನಾಯಕ ಪಾತ್ರಗಳಿವು!

author img

By ETV Bharat Karnataka Team

Published : Oct 10, 2023, 12:41 PM IST

SS Rajamouli Birthday: ನಿರ್ದೇಶಕ ಎಸ್‌.ಎಸ್ ರಾಜಮೌಳಿ ಅವರು 50ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.

SS Rajamouli Birthday
ಎಸ್‌ಎಸ್ ರಾಜಮೌಳಿ ಜನ್ಮದಿನ

ಭಾರತೀಯ ಚಿತ್ರರಂಗದಲ್ಲಿ ಗಮನಾರ್ಹ ಬದಲಾವಣೆಗಳಾಗಿವೆ. ಕಲಾವಿದರ ಜೊತೆ ಜೊತೆಗೆ ನಿರ್ದೇಶಕರುಗಳ ಕಥೆ ಹೇಳುವ ಶೈಲಿಯೇ ಇದಕ್ಕೆ ಪ್ರಮುಖ ಕಾರಣ. ದೂರದೃಷ್ಟಿಯ ನಿರ್ದೇಶಕರಲ್ಲಿ ಪ್ರಮುಖರಾದ ಎಸ್‌ಎಸ್ ರಾಜಮೌಳಿ ಇಂದು ಜನ್ಮದಿನದ ಸಂಭ್ರಮದಲ್ಲಿದ್ದಾರೆ. ಆರ್​ಆರ್​ಆರ್​, ಬಾಹುಬಲಿ, ಈಗ ಅಂತಹ ಸಿನಿಮಾಗಳನ್ನು ನಿರ್ದೇಶಿಸಿರುವ ಖ್ಯಾತ ನಿರ್ದೇಶಕರಿಗೆ ಕುಟುಂಬಸ್ಥರು, ಆತ್ಮೀಯರು, ಚಿತ್ರರಂಗದವರೂ ಸೇರಿದಂತೆ ಕೋಟ್ಯಂತರ ಸಂಖ್ಯೆಯ ಅಭಿಮಾನಿಗಳು ಶುಭಾಶಯ ಕೋರುತ್ತಿದ್ದಾರೆ.

  • " class="align-text-top noRightClick twitterSection" data="">

ಎಸ್‌ಎಸ್ ರಾಜಮೌಳಿ ಕಥೆ ರವಾನಿಸುವ ಶೈಲಿ ಬಹಳ ವಿಭಿನ್ನ. ಖಳನಾಯಕರು ಕೂಡ ಚಿತ್ರದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಾರೆ. ನಾಯಕನ ಪ್ರಯಾಣಕ್ಕೆ ವಿಲನ್​ಗಳ ಕೊಡುಗೆ ಅಪಾರ. ಹಾಗಾಗಿ, ನಾಯಕನ ಜೊತೆಗೆ ಖಳನಾಯಕನ ಪಾತ್ರವನ್ನೂ ಕೂಡ ರಾಜಮೌಳಿ ಅವರು ಬಹುಳ ಅಚ್ಚುಕಟ್ಟಾಗಿ ಹೆಣೆಯುತ್ತಾರೆ. ಈ ಹಿನ್ನೆಲೆ ಅವರ ಸಿನಿಮಾಗಳು ಶ್ರೇಷ್ಠ ಎನಿಸಿಕೊಳ್ಳುತ್ತವೆ. ರಾಜಮೌಳಿ ಅವರು ಈ ಪರಿಕಲ್ಪನೆಯನ್ನು ಬಹಳ ಆಳವಾಗಿ ಅರ್ಥ ಮಾಡಿಕೊಂಡಿದ್ದಾರೆ. ಅವರ ಸಿನಿಮಾಗಳಲ್ಲಿ ಈ ವಿಷಯ ಎದ್ದು ಕಾಣುತ್ತವೆ. ನಾಯಕನ ಜೊತೆಗೆ ಖಳನಾಯಕನ ಪಾತ್ರಕ್ಕೂ ಶಿಖರದಂತಹ ಮಹತ್ವ ಕೊಡುವುದರಿಂದಲೇ ಎಸ್‌ಎಸ್ ರಾಜಮೌಳಿ ಅವರ ಸಿನಿಮಾಗಳು ಬಹಳ ಅದ್ಭುತವಾಗಿ ಮೂಡಿ ಬರುತ್ತವೆ.

  • " class="align-text-top noRightClick twitterSection" data="">

ನಿರ್ದೇಶಕರಿಂದ ಹೆಣೆಯಲ್ಪಟ್ಟ ಅತ್ಯುತ್ತಮ ಖಳನಾಯಕ ಪಾತ್ರಗಳಿವು:

  • ಭಿಕ್ಷು ಯಾದವ್ (ಸೈ, 2004): ಇದೊಂದು ಸ್ಪೋರ್ಟ್​​ ಸಿನಿಮಾ. ಪ್ರದೀಪ್ ರಾವತ್ ಭಿಕ್ಷು ಯಾದವ್ ಪಾತ್ರವನ್ನು ಬಹಳ ಅದ್ಭುತವಾಗಿ ನಿರ್ವಹಿಸಿದ್ದಾರೆ. ಗೆಲ್ಲಲೇಬೇಕೆಂಬ ಅಚಲ ನಿರ್ಧಾರ, ನಾಯಕ ನಿತಿನ್‌ ಎದುರು ಮುಖಾಮುಖಿ ಆಗುವ ದೃಶ್ಯ ಭಿಕ್ಷು ಯಾದವ್ ಪಾತ್ರದ ಗಟ್ಟಿತನ ಪ್ರದರ್ಶಿಸಿದೆ.
  • ಲಾರ್ಡ್ ಯಮ (ಯಮದೊಂಗ, 2007): ಮೋಹನ್ ಬಾಬು ಅವರು ಯಮದೊಂಗ ಚಿತ್ರದಲ್ಲಿ ಲಾರ್ಡ್ ಯಮ ಪಾತ್ರವನ್ನು ನಿರ್ವಹಿಸಿದ್ದಾರೆ. ನಾಯಕ ಜೂನಿಯರ್ ಎನ್‌ಟಿಆರ್ ಜೊತೆಗಿನ ಕ್ಲ್ಯಾಶ್ ಸಿನಿಮಾಗೆ ಕಾಮಿಡಿ ಜೊತೆಗೆ ಡ್ರಾಮಾಟಿಕ್​​ ಅಂಶಗಳನ್ನು ಒದಗಿಸಿದೆ. ಈ ಪಾತ್ರ ರಾಜಮೌಳಿ ಅವರ ನಿರ್ದೇಶನ ಕೌಶಲ್ಯವನ್ನು ಎತ್ತಿ ಹಿಡಿದಿದೆ.
    • " class="align-text-top noRightClick twitterSection" data="">
  • ರಘುವೀರ್ / ರಣದೇವ್ ಬಿಲ್ಲಾ (ಮಗಧೀರ, 2009): ರೊಮ್ಯಾಂಟಿಕ್​​ ವಿತ್​​ ಆ್ಯಕ್ಷನ್​ ಸಿನಿಮಾ ಸೂಪರ್​ ಹಿಟ್​ ಆಗಿದ್ದು, ಇಂದಿಗೂ ಜನಪ್ರಿಯ. ನಾಯಕನಾಗಿ ರಾಮ್ ಚರಣ್ ಪಾತ್ರ ವಹಿಸಿದ್ದರೆ, ದೇವ್ ನಟನ ಶತ್ರುವಾಗಿ ನಟಿಸಿದ್ದಾರೆ. ಕ್ರೂರತೆ, ಕ್ರೌರ್ಯದಿಂದ ಕೂಡಿದ ರಘುವೀರ್ ಪಾತ್ರ ಕೂಡ ಚಿತ್ರದಲ್ಲಿ ಬಹಳ ಪ್ರಮುಖ ಮತ್ತು ಆಕರ್ಷಣೀಯ ಪಾತ್ರವಾಗಿ ಕಾರ್ಯ ನಿರ್ವಹಿಸಿದೆ.
    • " class="align-text-top noRightClick twitterSection" data="">
  • ರಾಮಿನೀಡು, ಮಕ್ಕಳ ಪಾತ್ರದಲ್ಲಿ ಮಲ್ಲಸೂರಿ, ಬೈರೆಡ್ಡಿ (ಮರ್ಯಾದಾ ರಾಮಣ್ಣ, 2010): ಕಾಮಿಡಿ ಸಿನಿಮಾದಲ್ಲಿ ರಾಮಿನೀಡು ಪಾತ್ರವನ್ನು ನಾಗಿನೀಡು ನಿರ್ವಹಿಸಿದ್ದಾರೆ. ಸಿನಿಮಾದ ಕಥೆ ಮುಂದೆ ಸಾಗುತ್ತಿದ್ದಂತೆ ಸೇಡು ತೀರಿಸಿಕೊಳ್ಳುವ ರಾಮಿನೀಡು ಮತ್ತು ಅವನ ಪುತ್ರರ ಪಾತ್ರಗಳು ಸಿನಿಪ್ರಿಯರನ್ನು ಆಕರ್ಷಿಸಿವೆ.
    • " class="align-text-top noRightClick twitterSection" data="">
  • ಸುದೀಪ್ (ಈಗ, 2012): ಅಭಿನಯ ಚಕ್ರವರ್ತಿ ಸುದೀಪ್ ಶ್ರೀಮಂತ ಮತ್ತು ನಿರ್ದಯ ಉದ್ಯಮಿ ಪಾತ್ರವನ್ನು ಬಹಳ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ನೊಣವಾಗಿ ಪುನರ್ಜನ್ಮ ಪಡೆಯುವ ನಾಯಕ ನಟನ ವಿರುದ್ಧ ಹೋರಾಡುವ ದೃಶ್ಯ ಬಹಳ ಆಕರ್ಷಣೀಯವಾಗಿದೆ. ಬಲವಾದ ಖಳನಾಯಕನ ಪಾತ್ರವನ್ನು ಸೃಷ್ಟಿಸುವ ರಾಜಮೌಳಿಯ ಅವರ ಸಾಮರ್ಥ್ಯಕ್ಕೆ ಇದು ಅತ್ಯುತ್ತಮ ಉದಾಹರಣೆ.
    • " class="align-text-top noRightClick twitterSection" data="">
  • ಭಲ್ಲಾಳದೇವ (ಬಾಹುಬಲಿ ಸೀರಿಸ್​​, 2015 - 2017): ರಾಣಾ ದಗ್ಗುಬಾಟಿ ನಿರ್ವಹಿಸಿರುವ ಭಲ್ಲಾಳದೇವ ಪಾತ್ರ ಭಾರತೀಯ ಚಿತ್ರರಂಗದದಲ್ಲಿ ಎಂದೂ ಮರೆಯಲಾಗದಂತಹ ಅದ್ಭುತ ಖಳನಾಯಕನ ಪಾತ್ರ. ಸಿನಿಮಾ ಸೂಪರ್​ ಹಿಟ್​ ಆಗಿದ್ದು, ಶತ್ರು ಪಾತ್ರಕ್ಕೆ ರಾಣಾ ದಗ್ಗುಬಾಟಿ ಅಚ್ಚುಕಟ್ಟಾಗಿ ಜೀವ ತುಂಬಿದ್ದಾರೆ.
    • " class="align-text-top noRightClick twitterSection" data="">
  • ಗವರ್ನರ್ ಸ್ಕಾಟ್ ಬಕ್ಸ್​ಟನ್​​ (ಆರ್​ಆರ್​ಆರ್​, 2022): ವಿಶ್ವ ಪ್ರತಿಷ್ಠಿತ ಆಸ್ಕರ್ ಗೌರವಕ್ಕೆ ಪಾತ್ರವಾಗಿರುವ ಆರ್​ರ್​ಆರ್​ ಚಿತ್ರದಲ್ಲಿ ದಿವಂಗತ ಉತ್ತರ ಐರಿಶ್ ನಟ ರೇ ಸ್ಟೀವನ್‌ಸನ್‌ ಖಳನಾಯಕನಾಗಿ ಕಾಣಿಸಿಕೊಂಡಿದ್ದರು. ಹಾಲಿವುಡ್​ನಲ್ಲಿ ಉತ್ತಮ ಕೆಲಸಕ್ಕೆ ಹೆಸರುವಾಸಿಯಾಗಿದ್ದ ದಿ. ನಟ, ಇಂಗ್ಲಿಷ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದರು.
    • " class="align-text-top noRightClick twitterSection" data="">

ಇದನ್ನೂ ಓದಿ: ಗೋಲ್ಡನ್​ ಬಾಯ್​ ನೀರಜ್​ ಚೋಪ್ರಾ ಜೊತೆ ಉಪಹಾರ ಸೇವಿಸಿದ ರಾಹುಲ್​ ರವೀಂದ್ರನ್, ಆನಂದ್​ ದೇವರಕೊಂಡ

ತಮ್ಮ ಹೆಚ್ಚಿನ ಸಿನಿಮಾಗಳಲ್ಲಿ ಪ್ರಬಲ ಎದುರಾಳಿ ಅಥವಾ ಖಳನಾಯಕರ ಪಾತ್ರ ರೂಪಿಸುವ ಮೂಲಕ ಎಸ್‌ಎಸ್ ರಾಜಮೌಳಿ ಅವರ ಪ್ರತಿಭೆ ಪ್ರದರ್ಶನವಾಗಿದೆ. ನಾಯಕರ ಜೊತೆ ಜೊತೆಗೆ ಎದುರಾಳಿ ಪಾತ್ರಗಳೂ ಕೂಡ ಗಟ್ಟಿತನದಿಂದ ಕೂಡಿರುವ ಮೂಲಕ ಸಿನಿಮಾ ಶೈಲಿಯನ್ನೇ ಅತ್ಯುತ್ತಮವಾಗಿಸಿದ್ದಾರೆ. ಒಟ್ಟಾರೆ ಭಾರತೀಯ ಚಿತ್ರರಂಗಕ್ಕೆ ಈ ಖ್ಯಾತ ನಿರ್ದೇಶಕರ ಕೊಡುಗೆ ಅಪಾರ. ರಾಜಮೌಳಿ ಅವರ ಮುಂದಿನ ಸಿನಿಮಾ SSMB29. ತಾತ್ಕಾಲಿಕ ಶೀರ್ಷಿಕೆಯ ಈ ಸಿನಿಮಾದಲ್ಲಿ ಸೂಪರ್‌ ಸ್ಟಾರ್ ಮಹೇಶ್ ಬಾಬು ಪ್ರಮುಖ ಪಾತ್ರ ವಹಿಸಲಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.