ETV Bharat / entertainment

ಅಮೆರಿಕದ ಅಭಿಮಾನಿಗಳೊಂದಿಗೆ ಭಾರತೀಯ ಶ್ರೇಷ್ಠ ನಟ ರಾಮ್​ಚರಣ್​​

author img

By

Published : Mar 12, 2023, 4:34 PM IST

Ram Charan met American fans
ಅಮೆರಿಕ ಅಭಿಮಾನಿಗಳೊಂದಿಗೆ ರಾಮ್​ಚರಣ್​​

ನಟ ರಾಮ್ ಚರಣ್ ಮೀಟ್ ಆ್ಯಂಡ್ ಗ್ರೀಟ್ ಈವೆಂಟ್​ನಲ್ಲಿ ಭಾಗವಹಿಸಿದ್ದರು.

95ನೇ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಸಿದ್ಧತೆಗಳು ಪೂರ್ಣಗೊಂಡಿವೆ. ಪ್ರತಿಷ್ಟಿತ ಪ್ರಶಸ್ತಿ ಕಾರ್ಯಕ್ರಮಕ್ಕೆ ಕ್ಷಣಗಣನೆ ಆರಂಭವಾಗಿದ್ದು, ವಿಶ್ವದ ಚಿತ್ರರಂಗ ಬಹಳ ಉತ್ಸುಕವಾಗಿದೆ.

ಮೀಟ್ ಆ್ಯಂಡ್ ಗ್ರೀಟ್ ಈವೆಂಟ್​ನಲ್ಲಿ ರಾಮ್​ಚರಣ್: ನಟ ರಾಮ್ ಚರಣ್ ಲಾಸ್ ಏಂಜಲೀಸ್‌ನಲ್ಲಿ ಮೀಟ್ ಆ್ಯಂಡ್ ಗ್ರೀಟ್ ಈವೆಂಟ್​ನಲ್ಲಿ ಭಾಗವಹಿಸಿ ಅಭಿಮಾನಿಗಳೊಂದಿಗೆ ಸಮಯ ಕಳೆದರು. ಜನಸಾಮಾನ್ಯರು, ಅಭಿಮಾನಿಗಳು, ಹಿತೈಷಿಗಳೊಂದಿಗೆ 2 ಗಂಟೆಗೂ ಹೆಚ್ಚು ಸಮಯ ಕಾಲ ಕಳೆದರು. ಅವರೊಂದಿಗೆ ಮನಬಿಚ್ಚಿ ಮಾತನಾಡಿದರು ಎಂದು ವರದಿಯಾಗಿದೆ.

ಆರ್​ಆರ್​ಆರ್​ ಪ್ರಚಾರದಲ್ಲಿ ರಾಮ್​ಚರಣ್: ಆರ್‌ಆರ್‌ಆರ್ ಖ್ಯಾತಿಯ ನಟ ರಾಮ್​​ಚರಣ್​​ ಅಕಾಡೆಮಿ ಪ್ರಶಸ್ತಿ ಸಮಾರಂಭಕ್ಕೆ ಹಾಜರಾಗಲು ಸದ್ಯ ಯುಎಸ್‌ನಲ್ಲಿದ್ದಾರೆ. ಆರ್‌ಆರ್‌ಆರ್‌ನ ನಾಟು ನಾಟು ಹಾಡು 'ಅತ್ಯುತ್ತಮ ಮೂಲ ಗೀತೆ' ವಿಭಾಗದಲ್ಲಿ ನಾಮನಿರ್ದೇಶನಗೊಂಡಿದೆ. ಈ ಹಿನ್ನೆಲೆ ಅಲ್ಲಿನ ಹಲವು ಟಿವಿ ಸಂದರ್ಶನಗಳಲ್ಲಿ ಭಾಗಿಯಾಗಿ ಚಿತ್ರದ ಪ್ರಚಾರ ಮಾಡಿರುವ ನಟ ರಾಮ್​ಚರಣ್​​, ಮೀಟ್ ಆ್ಯಂಡ್ ಗ್ರೀಟ್ ಈವೆಂಟ್​ನಲ್ಲೂ ಭಾಗಿಯಾದರು.

ಅಮೆರಿಕ ಅಭಿಮಾನಿಗಳೊಂದಿಗೆ ರಾಮ್​ಚರಣ್: ವೈಟ್​ ಶರ್ಟ್, ಗ್ರೀನ್​ ಪ್ಯಾಂಟ್, ವೈಟ್​ ಶೂ, ಬ್ಲ್ಯಾಕ್​ ಫ್ರೇಮ್​ನ ಗ್ಲ್ಯಾಸ್ ಧರಿಸಿ ಕ್ಯಾಶುಯಲ್ ಆಗಿ ಕಾಣಿಸಿಕೊಂಡರು. ಜಾಗತಿಕ ತಾರೆ ತಮ್ಮ ಅಮೆರಿಕ ಅಭಿಮಾನಿಗಳೊಂದಿಗೆ ಸಮಯ ಕಳೆದರು ಮತ್ತು ಅವರೊಂದಿಗೆ ತೆಲುಗು ಮತ್ತು ಇಂಗ್ಲಿಷ್‌ ಭಾಷೆಯಲ್ಲಿ ಮಾಡಿದರು.

  • "నేను ఇక్కడ కూర్చొని మాట్లాడడం కాదు. I Want to Give My Time to You & Meet You All Personally. I Will Come to Your Tables" ❤️#GlobalStar @AlwaysRamCharan garu’s Love towards his fans 🙏🏻👍

    Charan garu spent two and half hours with Fans & mark a life time spl moments to them ❤️ pic.twitter.com/DHFq3B5XD6

    — SivaCherry (@sivacherry9) March 12, 2023 " class="align-text-top noRightClick twitterSection" data=" ">

ನಾಟು ನಾಟು ಹಾಡು ಅಕಾಡೆಮಿ ಪ್ರಶಸ್ತಿಗೆ ನಾಮಿನೇಟ್​ ಅದ ನಂತರ ಆಗಾಗ್ಗೆ ಯುಎಸ್‌ಗೆ ಭೇಟಿ ಕೊಟ್ಟರು. ಆರ್‌ಆರ್‌ಆರ್ ಪ್ರಚಾರಕ್ಕಾಗಿ ಅಲ್ಲಿನ ಸ್ಥಳೀಯ ಮಾಧ್ಯಮಗಳೊಂದಿಗೆ ಸಂವಹನ ನಡೆಸಿದರು ಮತ್ತು ವಿವಿಧ ಟಾಕ್ ಶೋಗಳಲ್ಲಿ ಕಾಣಿಸಿಕೊಂಡರು. ಕೆಲವೇ ಕ್ಷಣಗಳಲ್ಲಿ ಲಾಸ್ ಏಂಜಲೀಸ್‌ನಲ್ಲಿ ನಡೆಯಲಿರುವ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಸಾಕ್ಷಿಯಾಗಲಿದ್ದಾರೆ.

ಆಸ್ಕರ್​ ಗೆಲ್ಲುವ ವಿಶ್ವಾಸದಲ್ಲಿ ಭಾರತ: ಆಸ್ಕರ್ ನಾಮನಿರ್ದೇಶನಗಳ​​ ಪಟ್ಟಿಯಲ್ಲಿ ಮೂರು ಭಾರತೀಯ ಚಲನಚಿತ್ರಗಳ ಹೆಸರುಗಳು ಇವೆ. ನಾಮಿನೇಶನ್​ ಪಟ್ಟಿ ಬಿಡುಗಡೆ ಆದಾಗಿನಿಂದ ಭಾರತ ತೋರಿದ ವಿಶ್ವಾಸ ಅವರ್ಣನೀಯ. ಪ್ರತಿಷ್ಟಿತ ಪ್ರಶಸ್ತಿಗೆಲ್ಲುವ ಉತ್ಸಾಹದಲ್ಲಿ ದೇಶವಿದ್ದು, ಸಾಕಷ್ಟು ಸಕಾರಾತ್ಮಕ ನಿರೀಕ್ಷೆಗಳು ಹುಟ್ಟಿಕೊಂಡಿವೆ. ನಾಮನಿರ್ದೇಶನಗೊಂಡ ಮೂರು ಚಿತ್ರಗಳಿಗೆ ಸಂಬಂಧಿಸಿದ ನಟರು, ನಿರ್ಮಾಪಕರು, ನಿರ್ದೇಶಕರು ಸೇರಿದಂತೆ ಸಿನಿ ಗಣ್ಯರು ಸಮಾರಂಭಕ್ಕೆ ಸಜ್ಜಾಗುತ್ತಿದ್ದಾರೆ.

ಇದನ್ನೂ ಓದಿ: ಪ್ರತಿಷ್ಠಿತ ಪ್ರಶಸ್ತಿ ಪಡೆಯಲು ಕ್ಷಣಗಣನೆ: ಆಸ್ಕರ್​ ವೇದಿಕೆ ಏರಲಿದ್ದಾರೆ ಭಾರತೀಯರು

ನಾಮನಿರ್ದೇಶನಗಳ​​ ಪಟ್ಟಿ: ಪ್ರತಿಷ್ಠಿತ ಪ್ರಶಸ್ತಿಗೆ ಭಾರತದಿಂದ ಮೂರು ಚಿತ್ರಗಳು ನಾಮಿನೇಟ್ ಆಗಿವೆ. ನಮ್ಮ ದೇಶದಿಂದ 4 ಚಿತ್ರಗಳು ಆಯ್ಕೆ ಆಗಬಹುದೆಂದು ನಿರೀಕ್ಷೆ ಹೊಂದಲಾಗಿತ್ತು. ಆದ್ರೆ 300 ಚಿತ್ರಗಳ ನಡುವಿನ ಹೋರಾಟದಲ್ಲಿ ಅಂತಿಮವಾಗಿ 3 ಚಿತ್ರಗಳು ನಾಮಿನೇಟ್ ಆಗಿದೆ. ಎಸ್‌ಎಸ್ ರಾಜಮೌಳಿ ಅವರ ಸೂಪರ್​ ಹಿಟ್ ಸಿನಿಮಾ, ಗೋಲ್ಡನ್ ಗ್ಲೋಬ್ ಪ್ರಶಸ್ತಿ ವಿಜೇತ ಚಿತ್ರ 'ಆರ್​ಆರ್​ಆರ್​', 'ಆಲ್​ ದಟ್​ ಬ್ರೀಥ್ಸ್'​, 'ದಿ ಎಲಿಫೆಂಟ್​ ವಿಸ್ಪರ್ಸ್​' ನಾಮ ನಿರ್ದೇಶನಗೊಂಡಿದೆ. ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ನಾಟು ನಾಟು ಹಾಡು ಮತ್ತು ಕಿರುಚಿತ್ರ, ಸಾಕ್ಷ್ಯಚಿತ್ರ ವಿಭಾಗದಲ್ಲಿ , 'ಆಲ್​ ದಟ್​ ಬ್ರೀಥ್ಸ್'​, 'ದಿ ಎಲಿಫೆಂಟ್​ ವಿಸ್ಪರ್ಸ್​' ನಾಮಿನೇಟ್ ಆಗಿದೆ.

ಇದನ್ನೂ ಓದಿ: 'ನಾಟು ನಾಟು' ಸಂಗೀತ ಸಂಯೋಜಕ ಎಂಎಂ ಕೀರವಾಣಿ ಕುರಿತ ಆಸಕ್ತಿದಾಯಕ ವಿಚಾರಗಳು ಗೊತ್ತಾ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.