ETV Bharat / entertainment

ಸುಂದರ ಫೋಟೋ ಹಂಚಿಕೊಂಡ ಶಾರುಖ್ ಪತ್ನಿ: 'ಪರ್ಫೆಕ್ಟ್ ಫ್ಯಾಮಿಲಿ' ಎಂದ ಫ್ಯಾನ್ಸ್

author img

By

Published : Mar 26, 2023, 7:44 PM IST

Updated : Mar 26, 2023, 7:55 PM IST

ಸೂಪರ್​ ಸ್ಟಾರ್ ಶಾರುಖ್ ಖಾನ್​ ಪತ್ನಿ ಗೌರಿ ಸುಂದರ ಫ್ಯಾಮಿಲಿ ಫೋಟೋ ಶೇರ್ ಮಾಡಿದ್ದಾರೆ.

Shah Rukh Khan family photo
ಶಾರುಖ್ ಖಾನ್​ ಫ್ಯಾಮಿಲಿ ಫೋಟೋ

ಬಾಲಿವುಡ್‌ನ ಕಿಂಗ್ ಖಾನ್ ಶಾರುಖ್​ ಪ್ರಪಂಚದಾದ್ಯಂತ ದೊಡ್ಡ ಅಭಿಮಾನಿಗಳ ಬಳಗ ಹೊಂದಿದ್ದಾರೆ. ಇವರ ಕುಟುಂಬ ಸದಸ್ಯರು ಸಹ ಸೆಲೆಬ್ರಿಟಿಗಳಂತೆ ರಾಯಲ್​ ಲೈಫ್​​ ಲೀಡ್​ ಮಾಡುತ್ತಿದ್ದಾರೆ. ಎಸ್​ಆರ್​ಕೆ ಮತ್ತು ಗೌರಿ ಬಾಲಿವುಡ್​ನ ಪವರ್​ಫುಲ್​ ಕಪಲ್​ ಅಂತಾನೆ ಫೇಮಸ್​. ಇವರಿಗೆ ಮೂವರು ಮಕ್ಕಳು. ಈ ಸುಂದರ ಕುಟುಂಬದ ಬಗ್ಗೆ ತಿಳಿದುಕೊಳ್ಳಲು ಅಪಾರ ಸಂಖ್ಯೆಯ ಅಭಿಮಾನಿಗಳು ಕಾತರರಾಗಿರುತ್ತಾರೆ.

ಶಾರುಖ್​​ ಖಾನ್​​ ಪತ್ನಿ, ಇಂಟೀರಿಯರ್ ಡಿಸೈನರ್ ಗೌರಿ ಖಾನ್ ತಮ್ಮ ಕುಟುಂಬದ ಫೋಟೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಶಾರುಖ್ ಖಾನ್, ಗೌರಿ ಖಾನ್​​ ಮತ್ತು ಅವರ ಮಕ್ಕಳಾದ ಆರ್ಯನ್, ಸುಹಾನಾ, ಅಬ್ರಾಮ್ ಅವನ್ನೊಳಗೊಂಡ ಫ್ಯಾಮಿಲಿ ಫೋಟೋ ಇದು. ಚಿತ್ರದಲ್ಲಿ ಎಲ್ಲರೂ ಕಪ್ಪುಡುಗೆಯಲ್ಲಿ ಕಂಗೊಳಿಸಿದ್ದಾರೆ.

ಇಂದು ಗೌರಿ ಖಾನ್ ತಮ್ಮ ಅಭಿಮಾನಿಗಳಿಗಾಗಿ ಸಾಮಾಜಿಕ ಮಾಧ್ಯಮದಲ್ಲಿ ಫ್ಯಾಮಿಲಿ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಸಂಪೂರ್ಣ ಕುಟುಂಬದ ಫೋಟೋ ಅಭಿಮಾನಿಗಳ ಕಣ್ಮನ ಸೆಳೆದಿದೆ. ಮದುವೆಯಾಗಿ 31 ವರ್ಷ ಕಳೆದರೂ ಅವರ ಕೆಮಿಸ್ಟ್ರಿಗೆ ಸರಿ ಸಾಟಿಯೇ ಇಲ್ಲ ನೋಡಿ. ಈ ಫೋಟೋ ಬಹಳ ಸುಂದರವಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಹೆಚ್ಚು ವೈರಲ್​ ಆಗಿದ್ದು, ಅಭಿಮಾನಿಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

'ಪಠಾಣ್​ ಕಿ ಫ್ಯಾಮಿಲಿ' : ಗೌರಿ ಖಾನ್​ ಈ ಚಿತ್ರವನ್ನು ಹಂಚಿಕೊಂಡ ಕೂಡಲೇ, ಅಭಿಮಾನಿಗಳು ಕಾಮೆಂಟ್ ವಿಭಾಗವನ್ನು ತುಂಬಲು ಪ್ರಾರಂಭಿಸಿದ್ದಾರೆ. ಅವರ ಕಾಮೆಂಟ್​ ಸೆಕ್ಷನ್​​ ಹಾರ್ಟ್ ಎಮೋಜಿಗಳಿಂದ ತುಂಬಿದೆ. ಚಿತ್ರಕ್ಕೆ ಪ್ರತಿಕ್ರಿಯಿಸಿದ ಅಭಿಮಾನಿಯೊಬ್ಬರು, ಪೋಸ್ಟ್ ಮಾಡಿದ್ದಕ್ಕಾಗಿ ಧನ್ಯವಾದಗಳು ಮೇಡಂ ಎಂದು ಬರೆದಿದ್ದಾರೆ. ಸುಂದರ ಮತ್ತು ಅದ್ಭುತ ಕಿಂಗ್ ಖಾನ್, ಸುಂದರ ಕುಟುಂಬ, ಕಿಂಗ್ ಖಾನ್ ಅವರನ್ನು ಪ್ರೀತಿಸುತ್ತೇನೆ ಎಂದು ಬರೆದಿದ್ದಾರೆ. 'ಪಠಾಣ್​ ಕಿ ಫ್ಯಾಮಿಲಿ' ಎಂದು ಮತ್ತೊಬ್ಬರು ಬರೆದಿದ್ದಾರೆ. 'ಪರ್ಫೆಕ್ಟ್ ಪ್ಯಾಮಿಲಿ' ಎಂದು ಸಹ ಗುಣಗಾನ ಮಾಡಿದ್ದಾರೆ.

ಇದನ್ನೂ ಓದಿ: ಶೀಘ್ರದಲ್ಲೇ ಹಸೆಮಣೆ ಏರಲಿದ್ದಾರಾ ನಟಿ ಪರಿಣಿತಿ ಚೋಪ್ರಾ - ಸಂಸದ ರಾಘವ್ ಚಡ್ಡಾ?

ಬಾಲಿವುಡ್‌ ಬಾದ್‌ ಶಾ ಶಾರುಖ್ ಖಾನ್ ಅವರ ಪತ್ನಿ ಆಗಿರುವುದರಿಂದ ಗೌರಿ ಖಾನ್​ ಸಾಕಷ್ಟು ಜನಪ್ರಿಯತೆ ಗಳಿಸಿದ್ದಾರೆ. ಇಂಟೀರಿಯರ್ ಡಿಸೈನರ್, ಚಲನಚಿತ್ರ ನಿರ್ಮಾಪಕಿ ಆಗಿಯೂ ಕೆಲಸ ಮಾಡುತ್ತಿದ್ದಾರೆ. ಗೌರಿ ಖಾನ್ ಮತ್ತು ಎಸ್​ಅರ್​ಕೆ ಪ್ರೀತಿಸಿ ಮದುವೆ ಆಗಿದ್ದು, ಅದೆಷ್ಟೋ ಯುವ ಜೋಡಿಗಳಿಗೆ ಸ್ಫೂರ್ತಿ ಇವರು.

ಇದನ್ನೂ ಓದಿ: ಸೀರೆಯಲ್ಲಿ ಸಮಂತಾ: 'ಶಾಕುಂತಲೆ'ಯ ಅಂದಕ್ಕೆ ಸರಿಸಾಟಿ ಯಾರು?

ಶಾರುಖ್​ ಖಾನ್​ ಸಿನಿಮಾಗಳ ಬಗ್ಗೆ ನೋಡುವುದಾದರೆ, ಇತ್ತೀಚೆಗೆ ತೆರೆಕಂಡ ಪಠಾಣ್​ ಅಭೂತಪೂರ್ವ ಯಶಸ್ಸು ಕಂಡಿದೆ. ಈ ಚಿತ್ರ ಭಾರೀ ಆಕ್ರೋಶ ಎದುರಿಸಿಯೇ ತೆರೆಕಂಡಿತ್ತು. ಆದ್ರೆ ಒಂದು ತಿಂಗಳಲ್ಲಿ ಸಾವಿರ ಕೋಟಿ ಕ್ಲಬ್ ಸೇರುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದೆ. ಇನ್ನು ಅವರ ಮುಂಬರುವ ಬಹು ನಿರೀಕ್ಷಿತ ಚಿತ್ರ 'ಜವಾನ್​' ಶೂಟಿಂಗ್​ ಕೊನೆ ಹಂತದಲ್ಲಿದೆ. ಸಲ್ಮಾನ್​ ಖಾನ್​ ಅವರ ಟೈಗರ್​ 3 ಸಿನಿಮಾದಲ್ಲಿ ಅತಿಥಿ ಪಾತ್ರ ವಹಿಸಲಿದ್ದಾರೆ.

Last Updated :Mar 26, 2023, 7:55 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.