ರಶ್ಮಿಕಾ, ರಣಬೀರ್ ಅಭಿನಯದ 'ಅನಿಮಲ್' ಶೂಟಿಂಗ್ ಕಂಪ್ಲೀಟ್; ಅಭಿಮಾನಿಗಳಲ್ಲಿ ಗರಿಗೆದರಿದ ನಿರೀಕ್ಷೆ
Published: Jun 22, 2023, 8:03 PM


ರಶ್ಮಿಕಾ, ರಣಬೀರ್ ಅಭಿನಯದ 'ಅನಿಮಲ್' ಶೂಟಿಂಗ್ ಕಂಪ್ಲೀಟ್; ಅಭಿಮಾನಿಗಳಲ್ಲಿ ಗರಿಗೆದರಿದ ನಿರೀಕ್ಷೆ
Published: Jun 22, 2023, 8:03 PM

2023ರ ಬಹುನಿರೀಕ್ಷಿತ ಚಲನಚಿತ್ರಗಳಲ್ಲಿ ಒಂದಾದ 'ಅನಿಮಲ್' ಚಿತ್ರದ ಶೂಟಿಂಗ್ ಮುಕ್ತಾಯಗೊಂಡಿದೆ.
ಸ್ಯಾಂಡಲ್ವುಡ್ನಿಂದ ಸಿನಿಮಾ ವೃತ್ತಿಜೀವನ ಆರಂಭಿಸಿ ಸದ್ಯ ಬಹುಭಾಷೆಗಳಲ್ಲಿ ರಶ್ಮಿಕಾ ಮಂದಣ್ಣ ಬ್ಯುಸಿಯಾಗಿದ್ದಾರೆ. ಅವರ ಮುಂಬರುವ ಬಹುನಿರೀಕ್ಷಿತ ಬಾಲಿವುಡ್ ಚಿತ್ರ 'ಅನಿಮಲ್' ಚಿತ್ರೀಕರಣ ಮುಕ್ತಾಯಗೊಂಡಿದೆ. ಹಿಂದಿ ಸ್ಟಾರ್ ನಟ ರಣಬೀರ್ ಕಪೂರ್ ಜೊತೆ ಸ್ಯಾಂಡಲ್ವುಡ್ ಸಾನ್ವಿ ತೆರೆ ಹಂಚಿಕೊಂಡಿದ್ದಾರೆ. ಇದೀಗ ಶೂಟಿಂಗ್ ಪೂರ್ಣಗೊಳಿಸಿದ್ದು, ಚಿತ್ರತಂಡದೊಂದಿಗಿನ ಫೋಟೋವನ್ನು ನಟಿ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.
'ಕಬೀರ್ ಸಿಂಗ್' ಖ್ಯಾತಿಯ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಅನಿಮಲ್ ಚಿತ್ರವು ಈ ವರ್ಷ ಬಿಡುಗಡೆಗೆ ಸಜ್ಜಾಗಿದೆ. 2023ರ ಬಹುನಿರೀಕ್ಷಿತ ಚಲನಚಿತ್ರಗಳಲ್ಲಿ ಒಂದಾಗಿದ್ದು, ಯಶಸ್ವಿಯಾಗುವ ನಿರೀಕ್ಷೆ ಚಿತ್ರತಂಡದ್ದು. ಟ್ರೇಲರ್ ಬಿಡುಗಡೆಗಾಗಿ ಅಭಿಮಾನಿಗಳು ಕಾದು ಕುಳಿತಿರುವ ಈ ಹೊತ್ತಿನಲ್ಲಿ 'ಅನಿಮಲ್' ಸೆಟ್‌ನ ಕೆಲವು ಚಿತ್ರಗಳು ಈಗಾಗಲೇ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿವೆ. ಇದೀಗ ರಶ್ಮಿಕಾ ಕೂಡ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದು, ಚಿತ್ರದ ಮೇಲೆ ಅಭಿಮಾನಿಗಳ ನಿರೀಕ್ಷೆ ಹೆಚ್ಚಾಗಿದೆ.
-
#Animal .. pieces of my heart. ❤️ pic.twitter.com/CRsvMqYHjT
— Rashmika Mandanna (@iamRashmika) June 20, 2023
'ಅನಿಮಲ್' ಸಿನಿಮಾದಲ್ಲಿ ರಣ್ಬೀರ್, ರಶ್ಮಿಕಾ ಮಾತ್ರವಲ್ಲದೇ, ಅನಿಲ್ ಕಪೂರ್ ಮತ್ತು ಬಾಬಿ ಡಿಯೋಲ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. 2023ರ ಆಗಸ್ಟ್ 11 ರಂದು ಚಿತ್ರಮಂದಿರಗಳಲ್ಲಿ ತೆರೆಕಾಣಲು ಸಿದ್ಧವಾಗಿದೆ. ಹಿಂದಿ, ತೆಲುಗು, ತಮಿಳು, ಮಲಯಾಳಂ ಮತ್ತು ಕನ್ನಡ ಸೇರಿ ಐದು ಭಾಷೆಗಳಲ್ಲಿ ದೇಶಾದ್ಯಂತ ಬಿಡುಗಡೆಯಾಗಲಿದೆ.
ಚಿತ್ರವು ಸನ್ನಿ ಡಿಯೋಲ್ ಅವರ ಮುಂಬರುವ ಚಿತ್ರ 'ಗದರ್ 2' ಮತ್ತು ಅಕ್ಷಯ್ ಕುಮಾರ್ ಅವರ OMG 2 ಸಿನಿಮಾದೊಂದಿಗೆ ಪೈಪೋಟಿ ಸಡೆಸಲಿದೆ. ಈ ಮೂರು ಚಿತ್ರಗಳು ಆಗಸ್ಟ್ನಲ್ಲಿ ತೆರೆಕಾಣಲಿದೆ. ಅನಿಮಲ್ ಸಿನಿಮಾನ್ನು ಭೂಷಣ್ ಕುಮಾರ್ ಮತ್ತು ಕ್ರಿಶನ್ ಕುಮಾರ್ ಅವರ ಟಿ-ಸೀರೀಸ್, ಮುರಾದ್ ಖೇತಾನಿಯ ಸಿನಿ1 ಸ್ಟುಡಿಯೋಸ್ ಮತ್ತು ಪ್ರಣಯ್ ರೆಡ್ಡಿ ವಂಗಾ ಅವರ ಭದ್ರಕಾಳಿ ಪಿಕ್ಚರ್ಸ್ ನಿರ್ಮಾಣ ಮಾಡಿದೆ.
ಇದಕ್ಕೂ ಮೊದಲು, 'ಅನಿಮಲ್' ನಿರ್ಮಾಪಕರು ರಣ್ಬೀರ್ ಅವರ ಫಸ್ಟ್ ಲುಕ್ ಪೋಸ್ಟರ್ ಅನ್ನು ಅನಾವರಣಗೊಳಿಸಿದರು. ಇದರಲ್ಲಿ ನಟ ತಮ್ಮ ತೋಳಿನ ಕೆಳಗೆ ಕೊಡಲಿ ಹಿಡಿದಿದ್ದಾರೆ, ಭುಜದ ಮೇಲೆ ರಕ್ತದ ಕಲೆಗಳನ್ನು ಹೊಂದಿದ್ದಾರೆ ಮತ್ತು ಸಿಗರೇಟ್ ಹಚ್ಚುವ ಸ್ಥಿತಿಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಪೋಸ್ಟರ್ ಬಳಿಕ ಚಿತ್ರದ ಮೇಲೆ ಅಭಿಮಾನಿಗಳ ಕುತೂಹಲ ಹೆಚ್ಚಾಗಿದೆ. ಇದಲ್ಲದೇ ಇತ್ತೀಚೆಗೆ ಸಿನಿಮಾದ ಪ್ರಿ-ಟೀಸರ್ ಕೂಡ ಬಿಡುಗಡೆಯಾಗಿತ್ತು. ಇದಕ್ಕೆ ಎಲ್ಲೆಡೆ ಭಾರೀ ಮೆಚ್ಚುಗೆ ಕೇಳಿಬಂದಿತ್ತು.
ರಣ್ಬೀರ್ ಇತ್ತೀಚೆಗೆ ನಟಿ ಶ್ರದ್ಧಾ ಕಪೂರ್ ಜೊತೆಗೆ 'ತು ಜೂಟಿ ಮೆ ಮಕ್ಕರ್' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಲವ್ ರಂಜನ್ ನಿರ್ದೇಶನದ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಾಕ್ಸ್ ಆಫೀಸ್ನಲ್ಲಿ ಸಖತ್ ಸದ್ದು ಮಾಡಿದೆ. 'ತು ಜೂಟಿ ಮೆ ಮಕ್ಕರ್'ಗೂ ಮುನ್ನ ಬಂದ ಬ್ರಹ್ಮಾಸ್ತ್ರ ಕೂಡ ಯಶಸ್ವಿ ಆಗಿತ್ತು. ರಶ್ಮಿಕಾ ಮಂದಣ್ಣ 'ಪುಷ್ಪ 2' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
