ETV Bharat / entertainment

ಆಸ್ಕರ್ 2024 ಪ್ರಶಸ್ತಿ​ ಸಮಾರಂಭಕ್ಕೆ ಮುಹೂರ್ತ ನಿಗದಿ: ಪ್ರಮುಖ ದಿನಾಂಕಗಳ ಪಟ್ಟಿ ಹೀಗಿದೆ..

author img

By

Published : Apr 25, 2023, 11:50 AM IST

ಪ್ರತಿಷ್ಠಿತ ಆಸ್ಕರ್ 2024ರ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ದಿನಾಂಕ ನಿಗದಿಯಾಗಿದೆ.

Oscars 2024
ಆಸ್ಕರ್ 2024

2023ರ ಆಸ್ಕರ್​ ಪ್ರಶಸ್ತಿ ಗುಂಗಿನಿಂದ ಹೊರಬರುವ ಮೊದಲೇ ಮುಂದಿನ ವರ್ಷದ ಪ್ರಶಸ್ತಿ ಸಮಾರಂಭವೂ ಘೋಷಣೆಯಾಗಿದೆ. ಅಕಾಡೆಮಿ ಆಫ್​ ಮೋಷನ್​ ಆರ್ಟ್ಸ್​ ಅಂಡ್​ ಸೈನ್ಸಸ್​ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ 96ನೇ ಆವೃತ್ತಿಯ ದಿನಾಂಕವನ್ನು ಈಗಾಗಲೇ ಪ್ರಕಟಿಸಿದೆ. ಚಿತ್ರೋದ್ಯಮಕ್ಕೆ ನೀಡಲಾಗುವ ಅತ್ಯುತ್ತಮ ಪ್ರಶಸ್ತಿಯಾದ ಆಸ್ಕರ್ ಸಮಾರಂಭ 2024 ರ ಮಾರ್ಚ್​ 10 ರಂದು ಅದ್ದೂರಿಯಾಗಿ ನಡೆಯಲಿದೆ.

ಅಕಾಡೆಮಿಯು ಆಸ್ಕರ್​ ಸಾಮಾನ್ಯ ವಿಭಾಗಕ್ಕೆ ಅರ್ಜಿ ಸಲ್ಲಿಸಲು 2023 ರ ನವೆಂಬರ್​ 18 ರವರೆಗೆ ಗಡುವು ನಿಗದಿಪಡಿಸಿದೆ. ತಾತ್ಕಾಲಿಕ ಪಟ್ಟಿಯ ಪ್ರಾಥಮಿಕ ಮತದಾನವು ಡಿಸೆಂಬರ್​ 18 ರಂದು ಪ್ರಾರಂಭವಾಗುತ್ತದೆ. ಡಿಸೆಂಬರ್​ 21 ರಂದು ಫಲಿತಾಂಶಗಳನ್ನು ಪ್ರಕಟಿಸಲಾಗುತ್ತದೆ. ನಾಮನಿರ್ದೇಶನಗಳ ಮತದಾನದ ಅವಧಿಯು 2024 ರ ಜನವರಿ 11 ರಿಂದ 16 ರವರೆಗೆ ನಡೆಯುತ್ತದೆ.

ಜನವರಿ 23 ರಂದು ಅಧಿಕೃತ ನಾಮನಿರ್ದೇಶನಗಳ ಪಟ್ಟಿಯನ್ನು ಘೋಷಿಸಲಾಗುತ್ತದೆ. ಫೆಬ್ರವರಿ 22 ರಂದು ಪ್ರಾರಂಭವಾಗುವ ನಾಮ ನಿರ್ದೇಶನಗಳು ಮತ್ತು ಅಂತಿಮ ಮತದಾನದ ಪ್ರಕ್ರಿಯೆಯು 4 ವಾರ (1 ತಿಂಗಳು) ನಡೆಯುತ್ತದೆ. ಆಸ್ಕರ್​ ಸಮಾರಂಭವು ಲಾಸ್​ ಏಂಜಲೀಸ್​ನ ಡಾಲ್ಫಿ ಥಿಯೇಟರ್​ನಲ್ಲಿ ನಡೆಯಲಿದೆ. ಕಾರ್ಯಕ್ರಮವೂ ಎಬಿಸಿ ಸೇರಿದಂತೆ 200 ಕ್ಕೂ ಹೆಚ್ಚು ಫ್ಲಾಟ್​ಫಾರ್ಮ್​ಗಳಲ್ಲಿ ನೇರಪ್ರಸಾರವಾಗಲಿದೆ.

ಇದನ್ನೂ ಓದಿ: ಅಂದು ಅಣ್ಣಾವ್ರು ಹೇಳಿದ ಆ ಬುದ್ಧಿ ಮಾತು ಜಗ್ಗೇಶ್​ ಜೀವನ ಬದಲಾಯಿಸಿತು..

2024ರ ಆಸ್ಕರ್​ ಪ್ರಶಸ್ತಿಯ ಪ್ರಮುಖ ದಿನಾಂಕಗಳ ಪಟ್ಟಿಗಾಗಿ ಇಲ್ಲಿ ನೋಡಿ..

  • ಸಾಮಾನ್ಯ ವಿಭಾಗಗಳ ಸಲ್ಲಿಕೆ ಗಡುವು: ಬುಧವಾರ, ನವೆಂಬರ್​ 15, 2023
  • ಗವರ್ನರ್ ಪ್ರಶಸ್ತಿಗಳು: ಶನಿವಾರ, ನವೆಂಬರ್ 18, 2023
  • ಪೂರ್ವಭಾವಿ ಮತದಾನ ಪ್ರಾರಂಭ: ಗುರುವಾರ, ಡಿಸೆಂಬರ್​ 18, 2023, ಬೆಳಗ್ಗೆ 9 ಗಂಟೆ
  • ಪೂರ್ವಭಾವಿ ಮತದಾನ ಕೊನೆಗೊಳ್ಳುವುದು: ಸೋಮವಾರ, ಡಿಸೆಂಬರ್​ 21, 2023, ಸಂಜೆ 5 ಗಂಟೆ
  • ಆಸ್ಕರ್​ ತಾತ್ಕಾಲಿಕ ಪಟ್ಟಿಯ ಪ್ರಕಟಣೆ: ಗುರುವಾರ, ಡಿಸೆಂಬರ್​ 21, 2023
  • ಅರ್ಹತೆಯ ಅವಧಿಯು ಕೊನೆಗೊಳ್ಳುವುದು: ಭಾನುವಾರ, ಡಿಸೆಂಬರ್ 31, 2023
  • ನಾಮನಿರ್ದೇಶನಗಳ ಮತದಾನ ಪ್ರಾರಂಭ: ಗುರುವಾರ, ಜನವರಿ 11, 2024, ಬೆಳಿಗ್ಗೆ 9 ಗಂಟೆ
  • ನಾಮನಿರ್ದೇಶನಗಳ ಮತದಾನ ಕೊನೆಗೊಳ್ಳುವುದು: ಮಂಗಳವಾರ, ಜನವರಿ 11, 2024, ಸಂಜೆ 5 ಗಂಟೆ
  • ಆಸ್ಕರ್ ನಾಮನಿರ್ದೇಶನಗಳ ಪ್ರಕಟಣೆ: ಮಂಗಳವಾರ, ಜನವರಿ 23, 2024
  • ಆಸ್ಕರ್​ ನಾಮನಿರ್ದೇಶಿತರ ಹೆಸರು ಘೋಷಣೆ: ಫೆಬ್ರವರಿ 12, 2024
  • ಕೊನೆಯ ಮತದಾನ ಪ್ರಾರಂಭ: ಗುರುವಾರ, ಫೆಬ್ರವರಿ 22, 2024, ಬೆಳಗ್ಗೆ 9 ಗಂಟೆ
  • ವೈಜ್ಞಾನಿಕ ಮತ್ತು ತಾಂತ್ರಿಕ ಪ್ರಶಸ್ತಿಗಳು: ಶುಕ್ರವಾರ, ಫೆಬ್ರವರಿ 23, 2024
  • ಫೈನಲ್​ ಮತದಾನ ಕೊನೆಗೊಳ್ಳುವುದು: ಮಂಗಳವಾರ, ಫೆಬ್ರವರಿ 27, 2024, ಸಂಜೆ 5 ಗಂಟೆ
  • 96ನೇ ಆಸ್ಕರ್​ ಪ್ರಶಸ್ತಿ ಸಮಾರಂಭ: ಭಾನುವಾರ, ಮಾರ್ಚ್​ 10, 2024

ಸೂಚನೆ: ಅಕಾಡೆಮಿಯ ಪ್ರಕಾರ, "96 ನೇ ಅಕಾಡೆಮಿ ಪ್ರಶಸ್ತಿಗಳ ಎಲ್ಲಾ ದಿನಾಂಕಗಳು ಬದಲಾವಣೆಗೆ ಒಳಪಟ್ಟಿರುತ್ತವೆ."

ಇದನ್ನೂ ಓದಿ: ಹೊಸ ಫಿಟ್ನೆಸ್​ ವಿಡಿಯೋ ಹಂಚಿಕೊಂಡ ನಟಿ ಸಾರಾ: ಜಿಮ್​ನಲ್ಲೂ ಮೇಕಪ್​ ಬಿಡಲ್ವಾ ಎಂದ ನೆಟ್ಟಿಗರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.