ETV Bharat / entertainment

ಕನ್ಫರ್ಮ್! ಮುಂದಿನ ಡಾನ್​​ ರಣ್​ವೀರ್​ ಸಿಂಗ್​​ - ಶಾರುಖ್​ ಅಭಿಮಾನಿಗಳಿಗೆ ನಿರಾಶೆ

author img

By

Published : Aug 9, 2023, 4:45 PM IST

Don 3 Title announcement video: ಫರ್ಹಾನ್​ ಅಖ್ತರ್ ಅವರ ಡಾನ್​ 3 ಸಿನಿಮಾದ ಫಸ್ಟ್ ಲುಕ್​ ವಿಡಿಯೋ ಅನಾವರಣಗೊಂಡಿದೆ.

Ranveer Singh as Don 3
ರಣ್​ವೀರ್​ ಸಿಂಗ್​​ ಡಾನ್​ 3

ಸೋಷಿಯಲ್​ ಮೀಡಿಯಾದಲ್ಲೀಗ 'ಡಾನ್​'ನದ್ದೇ ಹವಾ. ನಿನ್ನೆಯಷ್ಟೇ ನಿರ್ದೇಶಕ ಫರ್ಹಾನ್​ ಅಖ್ತರ್​ ಡಾನ್​ 3 ಸಿನಿಮಾ ಘೋಷಿಸಿ ಸಿನಿರಸಿಕರಿಗೆ ಸಿಹಿ ಹಂಚಿದ್ದರು. ಇಂದು ನಾಯಕ ನಟನ ಸ್ಪೆಷಲ್​ ವಿಡಿಯೋ ಶೇರ್ ಮಾಡಿ ಪ್ರೇಕ್ಷಕರಿಗೆ ಭರ್ಜರಿ ಪಾರ್ಟಿ ಕೊಟ್ಟಿದ್ದಾರೆ.

ಮುಂದಿನ ಡಾನ್​​ ರಣ್​ವೀರ್​ ಸಿಂಗ್: ಅಂದುಕೊಂಡಂತೆ ಮುಂದಿನ ಡಾನ್​ ಆಗಿ ಬಹುಬೇಡಿಕೆ ನಟಿ ದೀಪಿಕಾ ಪಡಕೋಣೆ ಅವರ ಪತಿ, ಸೂಪರ್​ ಸ್ಟಾರ್​ ರಣ್​ವೀರ್​​ ಸಿಂಗ್​​ ದರ್ಶನ ಕೊಡಲಿದ್ದಾರೆ. ಇಂದು ಚಿತ್ರತಂಡ ಶೇರ್ ಮಾಡಿರುವ ನಾಯಕ ನಟನ ಇಂಟ್ರೂಡಕ್ಷನ್​ ವಿಡಿಯೋ ಅದ್ಭುತವಾಗಿದೆ. ಈ ಮೊದಲು ಡಾನ್​ 3 ಸಿನಿಮಾದಲ್ಲಿ ರಣ್​​​ವೀರ್​ ಕಾಣಿಸಿಕೊಳ್ಳುತ್ತಾರೆ ಎಂದು ಹೇಳಲಾಗಿತ್ತು. ಇನ್ನು, ಮೊದಲೆರಡು ಭಾಗಗಳಲ್ಲಿದ್ದ ಕಿಂಗ್​​ ಖಾನ್​​ ಶಾರುಖ್​ ಮುಂದಿನ ಭಾಗದಲ್ಲಿಲ್ಲ ಎಂದು ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

  • " class="align-text-top noRightClick twitterSection" data="">

ರಣ್​ವೀರ್​ ಸಿಂಗ್​ ಫಸ್ಟ್ ಲುಕ್​ ವಿಡಿಯೋ: ಫರ್ಹಾನ್​ ಅಖ್ತರ್ ಅವರ ಆ್ಯಕ್ಷನ್​​ ಡ್ರಾಮಾ ಡಾನ್​ 3ಗಾಗಿ ಪ್ರೇಕ್ಷಕರು ಬಹಳ ಸಮಯದಿಂದ ಕಾದು ಕುಳಿತಿದ್ದರು. ನಿನ್ನೆ ಸಿನಿಮಾ, ಇಂದು ನಾಯಕ ನಟನ ಘೋಷಣೆ ಆಗಿದೆ. ಫರ್ಹಾನ್​ ಅಖ್ತರ್ ಮತ್ತು ಅವರ ಆಪ್ತ ಸ್ನೇಹಿತ ರಿತೇಶ್​ ಸಿಧ್ವಾನಿ ಜೊತೆಗೂಡಿ ಸ್ಥಾಪಿಸಿರುವ ಸಿನಿಮಾ ಪ್ರೊಡಕ್ಷನ್​ ಬ್ಯಾನರ್​​ ಎಕ್ಸೆಲ್​​​ ಎಂಟರ್​ಟೈನ್​ಮೆಂಟ್​​ ಸಿನಿಮಾ ಮತ್ತು ನಾಯಕನನ್ನು ಘೋಷಿಸಿದೆ. ಇಂದು ರಣ್​ವೀರ್​ ಸಿಂಗ್​ ಅವರ ಕುತೂಹಲಕಾರಿ ಫಸ್ಟ್ ಲುಕ್​ ವಿಡಿಯೋವನ್ನು ಹಂಚಿಕೊಂಡಿದೆ.

ಶಾರುಖ್​ ಬದಲಿಗೆ ರಣ್​ವೀರ್​​: ಎಕ್ಸೆಲ್​​ ಎಂಟರ್​ಟೈನ್​ಮೆಂಟ್​​ ಇಂದು ಇನ್​ಸ್ಟಾಗ್ರಾಮ್​ನಲ್ಲಿ ರಣ್​ವೀರ್​ ಸಿಂಗ್​ ಫಸ್ಟ್ ಲುಕ್​ ವಿಡಿಯೋ ಶೇರ್ ಮಾಡಿ, ''ಹೊಸ ಯುಗ ಪ್ರಾರಂಭ. ರಣ್​ವೀರ್​ ಸಿಂಗ್​ ಮತ್ತು ಫರ್ಹಾನ್​ ಅಖ್ತರ್​ ಕಾಂಬೋದಲ್ಲಿ ಡಾನ್​ 3'' ಎಂದು ಬರೆದುಕೊಂಡಿದ್ದಾರೆ. ಮೊದಲೆಡು ಭಾಗ (ಡಾನ್​ 1, 2) ಗಮನಾರ್ಹ ನಿರ್ಗಮನ. ಫರ್ಹಾನ್​ ಅಖ್ತರ್​ ಅವರ ಡಾನ್​ 1 (2006) ಮತ್ತು ಅದರ ಸೀಕ್ವೆಲ್​​​ ಡಾನ್​​ 2 (2011) ರಲ್ಲಿ ಸೂಪರ್ ಸ್ಟಾರ್​ ಶಾರುಖ್​ ಅವರು ಅದ್ಭುತ ಡಾನ್​ ಆಗಿ ಕಾಣಿಸಿಕೊಂಡಿದ್ದಾರೆ. ಮೊದಲೆರಡೂ ಭಾಗಗಳಲ್ಲಿ ದೇಸಿ ಗರ್ಲ್ ಪ್ರಿಯಾಂಕಾ ಚೋಪ್ರಾ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: DON 3: ಮುಂದಿನ ಡಾನ್​ ಶಾರುಖ್​ ಅಲ್ಲ ರಣ್​ವೀರ್! ಸಿಂಗ್​ ಜೊತೆ ಕಿಯಾರಾ ಅಭಿನಯ

ಕಿಯಾರಾ ಅಡ್ವಾಣಿ ರಣ್​​ವೀರ್​ಗೆ ಜೋಡಿಯಾಗ್ತಾರಾ? ಬಾಲಿವುಡ್​ ಹಿರಿಯ ನಟ ಅಮಿತಾಭ್​ ಬಚ್ಚನ್​ ಅವರು 1978ರಲ್ಲಿ ಡಾನ್​​ ಸಿನಿಮಾದಲ್ಲಿ ನಟಿಸಿದ್ದರು. ಚಲನಚಿತ್ರದ ಹಕ್ಕು ಪಡೆದು ಫರ್ಹಾನ್​ ಅಖ್ತರ್ ಅವರು ಡಾನ್​ ಪ್ರಾಂಚೈಸಿ ಪ್ರಾರಂಭಿಸಿದರು. ಡಾನ್​ 1 ಮತ್ತು 2ರಲ್ಲಿ ಕಿಂಗ್​ ಖಾನ್​ ಶಾರುಖ್​ ಕಾಣಿಸಿಕೊಂಡಿದ್ದಾರೆ. ಇದೀಗ ಡಾನ್​ 3ರಲ್ಲಿ ರಣ್​ವೀರ್​ ಕಾಣಿಸಿಕೊಳ್ಳಲಿದ್ದು ಸಿಂಗ್​ಗೆ ಜೋಡಿಯಾಗಿ ಕಿಯಾರಾ ಅಡ್ವಾಣಿ ನಟಿಸಲಿದ್ದಾರೆ ಎಂಬುದು ಬಹುತೇಕ ಖಚಿತ ಮಾಹಿತಿ.

ಇದನ್ನೂ ಓದಿ: Mahesh Babu: ಟಾಲಿವುಡ್​ ಪ್ರಿನ್ಸ್ ಮಹೇಶ್​ ಬಾಬು ಕುರಿತ ಇಂಟ್ರೆಸ್ಟಿಂಗ್​ ವಿಚಾರಗಳು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.