ETV Bharat / entertainment

ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕರೊಂದಿಗೆ ಕಿಚ್ಚ ಸುದೀಪ್​ ಸಿನಿಮಾ

author img

By

Published : Apr 21, 2023, 6:55 PM IST

ಕಿಚ್ಚ ಸುದೀಪ್ ಮುಂದಿನ​ ಸಿನಿಮಾ ಸಂಬಂಧಿಸಿದಂತೆ ಅಪ್​ಡೇಟ್​ ಸಿಕ್ಕಿದೆ.

Sudeep upcoming movies
ನಿರ್ದೇಶಕ ಚರಣ್ ಜೊತೆ ಸುದೀಪ್​ ಸಿನಿಮಾ

ಕನ್ನಡ ಚಿತ್ರರಂಗ ಅಲ್ಲದೇ ಇಡೀ ಭಾರತೀಯ ಸಿನಿಮಾ ರಂಗದಲ್ಲಿ ತಮ್ಮದೇ ಆದ ವಿಭಿನ್ನ ಸ್ಟಾರ್ ಡಮ್ ಹೊಂದಿರುವ ನಟ‌ ಕಿಚ್ಚ ಸುದೀಪ್. ಅದ್ಭುತ ನಟನೆ ಮೂಲಕ ಅಭಿನಯ ಚಕ್ರವರ್ತಿ ಎಂದೇ ಖ್ಯಾತರಾಗಿದ್ದಾರೆ. ಸದ್ಯ ಕಿಚ್ಚ ಚುನಾವಣಾ ಅಖಾಡಲ್ಲಿ ಘರ್ಜಿಸುತ್ತಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಪರ ಮತ ಬೇಟೆಗೆ ಇಳಿದಿರುವ ಸುದೀಪ್​​ ಇನ್ನೂ 15 ದಿನಗಳ ಕಾಲ ಬಿರು ಬಿಸಿಲಿನಲ್ಲಿ ಚುನಾವಣಾ ಪ್ರಚಾರ ಮಾಡಲಿದ್ದಾರೆ.

Sudeep upcoming movies
ನಿರ್ದೇಶಕ ಚರಣ್ ಜೊತೆ ಸುದೀಪ್​ ಸಿನಿಮಾ

ಸಿಸಿಲ್ ಹಾಗೂ ಕೆಸಿಎಲ್ ಕ್ರಿಕೆಟ್ ಮ್ಯಾಚ್ ಮುಗಿಸಿ ರಿಲ್ಯಾಕ್ಸ್ ಮೂಡ್​ನಲ್ಲಿರೋ 'ಹೆಬ್ಬುಲಿ'ಯ ಮುಂದಿನ ಸಿನಿಮಾ ಬಗ್ಗೆ ಕಿಚ್ಚನ ಜೆ.ಪಿ ನಗರದ ನಿವಾಸದಿಂದ ಹಿಡಿದು ಇಡೀ ಸೌತ್ ಸಿನಿಮಾ ಇಂಡಸ್ಟ್ರಿವರೆಗೂ ಟಾಕ್ ಆಗುತ್ತಿದೆ. ವಿಕ್ರಾಂತ್​ ರೋಣ ಆಯ್ತು, ಮುಂದಿನ ಸಿನಿಮಾ ಯಾವುದು? ಯಾವ ನಿರ್ದೇಶಕರು ಅಭಿನಯ ಚಕ್ರವರ್ತಿಗೆ ಆ್ಯಕ್ಷನ್​ ಕಟ್​ ಹೇಳಲಿದ್ದಾರೆ? ತಮ್ಮ ಮೆಚ್ಚಿನ ನಟನೊಂದಿಗೆ ತೆರೆ ಹಂಚಿಕೊಳ್ಳಲಿರುವ ಆ ಚೆಲುವೆ ಯಾರು? ಯಾವ ನಿರ್ಮಾಣ ಸಂಸ್ಥೆ ಬಂಡವಾಳ ಹೂಡಲಿದೆ? ಹೀಗೆ ಹತ್ತು ಹಲವು ಪ್ರಶ್ನೆಗಳು ಅಭಿಮಾನಿಗಳಲ್ಲಿದೆ.

ಸುದೀಪ್​ ಮುಂದಿನ ಸಿನಿಮಾ ಯಾರ ಜೊತೆ ಅಂತಾ ಅಂದಾಜು ಮಾಡುತ್ತಿರುವ ಈ ಹೊತ್ತಿನಲ್ಲಿ ತಮಿಳು ಚಿತ್ರರಂಗದದಿಂದ ದೊಡ್ಡ ಹೆಸರು ಕೇಳಿ ಬಂದಿದೆ. ಒಂದಲ್ಲ, ಎರಡಲ್ಲ ಮೂರು ನ್ಯಾಷನಲ್ ಅವಾರ್ಡ್ ಗೆದ್ದುಕೊಂಡಿರೋ ತಮಿಳು ಚಿತ್ರರಂಗದ ಸ್ಟಾರ್ ಡೈರೆಕ್ಟರ್ ಚರಣ್ ಜೊತೆ ಸುದೀಪ್​ ಸಿನಿಮಾ‌‌ ಮಾಡೋಕೆ ಸಜ್ಜಾಗುತ್ತಿದ್ದಾರೆ.

ಹೌದು, ಚರಣ್ ಕಳೆದ ಮೂರು ದಶಕಗಳಿಂದ ತಮಿಳು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದು, ನಟನೆ ಜೊತೆ ನಿರ್ದೇಶನದಲ್ಲೂ ಕಮಾಲ್ ಮಾಡಿದ್ದಾರೆ. ಈವರೆಗೆ 12 ಚಿತ್ರಗಳನ್ನು ನಿರ್ದೇಶಿಸಿರುವ ಚರಣ್, ವೆಟ್ರಿ ಕೊಡಿ ಕಟ್ಟು, ಆಟೋಗ್ರಾಫ್​​, ತವಮೈ ತವಮಿರುಂದು ಚಿತ್ರಗಳ ನಿರ್ದೇಶನಕ್ಕೆ ರಾಷ್ಟ್ರ ಪ್ರಶಸ್ತಿ ಪಡೆದಿದ್ದಾರೆ. ಇದೀಗ ಅದ್ಭುತ ಕಥೆಯೊಂದನ್ನು ಸಿದ್ಧಪಡಿಸಿರುವ ಚರಣ್, ಕನ್ನಡದ ಕಿಚ್ಚನಿಗೆ ಆ್ಯಕ್ಷನ್ ಕಟ್ ಹೇಳೋಕೆ ಮುಂದಾಗಿದ್ದಾರೆ ಎಂಬ ಸುದ್ದಿ ಕಾಲಿವುಡ್ ಟು ಸ್ಯಾಂಡಲ್​​ವುಡ್​ ಸಂಚರಿಸಿ ಸದ್ದು ಮಾಡುತ್ತಿದೆ.

ಇದನ್ನೂ ಓದಿ: ಫಿಟ್ನೆಸ್​ ಐಕಾನ್​ ಅಂದ್ರೆ ಸುಮ್ನೆನಾ?: ನಟಿಮಣಿಯರ ಸೌಂದರ್ಯದ ರಹಸ್ಯ ಗೊತ್ತೇ?

ಸುದೀಪ್​ ಇತ್ತೀಚೆಗಷ್ಟೇ ತಮ್ಮ ಅಭಿಮಾನಿಗಳಿಗೆ ಟ್ವೀಟ್​ ಮೂಲಕ ಸರ್​ಪ್ರೈಸ್​ ಕೊಟ್ಟಿದ್ರು. ಈಗಾಗಲೇ ಅದ್ಭುತವಾಗಿರುವ ಮೂರು ಕಥೆಗಳು ಫೈನಲ್ ಮಾಡಿದ್ದು, ಪ್ರೀ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ ಎಂದಿದ್ದರು. ಈಗ ಕಿಚ್ಚನ ಗರಡಿಯಲ್ಲಿ ತಮಿಳು ನಿರ್ದೇಶಕ ಚರಣ್ ಹೆಸರು ಕೇಳಿಸುತ್ತಿದ್ದು, ಆ ಮೂರು ಕಥೆಯಲ್ಲಿ ಚರಣ್​​ ಅವರ ಸಿನಿಮಾ ಕೂಡ ಇದೆ ಅಂತಾ ಹೇಳಲಾಗ್ತಿದೆ. ಆದ್ರೆ ಇದಕ್ಕೆಲ್ಲ ಉತ್ತರ ರಾಜ್ಯ ವಿಧಾನಸಭೆ ಚುನಾವಣೆ ಮುಗಿದ ಬಳಿಕವಷ್ಟೇ ಸಿಗಲಿದೆ.

ಇದನ್ನೂ ಓದಿ: ಸಲ್ಮಾನ್ ಖಾನ್ 'KKBKKJ' ಈದ್​ ಗಿಫ್ಟ್: 100ಕ್ಕೂ ಹೆಚ್ಚು ದೇಶಗಳಲ್ಲಿ ತೆರೆಕಂಡ ಬಾಲಿವುಡ್​ ಸಿನಿಮಾ​

ಅನುಪ್​ ಭಂಡಾರಿ ನಿರ್ದೇಶನದ 'ವಿಕ್ರಾಂತ್ ರೋಣ' ಕಳೆದ ಜುಲೈ 28ರಂದು ತೆರೆಕಂಡು ಸೂಪರ್​ ಹಿಟ್ ಆಗಿತ್ತು. ಪೊಲೀಸ್​ ಅಧಿಕಾರಿ ಪಾತ್ರದಲ್ಲಿ ಸುದೀಪ್​ ಪ್ರೇಕ್ಷಕರ ಗಮನ ಸೆಳೆದಿದ್ದರು. ಚಿತ್ರ ಬಿಡುಗಡೆ ಆಗಿ 9 ತಿಂಗಳಾಗಿದ್ದರೂ ನಟನ ಮುಂದಿನ ಸಿನಿಮಾ ಬಗ್ಗೆ ಯಾವುದೇ ಘೋಷಣೆ ಆಗಿಲ್ಲ. ಇದರ ಮಧ್ಯೆ ಸಾಕಷ್ಟು ಅಂತೆ ಕಂತೆಗಳು ನಡೆದು ಹೋಗಿದೆ. ಸುದೀಪ್​​ 46ನೇ ಸಿನಿಮಾ ಬಗ್ಗೆ ಹಲವು ಊಹಾಪೋಹಗಳು ಇವೆ. ಈ ಹಿನ್ನೆಲೆ ಸುದೀಪ್​ ಟ್ವೀಟ್ ಮೂಲಕ ಮೂರು ಚಿತ್ರದ ಕಥೆ ಫೈನಲ್​ ಆಗಿದೆ ಎಂದು ಸ್ಪಷ್ಟಪಡಿಸಿದ್ದರು. ಚುನಾವಣೆ ಬಳಿಕ ತಮ್ಮ ಮುಂದಿನ ಸಿನಿಮಾ ಬಗ್ಗೆ ಘೋಷಿಸುವ ಸಾಧ್ಯತೆ ಇದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.