ETV Bharat / entertainment

'ಸಪ್ತ ಸಾಗರದಾಚೆ ಎಲ್ಲೋ ಸೈಡ್​ ಬಿ' ಟ್ರೇಲರ್​ ರಿಲೀಸ್​; ಅಭಿಮಾನಿಗಳಲ್ಲಿ ಗರಿಗೆದರಿದ ಕುತೂಹಲ

author img

By ETV Bharat Karnataka Team

Published : Nov 4, 2023, 7:26 PM IST

SSESideB trailer released: 'ಸಪ್ತ ಸಾಗರದಾಚೆ ಎಲ್ಲೋ ಸೈಡ್​ ಬಿ' ಚಿತ್ರದ ಟ್ರೇಲರ್​ ಇದೀಗ ಬಿಡುಗಡೆಯಾಗಿದೆ.

Sapta Sagaradaache Ello Side B trailer released
'ಸಪ್ತ ಸಾಗರದಾಚೆ ಎಲ್ಲೋ ಸೈಡ್​ ಬಿ' ಟ್ರೇಲರ್​ ರಿಲೀಸ್​; ಅಭಿಮಾನಿಗಳಲ್ಲಿ ಗರಿಗೆದರಿದ ಕುತೂಹಲ

ಸ್ಯಾಂಡಲ್​ವುಡ್​ ಸಿಂಪಲ್​ ಸ್ಟಾರ್ ರಕ್ಷಿತ್​ ಶೆಟ್ಟಿ ಮುಖ್ಯಭೂಮಿಕೆಯ ಮುಂದಿನ ಬಹುನಿರೀಕ್ಷಿತ ಸಿನಿಮಾ 'ಸಪ್ತ ಸಾಗರದಾಚೆ ಎಲ್ಲೋ ಸೈಡ್​ ಬಿ'. ಮೊದಲ ಭಾಗ ಅಂದರೆ 'ಸಪ್ತ ಸಾಗರದಾಚೆ ಎಲ್ಲೋ ಸೈಡ್​ ಎ' ಇತ್ತೀಚೆಗಷ್ಟೇ ತೆರೆಕಂಡು ಸೂಪರ್​ ಹಿಟ್​​​ ಆಗಿದೆ. ಪ್ರೇಕ್ಷಕರನ್ನು ಪ್ರೇಮ ಪ್ರಪಂಚಕ್ಕೆ ಕೊಂಡೊಯ್ದ ಸಿನಿಮಾ ಇದು. 'ಸಪ್ತ ಸಾಗರದಾಚೆ ಎಲ್ಲೋ ಸೈಡ್​ ಬಿ' ಬಿಡುಗಡೆಗೆ ದಿನಗಣನೆ ಆರಂಭಗೊಂಡಿದ್ದು, ಇಂದು ಟ್ರೇಲರ್​ ರಿಲೀಸ್​ ಆಗಿದೆ.

  • " class="align-text-top noRightClick twitterSection" data="">

ಟ್ರೇಲರ್​ ಅನಾವರಣ: ಕಳೆದ ಸೆಪ್ಟೆಂಬರ್​ 1ರಂದು 'ಸಪ್ತ ಸಾಗರದಾಚೆ ಎಲ್ಲೋ ಸೈಡ್​ ಎ' ತೆರೆಗಪ್ಪಳಿಸಿತ್ತು. ನಿರೀಕ್ಷೆಯಂತೆ ಪ್ರೇಕ್ಷಕರನ್ನು ಸೆಳೆಯುವಲ್ಲಿ ಸಿನಿಮಾ ಯಶಸ್ಸು ಕಂಡಿತು. ಅಂದ ಕೊಂಡಂತೆ ಕಂಟೆಂಟ್​​ ಆಧಾರಿತ ಸಿನಿಮಾದಲ್ಲಿ ಹೊಸತನವೂ ಇತ್ತು. ಸಿನಿಮಾ ತೆಲುಗಿಗೂ ಡಬ್​ ಆಗಿ ಬಿಡುಗಡೆ ಆಯಿತು. ಪಾರ್ಟ್ 2 ನವೆಂಬರ್​ 17 ರಂದು ತೆರೆಕಾಣಲಿದೆ. ಪ್ರಚಾರದ ಭಾಗವಾಗಿ ಇಂದು ಟ್ರೇಲರ್​​​​ ಅನಾವರಣಗೊಳಿಸಲಾಗಿದೆ.

ಮನು ಮತ್ತು ಪ್ರಿಯಾಳ ಪ್ರಣಯ ಪ್ರಪಂಚಕ್ಕೆ ಮತ್ತೊಂದು ಹುಡುಗಿಯ ಆಗಮನ. ಕಥಾ ನಾಯಕ ಮನುವಿನ ಸಾಕಷ್ಟು ತುಮುಲಗಳನ್ನು ಟ್ರೇಲರ್​ನಲ್ಲಿ ತೋರಿಸಲಾಗಿದೆ. ಮನು (ರಕ್ಷಿತ್​ ಶೆಟ್ಟಿ) ಜೈಲಿನಿಂದ ಹೊರಬರುವ ದೃಶ್ಯದಿಂದ ಟ್ರೇಲರ್​ ಆರಂಭಗೊಳ್ಳುತ್ತೆ. ಪ್ರಿಯಾ (ರುಕ್ಮಿಣಿ ವಸಂತ್​) ಆಡಿದ ಪ್ರತಿಯೊಂದು ಮಾತುಗಳು ಮನುವಿನ ಕಿವಿಗೆ ಸಮುದ್ರದ ಅಲೆಗಳಂತೆ ಅಪ್ಪಳಿಸುತ್ತದೆ. ಒಂದೊಂದು ಝಲಕ್​ನಲ್ಲಿ ಚಿತ್ರದ ಪ್ರತಿಯೊಬ್ಬ ಪಾತ್ರಧಾರಿಗಳು ಬಂದು ಹೊಸ ರೀತಿಯ ಕೌತುಕಕ್ಕೆ ಕಾರಣವಾಗುತ್ತಾರೆ. ಕೊನೆಯಲ್ಲಿ ಪ್ರಿಯಾ ಕಡಲ ತೀರದಲ್ಲಿ ಸಂತೋಷದಿಂದ ನಡೆದುಕೊಂಡು ದೃಶ್ಯವನ್ನು ತೋರಿಸಲಾಗಿದೆ. ತುಂಬಾ ಚೆನ್ನಾಗಿ ಟ್ರೇಲರ್​ ಮೂಡಿ ಬಂದಿದೆ.

ಇದನ್ನೂ ಓದಿ: SSE SideA: ಹುಡುಗರ ಹೃದಯಸಾಗರ ಕದಡಿದ ರುಕ್ಮಿಣಿ... ಚಂದನವನದಲ್ಲಿ 'ಪುಟ್ಟಿ'ಯದ್ದೇ ಗುನುಗು

ಹೇಮಂತ್​ ಎಂ ರಾವ್ ಆ್ಯಕ್ಷನ್​ ಕಟ್​ ಹೇಳಿರುವ 'ಸಪ್ತ ಸಾಗರದಾಚೆ ಎಲ್ಲೋ ಸೈಡ್​ ಎ' ಚಿತ್ರದಲ್ಲಿ ಸಿಂಪಲ್​ ಸ್ಟಾರ್ ರಕ್ಷಿತ್​ ಶೆಟ್ಟಿ ಜೊತೆ ರುಕ್ಮಿಣಿ ವಸಂತ್​ ಸ್ಕ್ರೀನ್​​ ಶೇರ್ ಮಾಡಿದ್ದರು. ಮನು ಮತ್ತು ಪ್ರಿಯಾ ಪಾತ್ರದಲ್ಲಿ ಈ ಜೋಡಿ ಮಿಂಚಿತ್ತು. ಮುಂದುವರಿದ ಭಾಗದಲ್ಲಿ ಚೈತ್ರಾ ಜೆ ಆಚಾರ್​ ಕೂಡ ಕಾಣಿಸಿಕೊಳ್ಳಲಿದ್ದಾರೆ. ಮತ್ತೊಮ್ಮೆ ಪ್ರೇಮಪ್ರಪಂಚಕ್ಕೆ ಭೇಟಿ ಕೊಡಲು ಅಭಿಮಾನಿಗಳು ಸಜ್ಜಾಗಿದ್ದಾರೆ.

ಅತಿ ಕಡಿಮೆ ಅವಧಿಯಲ್ಲಿ ಸೀಕ್ವೆಲ್​​ ರಿಲೀಸ್​ ಆಗುತ್ತಿರುವುದು ಎಂಬ ಹೆಗ್ಗಳಿಕೆಯೂ ಈ ಚಿತ್ರಕ್ಕಿದೆ. ಸಿನಿಮಾ ರಿಲೀಸ್​ ಡೇಟ್​ ಅನ್ನು ಎರಡು ಬಾರಿ ಮುಂದೂಡಲಾಗಿದ್ದರೂ ಕೂಡ ಎರಡೂವರೆ ತಿಂಗಳಲ್ಲೇ ಪಾರ್ಟ್ 2 ಬಿಡುಗಡೆ ಆಗುತ್ತಿದೆ. ಸೆಪ್ಟೆಂಬರ್​ 1 ರಂದು 'ಸಪ್ತ ಸಾಗರದಾಚೆ ಎಲ್ಲೋ ಸೈಡ್​ ಎ' ತೆರೆಗಪ್ಪಳಿಸಿತ್ತು. ಒಂದು ತಿಂಗಳ ಅಂತರದಲ್ಲಿ ಸಿನಿಮಾ ಬಿಡುಗಡೆ ಮಾಡಲು ನಿರ್ಧಾರ ಕೈಗೊಳ್ಳಲಾಗಿತ್ತು. ಅಕ್ಟೋಬರ್​ 20 ರಂದು ಸೀಕ್ವೆಲ್​ ರಿಲೀಸ್​ ಆಗಲಿದೆ ಎಂದು ಹೇಳಲಾಯಿತು. ನಂತರ ಅಕ್ಟೋಬರ್​ 27 ರಂದು ಸಿನಿಮಾ ಬಿಡುಗಡೆ ಆಗಲಿದೆ ಎನ್ನಲಾಗಿತ್ತು. ಇದೀಗ ಅಂತಿಮವಾಗಿ ನವೆಂಬರ್​ 17 ರಂದು ಪಾರ್ಟ್ ಬಿ ತೆರೆಕಾಣಲಿದೆ.

ಇದನ್ನೂ ಓದಿ: SSESideA: 'ಮನು-ಪ್ರಿಯಾಳ ಪ್ರೇಮಕಾವ್ಯ' ಓಟಿಟಿಯಲ್ಲಿ ಲಭ್ಯ.. ಮನೆಯಲ್ಲೇ ಕುಳಿತು ಚಿತ್ರ ವೀಕ್ಷಿಸಿ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.