ETV Bharat / entertainment

ಪ್ರವೀಣ್ ತೇಜ್ ನಟನೆಯ ಹೊಂದಿಸಿ ಬರೆಯಿರಿ ಚಿತ್ರದ ಸೋಲ್ ಆಫ್ ಸಾಂಗ್ ಅನಾವರಣ

author img

By

Published : Jan 16, 2023, 5:23 PM IST

hondisi-bareyiri-film
ಸೋಲ್ ಆಫ್ ಸಾಂಗ್ ಅನಾವರಣ

ಪ್ರವೀಣ್​ ತೇಜ್​ ಅಭಿನಯದ ಹೊಂದಿಸಿ ಬರೆಯಿರಿ ಚಿತ್ರದ ಮತ್ತೊಂದು ಹಾಡು 'ಸೋಲ್​ ಆಫ್ ಹೆಬಿ'ಯನ್ನು ಚಿತ್ರತಂಡ ಬಿಡುಗಡೆಗೊಳಿಸಿದೆ. ​

ಸ್ಯಾಂಡಲ್​ವುಡ್ ಸಿನಿರಸಿಕರಲ್ಲಿ ಬಹಳ ನಿರೀಕ್ಷೆ ಹುಟ್ಟಿಸಿರುವ ಸಿನಿಮಾಗಳಲ್ಲೊಂದು ‘ಹೊಂದಿಸಿ ಬರೆಯಿರಿ’. ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್ ತಮ್ಮ ಚೊಚ್ಚಲ ಚಿತ್ರದ ಮೂಲಕ ಪ್ರೇಕ್ಷಕ ಪ್ರಭುಗಳ ಮನ ಗೆಲ್ಲಲು ಕಾತುರರಾಗಿದ್ದಾರೆ. ಬಹು ತಾರಾಗಣದ ಈ ಚಿತ್ರ ಕಲರ್ ಫುಲ್ ಹಾಡುಗಳ ಮೂಲಕ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಇದೀಗ ಚಿತ್ರದ ಬಹು ನಿರೀಕ್ಷಿತ ಹಾಡು 'ಸೋಲ್ ಆಫ್ ಹೊಂದಿಸಿ ಬರೆಯಿರಿ' ಬಿಡುಗಡೆ ಮಾಡಿದೆ ಚಿತ್ರತಂಡ.

ಸೋಲ್ ಆಫ್ ಹೊಂದಿಸಿ ಬರೆಯಿರಿ’ ಹಾಡಿಗೆ ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್ ಸಾಹಿತ್ಯ ಬರೆದಿದ್ದು, ಐಶ್ವರ್ಯ ರಂಗರಾಜನ್ ಹಾಡಿಗೆ ದನಿಯಾಗಿದ್ದಾರೆ. ಇಡೀ ಸಿನಿಮಾದ ಆಶಯವನ್ನು ಕಟ್ಟಿಕೊಡುವ ಈ ಹಾಡು ಚಿತ್ರದಲ್ಲಿ ಬಹಳ ಮುಖ್ಯ ಪಾತ್ರವಹಿಸಲಿದ್ದು, ಜೋ ಕೋಸ್ಟ ಸಂಗೀತ ಸಂಯೋಜನೆ ಮನ ಮುಟ್ಟುತ್ತಿದೆ. ಪರಿಸ್ಥಿತಿಗಳೊಂದಿಗೆ ಹೊಂದಿಕೊಂಡು ಸಾಗುವ ಬದುಕಿನ ಪಯಣವೇ ಜೀವನ ಎಂಬ ಎಳೆಯ ಸುತ್ತ ಹೆಣೆಯಲಾದ ಸುಂದರ ಕಥಾಹಂದರ ಈ ಚಿತ್ರ.

  • " class="align-text-top noRightClick twitterSection" data="">

ಐದು ಜನ ಸ್ನೇಹಿತರ ಬದುಕಿನ ಕಥೆ ಹಾಗೂ ಭಾವನಾತ್ಮಕ ಜರ್ನಿಯನ್ನು ಒಳಗೊಂಡ ಈ ಚಿತ್ರದಲ್ಲಿ ಪ್ರವೀಣ್ ತೇಜ್, ಭಾವನಾ ರಾವ್, ಸಂಯುಕ್ತ ಹೊರನಾಡು, ಐಶಾನಿ ಶೆಟ್ಟಿ, ನವೀನ್ ಶಂಕರ್, ಶ್ರೀ ಮಹದೇವ್, ಅರ್ಚನಾ ಜೋಯಿಸ್, ಅನಿರುದ್ಧ್ ಆಚಾರ್ಯ ಒಳಗೊಂಡ ಕಲರ್ ಫುಲ್ ಕಲಾವಿದರ ಮುಖ್ಯ ಭೂಮಿಕೆಯಿದೆ.

ಸ್ನೇಹಿತರೊಡಗೂಡಿ ಚಿತ್ರ ನಿರ್ಮಾಣ: ರಾಮೇನಹಳ್ಳಿ ಜಗನ್ನಾಥ್ ಈ ಚಿತ್ರದ ಸೂತ್ರಧಾರ. ನಿರ್ದೇಶನದ ಜೊತೆ ಸ್ನೇಹಿತರೊಡಗೂಡಿ ಚಿತ್ರವನ್ನು ನಿರ್ಮಾಣ ಕೂಡ ಮಾಡಿದ್ದಾರೆ. ಚಿತ್ರದಲ್ಲಿ ಸನ್ನಿವೇಶಕ್ಕೆ ತಕ್ಕಂತೆ ಎಂಟು ಹಾಡುಗಳಿದ್ದು ಈಗಾಗಲೇ ನಾಲ್ಕು ಹಾಡುಗಳು ಬಿಡುಗಡೆಯಾಗಿ ಕೇಳುಗರ ಮನಗೆದ್ದಿವೆ. ಸುನೀಲ್ ಪುರಾಣಿಕ್, ಪ್ರವೀಣ್ ಡಿ ರಾವ್, ಧರ್ಮೇಂದ್ರ ಅರಸ್, ನಂಜುಂಡೇ ಗೌಡ, ಸುಧಾ ನರಸಿಂಹರಾಜು ಒಳಗೊಂಡ ದೊಡ್ಡ ಕಲಾವಿದರ ಬಳಗ ಚಿತ್ರದಲ್ಲಿದೆ.

ಜೋ ಕೋಸ್ಟ ಸಂಗೀತ ನಿರ್ದೇಶನ: ಶಾಂತಿ ಸಾಗರ್ ಹೆಚ್.ಜಿ ಕ್ಯಾಮೆರಾ ನಿರ್ದೇಶನ, ಜೋ ಕೋಸ್ಟ ಸಂಗೀತ ನಿರ್ದೇಶನ, ಕೆ.ಕಲ್ಯಾಣ್, ಹೃದಯಶಿವ ಹಾಗೂ ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್ ಸಾಹಿತ್ಯ ಚಿತ್ರಕ್ಕಿದೆ. ಮಾಸ್ತಿ, ಪ್ರಶಾಂತ್ ರಾಜಪ್ಪ ಹಾಗೂ ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ. ಸಂಡೇ ಸಿನಿಮಾಸ್ ಬ್ಯಾನರ್ ನಡಿ ರಾಮೇನಹಳ್ಳಿ ಜಗನ್ನಾಥ್ ಹಾಗೂ ಸ್ನೇಹಿತರು ಸೇರಿ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಸದ್ಯ ಹಾಡುಗಳು ಮತ್ತು ಟ್ರೈಲರ್ ನಿಂದಲೇ ಸದ್ದು ಮಾಡುತ್ತಿರೋ ಈ ಚಿತ್ರ ಫೆಬ್ರವರಿ 10ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ.

ಒಂದು ಲಕ್ಷ ವೀಕ್ಷಣೆ ಕಂಡ ಓ ಕವನ: ಒಂದು ಕಳೆದ ವರ್ಷ ಆಗಸ್ಟ ತಿಂಗಳಿಲ್ಲಿ ಈ ಚಿತ್ರದ 'ಬದುಕಿ ಸುಮ್ಮನೆ' ಎಂಬ ಹಾಡು ರಿಲೀಸ್​ ಮಾಡಲಾಗಿತ್ತು. ಈ ವರೆಗೂ ಈ ಹಾಡು ಯೂಟ್ಯೂಬ್​ನಲ್ಲಿ 1 ಲಕ್ಷಕ್ಕೂ ಅಧಿಕ ವೀವ್​ ಕಂಡಿದ್ದು ಪ್ರೇಕ್ಷಕರ ಗಮನ ಸೆಳೆದಿದೆ. ಇನ್ನು ಇದೇ ವರ್ಷ ಸೆಪ್ಟೆಂಬರ್​ ತಿಂಗಳಿನಲ್ಲಿ ಹೊಂದಿಸಿ ಬರೆಯಿರಿ ಚಿತ್ರದ 'ಓ ಕವನ' ಎಂಬ ಮತ್ತೋದು ಹಾಡು ರಿಲೀಸ್​ ಆಗಿತ್ತು. ಅಲ್ಲದೇ ಆ ಹಾಡನ್ನ ಮೋಹಕ ತಾರೆ ನಟಿ ರಮ್ಯಾ ಅವರು ಬಿಡುಗಡೆ ​ಮಾಡುವ ಮೂಲಕ ಚಿತ್ರ ತಂಡಕ್ಕೆ ಸಾತ್​ ನೀಡಿದ್ದರು.

ಇನ್ನು ಈ ಹಾಡು ಈ ವರೆಗೂ ಯೂಟ್ಯೂಬ್​ನಲ್ಲಿ ಒಂದು ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡಿದ್ದು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಕಳೆದ ವರ್ಷ ನವೆಂಬರ್​ 18ಕ್ಕೆ ತೆರೆ ಕಾಣಬೇಕಿದ್ದ ಹೊಂದಿಸಿ ಬರೆಯಿರಿ ಚಿತ್ರ ಕಾರಣಾಂತರಗಳಿಂದ ಬಿಡುಗಡೆಗೋಮಡಿರಲಿಲ್ಲ.

ಇದನ್ನೂ ಓದಿ: ಹೊಂದಿಸಿ ಬರೆಯಿರಿ ಚಿತ್ರದ ಮೆಲೋಡಿ ಹಾಡಿನಲ್ಲಿ ಕೆಜಿಎಫ್ ಖ್ಯಾತಿಯ ಅರ್ಚನಾ

ಇದನ್ನೂ ಓದಿ: ಹೊಂದಿಸಿ ಬರೆಯಿರಿ ಸಿನಿಮಾಗೆ ರಮ್ಯಾ ಸಾಥ್.. ನಾಳೆ ಓ ಕವನ ಸಾಂಗ್ ರಿಲೀಸ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.