ETV Bharat / entertainment

ಸುಂದರ ಫೋಟೋಗಳಲ್ಲಿ ಶಾರುಖ್​ ಖಾನ್​ ಕುಟುಂಬ: 'ಪಠಾಣ್​ ಫ್ಯಾಮಿಲಿ' ಎಂದ ಫ್ಯಾನ್ಸ್

author img

By

Published : Apr 18, 2023, 2:06 PM IST

ಶಾರುಖ್​ ಖಾನ್ ಫ್ಯಾಮಿಲಿ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್​ ಸದ್ದು ಮಾಡುತ್ತಿದೆ.

Shah Rukh Khan family
ಶಾರುಖ್​ ಖಾನ್​ ಕುಟುಂಬ

ಬಾಲಿವುಡ್ ಕಿಂಗ್​​ ಖಾನ್​ ಶಾರುಖ್ ತಮ್ಮ ಕುಟುಂಬದೊಂದಿಗೆ ಸುಂದರ ಚಿತ್ರಗಳಿಗೆ ಕ್ಯಾಮರಾಗೆ ಪೋಸ್ ಕೊಟ್ಟಿದ್ದಾರೆ. ಕಿಂಗ್​ ಖಾನ್​​ ಫ್ಯಾಮಿಲಿ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿ ಸದ್ದು ಮಾಡುತ್ತಿದೆ. ಶಾರುಖ್​​ ಪತ್ನಿ, ಇಂಟೀರಿಯರ್ ಡಿಸೈನರ್ ಗೌರಿ ಖಾನ್ ತಮ್ಮ ಇನ್​ಸ್ಟಾ ಖಾತೆಯಲ್ಲಿ ಅಪರೂಪದ ಚಿತ್ರವನ್ನು ಹಂಚಿಕೊಂಡಿದ್ದಾರೆ. ಪತಿ ಶಾರುಖ್​, ಮಕ್ಕಳಾದ ಆರ್ಯನ್ ಖಾನ್, ಸುಹಾನಾ ಖಾನ್ ಮತ್ತು ಅಬ್ರಾಮ್ ಖಾನ್ ಒಳಗೊಂಡಿರುವ ಚಿತ್ರಗಳೀಗ ಅಭಿಮಾನಿಗಳ ಪ್ರೀತಿಗೆ ಪಾತ್ರವಾಗಿದೆ. ಅದ್ಧೂರಿ ಒಳಾಂಗಣದಲ್ಲಿ ಸೆರೆಹಿಡಿಯಲಾದ ಚಿತ್ರಗಳಲ್ಲಿ, ಖಾನ್​ ಕುಟುಂಬಸ್ಥರು ಬ್ಲ್ಯಾಕ್​ ಅಂಡ್​ ​ ವೈಟ್​ ಡ್ರೆಸ್​ ಧರಿಸಿದ್ದಾರೆ.

ಗೌರಿ ಖಾನ್ ಹಂಚಿಕೊಂಡಿರುವ ಚಿತ್ರವೂ ಸೇರಿದಂತೆ ಸೋಷಿಯಲ್​ ಮೀಡಿಯಾದಲ್ಲಿ ಕೆಲ ಫೋಟೋಗಳು ಸದ್ದು ಮಾಡುತ್ತಿವೆ. ಶಾರುಖ್​ ಫ್ಯಾನ್​ ಕ್ಲಬ್​ ಕೂಡ ಹಲವು ಫೋಟೋಗಳನ್ನು ಶೇರ್ ಮಾಡಿಕೊಂಡಿದೆ. ಅದರಲ್ಲಿ ಬಿಳಿ ಮತ್ತು ನೀಲಿ ಬಟ್ಟೆಗಳನ್ನು ಧರಿಸಿದ್ದು, ಕ್ಯಾಂಡಿಡ್ ಚಿತ್ರಗಳಲ್ಲಿ ಖಾನ್​ ಕುಟುಂಬಸ್ಥರು ನಗುತ್ತಿರುವುದನ್ನು ಕಾಣಬಹುದು. ಸುಹಾನಾ ಮತ್ತು ಆರ್ಯನ್ ಅವರು ಪುಟ್ಟ ತಮ್ಮ ಅಬ್ರಾಹಂ ನನ್ನು ನೋಡುತ್ತಿರುವಾಗ, ಗೌರಿ, ಶಾರುಖ್ ಮತ್ತು ಅಬ್ರಾಮ್ ಕ್ಯಾಮರಾವನ್ನು ನೋಡುತ್ತಿದ್ದರು. ಮತ್ತೊಂದು ಫೋಟೋಶೂಟ್‌ನಲ್ಲಿ ಇಡೀ ಕುಟುಂಬ ಕ್ಯಾಮರಾ ಕಣ್ಣೊಳಗೆ ಸೆರೆ ಆಗಿದೆ. ಶಾರುಖ್, ಆರ್ಯನ್ ಮತ್ತು ಅಬ್ರಾಹಂ ಬ್ಲ್ಯಾಕ್​ ಲೆದರ್ ಜಾಕೆಟ್‌ ಧರಿಸಿ ಸಖತ್​ ಸ್ಟೈಲಿಶ್​ ಆಗಿ ಕಾಣಿಸಿಕೊಂಡಿದ್ದಾರೆ. ಚಿತ್ರಗಳ ಮೇಲೆ, ಅಭಿಮಾನಿಯೊಬ್ಬರು "ಫ್ಯಾಮಿಲಿ ವೈಬ್" ಎಂದು ಬರೆದಿದ್ದಾರೆ. ಮತ್ತೊಬ್ಬರು ಶಾರುಖ್ ಅವರ ಇತ್ತೀಚಿನ ಚಿತ್ರ ಪಠಾಣ್​ ಅನ್ನು ಉಲ್ಲೇಖಿಸಿ "ನಮ್ಮ ಪಠಾಣ್ ಕುಟುಂಬ" ಎಂದು ಬರೆದಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಮತ್ತೊಂದು ಚಿತ್ರ ಕೂಡ ಸಾಕಷ್ಟು ಸದ್ದು ಮಾಡಿದೆ. ಶಾರುಖ್ ಮತ್ತು ಹಿರಿಯ ಪುತ್ರ ಆರ್ಯನ್ ಗ್ರೀನ್​​ ಜಾಕೆಟ್‌ ಧರಿಸಿ ಕ್ಯಾಮರಾ ಕಣ್ಣೊಳಗೆ ಸೆರೆಯಾಗಿದ್ದಾರೆ. ಇವರನ್ನು ನೋಡಿದ್ರೆ ತಂದೆ ಮಗ ಅಂತಾ ಹೇಳೋದು ಬಹಳ ಕಷ್ಟ. ಶಾರುಖ್​ ಖಾನ್​​ ಈ ವಯಸ್ಸಿನಲ್ಲಿ ಸಖತ್​ ಎನರ್ಜಿಟಿಕ್​ ಆಗಿದ್ದು, ಆರ್ಯನ್ ಸಹೋದರನಂತೆ ಕಾಣುತ್ತಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಫ್ಯಾನ್ಸ್​​ ಪೇಜ್​​​ನಲ್ಲಿ ಪೋಸ್ಟ್ ಮಾಡಿದ ಈ ಫೋಟೋಗೆ ಪ್ರತಿಕ್ರಿಯಿಸಿದ ಅಭಿಮಾನಿಯೊಬ್ಬರು "ರಾಜ ಮತ್ತು ರಾಜಕುಮಾರ" ಎಂದು ಕಮೆಂಟ್ ಮಾಡಿದ್ದಾರೆ. 'ಅಪ್ಪ ಮಗನ ಫೋಟೋ ಅದ್ಭುತವಾಗಿದೆ' ಎಂದು ಮತ್ತೊಬ್ಬರು ಹೇಳಿದ್ದಾರೆ. ಇನ್ನೋರ್ವ ಸಾಮಾಜಿಕ ಜಾಲತಾಣ ಬಳಕೆದಾರರು "ಜೆರಾಕ್ಸ್ ಕಾಪಿ" ಎಂದು ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: ಸುಂದರ ಫೋಟೋ ಹಂಚಿಕೊಂಡ ಶಾರುಖ್ ಪತ್ನಿ: 'ಪರ್ಫೆಕ್ಟ್ ಫ್ಯಾಮಿಲಿ' ಎಂದ ಫ್ಯಾನ್ಸ್

ಶಾರುಖ್ ಖಾನ್ ಮತ್ತು ಗೌರಿ ಖಾನ್ 1991ರಲ್ಲಿ ವಿವಾಹವಾಗಿದ್ದರು. ಬಾಲಿವುಡ್​ ಸ್ಟಾರ್ ಕಪಲ್​ನ ಹಿರಿಯ ಪುತ್ರ ಆರ್ಯನ್, ಎರಡನೇ ಮಗಳು ಸುಹಾನಾ ಮತ್ತು ಕಿರಿಯ ಮಗ ಅಬ್ರಾಹಂ ಕೂಡ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಾರೆ. ಹಿರಿಯ ಮಗ ಸೌತ್ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದಿಂದ ಪದವಿ ಪಡೆದಿದ್ದಾರೆ. ಮಗಳು ಜೋಯಾ ಅಖ್ತರ್ ಅವರ ದಿ ಆರ್ಚೀಸ್‌ನಲ್ಲಿ ಮೊದಲ ಬಾರಿಗೆ ಅಭಿನಯ ಮಾಡುತ್ತಿದ್ದಾರೆ. ಆರ್ಚೀಸ್‌ ನೆಟ್‌ಫ್ಲಿಕ್ಸ್ ಈ ವರ್ಷ ಬಿಡುಗಡೆಯಾಗಲು ಸಿದ್ಧವಾಗಿದೆ.

ಇದನ್ನೂ ಓದಿ: 'ಪ್ರೀತಿಸಲು ನನಗೆ ಸಮಯವಿಲ್ಲ': ಶೆಹನಾಜ್ ಜೊತೆ ಡೇಟಿಂಗ್​​ ವದಂತಿಗೆ ರಾಘವ್ ಪ್ರತಿಕ್ರಿಯೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.