ETV Bharat / state

ಅಂದು ಅಣ್ಣಾವ್ರು ಹೇಳಿದ ಆ ಬುದ್ಧಿ ಮಾತು ಜಗ್ಗೇಶ್​ ಜೀವನ ಬದಲಾಯಿಸಿತು..

author img

By

Published : Apr 24, 2023, 10:58 PM IST

ವರ ನಟ ಡಾ ರಾಜ್‌ಕುಮಾರ್‌ ಹುಟ್ಟು ಹಬ್ಬ ಅಂಗವಾಗಿ ನವರಸ ನಾಯಕ ಜಗ್ಗೇಶ್ ರಾಜ್ ಕುಮಾರ್ ಅವರೊಂದಿಗಿನ ಒಡನಾಟವನ್ನು ಸ್ಮರಿಸಿಕೊಂಡಿದ್ದಾರೆ.

jaggesh-reaction-on-dr-rajkumar
ನಟಸಾರ್ವಭೌಮ ಡಾ ರಾಜ್​ಕುಮಾರ್ ಅವರ ಇನ್ನೊಂದು ಮುಖ ಪರಿಚಯಿಸಿದ ನಟ ಜಗ್ಗೇಶ್

ಕನ್ನಡ ಚಿತ್ರರಂಗದ ಮೇರು ನಟ ಡಾ ರಾಜ್‌ಕುಮಾರ್‌ ಈ ಮಹಾನ್ ನಟನ ಭೇಟಿ ಮಾಡುವುದು ಅವರ ಜೊತೆ ಊಟ ಮಾಡುವುದು ಹಾಗೇ ಅವರ ಜೊತೆ ಕಾಲ ಕಳೆದಿರುವವರೇ ಅದೃಷ್ಟವಂತರು. ಈ ನಟಸಾರ್ವಭೌಮ ಇಂದು ಬದುಕಿದ್ದರೆ ಸಾವಿರಾರು ಅಭಿಮಾನಿಗಳ ಜೊತೆ 94ನೇ ಹುಟ್ಟು ಹಬ್ಬವನ್ನ ಆಚರಿಸಿಕೊಳ್ಳುತ್ತಿದ್ದರು ಎಂದು ನವರಸ ನಾಯಕ ಜಗ್ಗೇಶ್ ಸ್ಮರಿಸಿದರು. ವರ ನಟ ಡಾ ರಾಜ್‌ಕುಮಾರ್‌ ಹುಟ್ಟುಹಬ್ಬದ ಅಂಗವಾಗಿ ಮಾತನಾಡಿದ ಅವರು, ಅಭಿಮಾನಿಗಳು ರಾಜ್ಯಾದ್ಯಂತ ತಮ್ಮ ಹುಟ್ಟು ಹಬ್ಬದಂತೆ ಅಣ್ಣಾವ್ರ ಜನ್ಮ ದಿನವನ್ನ ಆಚರಣೆ ಮಾಡ್ತಾರೆ ಎಂದು ಹೇಳಿದ್ರು.

ರಾಜ್‌ಕುಮಾರ್‌ ಅವರಿಂದ ನಾವು ಎಷ್ಟೋ ವಿಚಾರಗಳನ್ನು ಕಲಿತಿದ್ದೇವೆ. ಕುಟುಂಬ, ಭಾಷೆ, ಸಿನಿಮಾ ಎಂದರೇನು ಎಂಬುದನ್ನೆಲ್ಲ ಅವರಿಂದ ನೋಡಿ ಕಲಿಯಬೇಕು. ನನ್ನೊಳಗೆ ಅವರ ಬಗ್ಗೆ ಪ್ರೀತಿ ಇಂದಿಗೂ ಇದೆ. ಅವರು ಹೇಳಿದ ಎಲ್ಲ ಮಾತುಗಳನ್ನು ಚಾಚೂ ತಪ್ಪದೇ ಪಾಲಿಸಿಕೊಂಡು ಬರುತ್ತಿದ್ದೇನೆ. ಬ್ರಾಹ್ಮಣರು ಮಾತ್ರ ಬೆಳಗ್ಗೆ ಎದ್ದು ಸಂಧ್ಯಾವಂದನೆ ಮಾಡುತ್ತಾರೆ ಎಂಬ ಮಾತಿತ್ತು. ಆದರೆ ಯಾರಿಗೂ ಗೊತ್ತಿಲ್ಲದ ವಿಚಾರ ಏನೆಂದರೆ, ರಾಜ್‌ಕುಮಾರ್‌ ಕೂಡ ಸಂಧ್ಯಾವಂದನೆ ಮಾಡುತ್ತಿದ್ದರು. ಅವರು ಹೇಳಿದ್ದನ್ನು ನಾನು ಇಂದಿಗೂ ಪಾಲಿಸುತ್ತಿದ್ದೇನೆ. ನನ್ನ ಎಲ್ಲ ಪೂಜೆ ಮುಗಿದ ಬಳಿಕ ಮರೆಯದೇ 28 ಶ್ಲೋಕಗಳನ್ನು ಹೇಳಿಯೇ ನಾನು ಮನೆಯಿಂದ ಹೊರ ಬರುವುದು. ಅವರು ಅಂದೇ ಇದನ್ನೆಲ್ಲ ಮಾಡುತ್ತಿದ್ದರು ಅಂತಹ ದೊಡ್ಡ ಸಂತ ಅವರು ಎಂದು ಜಗ್ಗೇಶ್​ ಅವರು ಬಣ್ಣಿಸಿದರು.

ಇನ್ನು ಜಗ್ಗೇಶ್ ತಮ್ಮ ಜೀವನದಲ್ಲಿ ಒಂದು ದೊಡ್ಡ ಕಹಿ ಘಟನೆ ನೆನೆದು, 1993ರಲ್ಲಿ ನಾನು ಸ್ಟಾರ್ ಆಗಿದೆ. ಆ ಸಮಯದಲ್ಲಿ ಅಪ್ಪ ಅಮ್ಮನ ಮಾತು ಕೇಳಿ ಟ್ರಾನ್ಸ್ ಪೋರ್ಟ್ ಬ್ಯುಸಿನೆಸ್​ ಶುರು ಮಾಡ್ತಾರೆ. ಆ ಸಮಯದಲ್ಲಿ 50 ಲಕ್ಷ ರೂಪಾಯಿನ್ನ ಈ ಟ್ರಾವೆಲ್ಸ್ ಬ್ಯುಸಿನೆಸ್​ಗೆ ಇನ್ವೆಸ್ಟ್ ಮಾಡ್ತಾರೆ. ಇದಾದ ಬಳಿಕ ಈ ವ್ಯವಹಾರ ಹಾಲಾಗುತ್ತೆ. ಆಗ ಒಂದು ಬಸ್ಸು ಆಕ್ಸಿಡೆಂಟ್ ಆಗಿ 12 ಜನ ಸಾವನ್ನಪ್ಪುತ್ತಾರೆ. ಆಗ ನನ್ನ ಮೇಲೆ ಕೇಸ್ ದಾಖಲಾಗುತ್ತೆ. ಈ ಸಂಬಂಧ ಕೇಸ್ ಗೆಲ್ಲಲು ದಾಖಲಾತಿಗಳನ್ನು ಹೊಂದಿಸ್ತಾ ಇರ್ತೀನಿ. ಆದರೆ ನಮ್ಮವರು ಇನ್ಶೂರೆನ್ಸ್ ಕಟ್ಟಿರುವುದಿಲ್ಲ. ಆಗ ನನ್ನ ತಲೆ ಮೇಲೆ ದೊಡ್ಡ ಮಟ್ಟದ ದಂಡ ಹಾಕ್ತಾರೆ.

ಬಸ್ಸು ಟ್ರಾವೆಲ್ಸ್ ಬಗ್ಗೆ ಗೊತ್ತಿಲ್ಲದೆ ಬೇರೆಯವರನ್ನ ನಂಬಿ ಇಷ್ಟು ಮಟ್ಟದ ನಷ್ಟ ಅನುಭವಿಸಿದೆ. ಅಷ್ಟೇ ಅಲ್ಲಾ ನಾನು ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡು ಈಗ ಎಲ್ಲಾ ಕಳೆದುಕೊಂಡು ಬೀದಿಗೆ ಬಂದೆ ತುಂಬಾ ನೋವು ಮಾಡಿಕೊಂಡು ಮೇಟಾಸೀಟ್ ಎಂಬ ವಿಷ ತಗೊಂಡು ಕುಡಿದು ಬಿಡ್ತಿನಿ. ಈ ವಿಷ್ಯ ತಿಳಿದ ನನ್ನ ಸಹೋದರ ಕೋಮಲ್ ಹಾಗು ಫೈಟ್ ಮಾಸ್ಟರ್ ಕೆ.ಡಿ ವೆಂಕಟೇಶ್ ಆಸ್ಪತ್ರೆಗೆ ಕರೆದುಕೊಂಡು ವಿಷವನ್ನು ತೆಗಿಸೋದಿಕ್ಕೆ ಟ್ರೈ ಮಾಡಿದ್ದಾರೆ. ಆಗ ಆಗೋಲ್ಲ ಅಂತಾ ಮಲ್ಯ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸುತ್ತೆ. ಒಂದೂವರೆ ತಿಂಗಳು ನನಗೆ ಜ್ಞಾನ ಇರೋದಿಲ್ಲ. ಆಗ ಆ ಸಮಯದಲ್ಲಿ ಜಗ್ಗೇಶ್ ಆತುರಕ್ಕೆ ಬಿದ್ದು ನಾನು ತಪ್ಪು ಮಾಡಿದ್ದೆ ಎಂಬ ಖಿನ್ನತೆಗೆ ಒಳಗಾಗಿದ್ದೆ. ಆಗ ನನಗೆ ಒಂದು ಸತ್ಯ ಅರಿವಾಗುತ್ತೆ.

ನನ್ನ ಆತ್ಮೀಯರೊಬ್ಬರು ನೀನು ಬದುಕುವುದಕ್ಕೆ ಕಾರಣ ರಾಜ್ ಕುಮಾರ್ ಅವರು ಎಂಬ ಸತ್ಯವನ್ನ ಹೇಳ್ತಾರೆ. ಜಗ್ಗೇಶ್ ಆಸ್ಪತ್ರೆಯಲ್ಲಿ ಜ್ಞಾನ ಇಲ್ಲದೆ ನಾನು ಮಲಗಿದ್ದಾಗ ಅಣ್ಣಾವ್ರು ಬಂದು ನನ್ನ ತಲೆ ಮೇಲೆ ಎರಡು ಕೈಗಳನ್ನು ಇಟ್ಟು ಹತ್ತಾರು ಬಾರಿ ಪ್ರಾರ್ಥನೆ ಮಾಡಿದ್ರಂತೆ. ಹೋಗಬೇಕಾದ್ರೆ ಹೇಳಿದ್ರಂತೆ ಜಗ್ಗೇಶ್ ಗೆ ಏನು ಆಗೋಲ್ಲ ಎಂದಿದ್ದರಂತೆ. ಹೀಗೆ ಒಂದು ದಿನ ಪಾರ್ವತಮ್ಮ ರಾಜ್ ಕುಮಾರ್ ಫೋನ್ ಮಾಡಿ ಯಾಕೋ ಹಿಂಗೆ ಮಾಡಿಕೊಂಡೆ ಅಂದ್ರಂತೆ. ಆಗ ಮನೆಗೆ ಬಾ ಅಣ್ಣಾವ್ರು ನೋಡಬೇಕು ಅಂತಾವರೆ ಅಂದ್ರು. ಆಗ ಕೂಡಲೇ ನಾನು ಅಣ್ಣಾವ್ರ ಮನೆಗೆ ಹೋದೆ. ಅಣ್ಣಾವ್ರು ಪ್ರತಿ ಬಾರಿ ನನ್ನನ್ನ ನೋಡಿ ನಗ್ತಾ ಇದ್ದರು. ಆದರೆ ಅವತ್ತು ನಗಲಿಲ್ಲ. ನಾನು ಅಣ್ಣಾವ್ರ ಕಾಲಿಗೆ ಬಿದ್ದೆ. ಯಾಕಪ್ಪ ಹೀಗೆ ಮಾಡಿಕೊಂಡೆ ಅಂತಾ ಕೇಳಿದ್ರು.

ಆಗ ನಾನು ಅಣ್ಣಾ ನಾನು ದುಡಿದು ದುಡ್ಡನ್ನೆಲ್ಲಾ ಗೊತ್ತಿಲ್ಲದ ವ್ಯವಹಾರಕ್ಕೆ ಕೈ ಹಾಕಿ ನಷ್ಟ ಅನುಭವಿಸಿದೆ. ಆಗ ಅಣ್ಣಾವ್ರು ನೀನು ಯಾರಪ್ಪ ಜೀವ ಕಳೆದುಕೊಳ್ಳೋದಿಕ್ಕೆ ಕಾರಣ ಮೆಲೊಬ್ಬ ಇದ್ದಾನೆ ಅಂತಾ ರಾಜ್ ಕುಮಾರ್ ಅವರು ಅವರ ಬದುಕಿನ ಒಂದು ಕಥೆಯನ್ನ ಹೇಳ್ತಾರೆ. ಅಲ್ಲಾ ಕಣಯ್ಯಾ ಊಟಕ್ಕೆ ಇಲ್ಲದೇ ನಂಜುಂಡ ಸ್ವಾಮಿ ಪ್ರಸಾದವನ್ನ ತಿಂದು ಇವತ್ತು ರಾಜ್ ಕುಮಾರ್ ಆಗೋದಿಕ್ಕೆ ಕಾರಣ ಮೇಲೆ ಒಬ್ಬ ಇರುವ ದೇವರು ಅಂತಾ ಜಗ್ಗೇಶ್​ಗೆ ಬುದ್ಧಿ ಹೇಳಿ ಯಾವತ್ತೂ ಇಂತಹ ತಪ್ಪು ಮಾಡಬೇಡ ಅಂತಾ ಕಿವಿಮಾತು ಹೇಳಿ ಪ್ರಮಾಣ ಮಾಡಿಸಿಕೊಂಡ್ರು. ಯಾವುದೇ ಕಷ್ಟ ಇರಲಿ, ನಿನಗೆ ಒಳ್ಳೆ ದಿನಗಳು ಬರುತ್ತೆ ಅಂತಾ ಅಣ್ಣಾವ್ರು ಆಶೀರ್ವಾದ ಮಾಡಿದ್ದರು ಎಂದು ತಮ್ಮ ಸಂಕಷ್ಟ ಕಾಲದಲ್ಲಿ ರಾಜ್​ ಕುಮಾರ್​ ಹೇಗೆ ತನಗೇ ಧೈರ್ಯ ತುಂಬಿದ ಬಗ್ಗೆ ತಿಳಿಸಿದರು.

ಅಲ್ಲಿಂದ ಜಗ್ಗೇಶ್ ಅದೃಷ್ಟ ಖುಲಾಯಿಸುತ್ತೆ ಸರ್ವರ್ ಸೋಮಣ್ಣ ಅಂತಾ ಸಿನಿಮಾ ಬರುತ್ತೆ ಕರ್ನಾಟಕದಲ್ಲಿ ಎರಡು ವಾರ ಹೌಸ್ ಪ್ರದರ್ಶನ, ನಂತರ ಪಟ್ಟಣಕ್ಕೆ ಬಂದ ಪುಟ್ಟ ಈ ಸಿನಿಮಾ ಸೂಪರ್ ಹಿಟ್ ಆಗಿ ಮೂರು ಲಕ್ಷ ಸಂಭಾವನೆ ಪಡೆಯುತ್ತಿದ್ದ ಜಗ್ಗೇಶ್ 9 ಲಕ್ಷ ಸಂಭಾವನೆ ಪಡೆಯುವ ಹಾಗೇ ಮಾಡುತ್ತೆ. ಅಲ್ಲಿಂದ ಜಗ್ಗೇಶ್ ಕಳೆದುಕೊಂಡಿದ್ದ ನಿಧಾನವಾಗಿ ಎಲ್ಲವನ್ನ ಪಡೆಯುತ್ತಾರೆ. ಈ ಪುಣ್ಯಾತ್ಮನ ಮಾತಿನಿಂದ ಹಾಗು ಆಶೀರ್ವಾದಿಂದ ನನ್ನ ಬದುಕು ಬದಲಾವಣೆ ಆಯಿತು. ಯಾರಿಗೆ ಗೊತ್ತಿಲ್ಲ, ನಾನು ಅಣ್ಣಾವ್ರ ಕಾಲಿಗೆ ಮುತ್ತು ಇಟ್ಟು ಆಶೀರ್ವಾದ ಪಡೆಯೋದು ಅವರು ನನ್ನ ದೇವರು. ಈ ದೇವರ ಹುಟ್ಟಿದ ದಿನ ನಾನು ಅವರ ಭಕ್ತನಾಗಿ ಸ್ಮರಿಸಿದ್ದು, ಹೆಮ್ಮೆಯ ವಿಷಯ ಅಂತಾ ಜಗ್ಗೇಶ್​ ಹಳೆಯ ದಿನಗಳನ್ನು ಸ್ಮರಿಸಿದರು.

ಇದನ್ನೂ ಓದಿ:'ಮಾರ್ಟಿನ್' ಚಿತ್ರದ ಟೀಸರ್​ ಹ್ಯಾಕ್​: ಧ್ರುವ ಸರ್ಜಾ ಸಿನಿಮಾಗೆ ಕಿಡಿಗೇಡಿಗಳ ಕಾಟ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.