ETV Bharat / entertainment

ಕಡಲ ತೀರದಲ್ಲಿ ಯಶ್‌​ ಕುಟುಂಬ: ಅಭಿಮಾನಿಗಳ ಕಣ್ಮನ ಸೆಳೆದ ರಾಧಿಕಾ ಪಂಡಿತ್ ಹೊಸ ಪೋಸ್ಟ್‌​

author img

By ETV Bharat Karnataka Team

Published : Sep 10, 2023, 12:39 PM IST

Updated : Sep 10, 2023, 4:42 PM IST

yash family picture
ಯಶ್​ ರಾಧಿಕಾ ಫ್ಯಾಮಿಲಿ

Radhika Pandit shares family picture: ನಟಿ ರಾಧಿಕಾ ಪಂಡಿತ್​ ಬ್ಯೂಟಿಫುಲ್​ ಫ್ಯಾಮಿಲಿ ಪಿಕ್ಚರ್ ಶೇರ್ ಮಾಡಿದ್ದಾರೆ.

ರಾಕಿಂಗ್​ ಸ್ಟಾರ್ ಯಶ್​ ಹಾಗೂ ನಟಿ, ಪತ್ನಿ ರಾಧಿಕಾ ಪಂಡಿತ್​​ ಕನ್ನಡ ಚಿತ್ರರಂಗದ ಮಾದರಿ ತಾರಾ ದಂಪತಿ. ಸಿನಿಮಾ ಸಾಧನೆಯ ಜೊತೆಜೊತೆಗೆ ವೈಯಕ್ತಿಕ ವಿಷಯಗಳಿಂದಲೂ ಹಲವರಿಗೆ ಸ್ಫೂರ್ತಿಯಾಗಿದ್ದಾರೆ. ಯಶ್​ ಕೇವಲ ಸೂಪರ್​ ಸ್ಟಾರ್ ಮಾತ್ರವಲ್ಲ, ಓರ್ವ ಪರ್ಫೆಕ್ಟ್​ ಫ್ಯಾಮಿಲಿ ಮ್ಯಾನ್​ ಕೂಡ ಹೌದು.

ಕಡಲ ತೀರದಲ್ಲಿ ಸಂಭ್ರಮದ ಕ್ಷಣ: ರಾಧಿಕಾ ಪಂಡಿತ್​​ ಆಗಾಗ್ಗೆ ಹೊಸ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಖುಷಿ ಕ್ಷಣಗಳ ಚಿತ್ರಗಳು ಅಭಿಮಾನಿಗಳ ಹೃದಯ ಆವರಿಸುತ್ತವೆ. ಅದರಂತೆ ಇಂದೂ ಕೂಡ ಸುಂದರ ಚಿತ್ರವೊಂದನ್ನು ತಮ್ಮ ಅಧಿಕೃತ ಇನ್​​ಸ್ಟಾಗ್ರಾಮ್​ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಕಡಲ ತೀರದಲ್ಲಿ ರಾಕಿಂಗ್​ ಫ್ಯಾಮಿಲಿ ಸಖತ್​ ಎಂಜಾಯ್​ ಮೂಡ್‌ನಲ್ಲಿರುವುದನ್ನು ಚಿತ್ರದಲ್ಲಿ ನೋಡಬಹುದು.

ಅಭಿಮಾನಿಗಳಿಂದ ಮೆಚ್ಚುಗೆ: ಯಶ್​, ಮುದ್ದಾದ ಮಗಳು ಐರಾ ಜೊತೆಗಿನ ಫೋಟೋವನ್ನು ರಾಧಿಕಾ ಶೇರ್ ಮಾಡಿದ್ದಾರೆ. ಕಡಲ ತೀರದಲ್ಲಿ ಮಿಸ್ಟರ್ ಆ್ಯಂಡ್​ ಮಿಸೆಸ್​ ರಾಮಾಚಾರಿ ಕುಳಿತಿದ್ದಾರೆ. ಪುತ್ರಿ ಐರಾ ತಂದೆಯ ಭುಜದ ಮೇಲಿದ್ದಾಳೆ. ಇದೊಂದು ಕಂಪ್ಲೀಟ್​ ಫ್ಯಾಮಿಲಿ ಟೈಮ್​ ಎಂದಿರುವ ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.

ಯಶ್​ 19 ಅಪ್​ಡೇಟ್ಸ್​ಗೆ ಒತ್ತಾಯ: ಸೋಷಿಯಲ್​ ಮೀಡಿಯಾದಲ್ಲಿ ರಾಧಿಕಾ ಪಂಡಿತ್​ ಹಂಚಿಕೊಂಡಿರುವ ಫೋಟೋ ಸಖತ್​ ವೈರಲ್​ ಆಗಿದೆ. ಇದೇ ವೇಳೆ, ಯಶ್​ 19 ಸಿನಿಮಾದ ಅಪ್​ಡೇಟ್ಸ್ ಕೊಡುವಂತೆ ಫ್ಯಾನ್ಸ್‌ ದುಂಬಾಲು ಬಿದ್ದಿದ್ದಾರೆ. ರಾಧಿಕಾ ಪಂಡಿತ್​ ಪೋಸ್ಟ್​ಗೆ ಪ್ರತಿಕ್ರಿಯಿಸಿದ ಅಭಿಮಾನಿಯೋರ್ವರು, 'ಯಾರ ದೃಷ್ಟಿಯೂ ಬೀಳದಿರಲಿ' ಎಂದು ಹರಸಿದ್ದಾರೆ. ಮತ್ತೊಬ್ಬರು ಕಾಮೆಂಟ್​ ಮಾಡಿ 'ನೆನಪುಗಳ ಸೃಷ್ಟಿ' ಎಂದು ಬರೆದಿದ್ದಾರೆ. ಉಳಿದಂತೆ, ಬಹುತೇಕರು 'ಯಶ್​ 19 ಅಪ್​ಡೇಟ್ಸ್​ಗೆ ಕಾಯುತ್ತಿದ್ದೇವೆ', 'ಯಶ್​​ 19' ಎಂದು ನಿರೀಕ್ಷೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ರಾಕಿಂಗ್ ಸ್ಟಾರ್ ಅಭಿಮಾನಿಗಳೇ ಕೇಳಿ; ಗಣೇಶ ಹಬ್ಬದಂದು ಯಶ್​​ ಕೊಡಲಿದ್ದಾರೆ ಬಿಗ್ ‌ಸರ್​​ಪ್ರೈಸ್!​​

ಯಶ್​ ಸರ್​ಪ್ರೈಸ್​: ಕಳೆದ ವರ್ಷ ಏಪ್ರಿಲ್‍ 14ರಂದು ಕೆಜಿಎಫ್‍ 2 ಸಿನಿಮಾ ಬಿಡುಗಡೆ ಆಗಿತ್ತು. ನಿರೀಕ್ಷೆ ಮೀರಿ ಅಭೂತಪೂರ್ವ ಯಶಸ್ಸು ಗಳಿಸಿತ್ತು. ಈ ಸಿನಿಮಾ ಯಶ್​ ಅವರ ಜನಪ್ರಿಯತೆಯನ್ನು ಮತ್ತಷ್ಟು ಎತ್ತರಕ್ಕೆ ಹೆಚ್ಚಿಸಿತ್ತು. ಯಶ್‌ ನಟಿಸಿದ್ದು 18 ಸಿನಿಮಾಗಳಲ್ಲಾದರೂ, ಸಿಕ್ಕ ಜನಪ್ರಿಯತೆ ಅಷ್ಟಿಷ್ಟಲ್ಲ. ಹಾಗಾಗಿ ಮುಂದಿನ ಸಿನಿಮಾಗಳ ಮೇಲೆ ಎಲ್ಲರ ಗಮನ ನೆಟ್ಟಿದೆ. ಆದ್ರೆ ಯಶ್‌ ಈ ಕುರಿತು ಯಾವುದೇ ಸುಳಿವು ಬಿಟ್ಟುಕೊಟ್ಟಿಲ್ಲ. ಆಪ್ತರ ಮಾಹಿತಿ ಪ್ರಕಾರ, ಗಣೇಶ ಚತುರ್ಥಿ ಹಬ್ಬದ ಸಂದರ್ಭದಲ್ಲಿ 'ರಾಕಿ‌ ಭಾಯ್‌' ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಡ್ತಾರಂತೆ!.

ಇದನ್ನೂ ಓದಿ: ವೆಲ್ಕಮ್​​ ಟು ದ ಜಂಗಲ್​ ಟೀಸರ್​: ರವೀನಾ ಟಂಡನ್​ಗೆ 'Purane Chawal' ಎಂದ ಅಕ್ಷಯ್​ ಕುಮಾರ್​

Last Updated :Sep 10, 2023, 4:42 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.