ETV Bharat / entertainment

'ಫೈಟರ್‌' ಚಿತ್ರದ ಟ್ರೇಲರ್ ಅನಾವರಣ; ಆ್ಯಕ್ಷನ್​​ ಸೀನ್​ಗಳಿಗೆ ಫ್ಯಾನ್ಸ್​ ಫಿದಾ

author img

By ETV Bharat Karnataka Team

Published : Jan 15, 2024, 5:40 PM IST

Fighter trailer X review: Netizens convinced Hrithik-Deepika starrer will be mind-blowing
ಫೈಟರ್‌ ಚಿತ್ರದ ಟ್ರೇಲರ್

ಫೈಟರ್‌ ಚಿತ್ರದ ಟ್ರೇಲರ್ ಇಂದು ಅನಾವರಣಗೊಂಡಿದೆ. ಸಂಭಾಷಣೆ, ಛಾಯಾಗ್ರಹಣ ಕೂಡ ಅದ್ಭುತವಾಗಿ ಮೂಡಿ ಬಂದಿದ್ದು, ನೆಟಿಜನ್​ಗಳು ಹೃತಿಕ್ ರೋಷನ್ ಮತ್ತು ಅವರ ಆ್ಯಕ್ಷನ್​​ ಸೀಕ್ವೆನ್ಸ್‌ಗಳನ್ನು ಶ್ಲಾಘಿಸಿದ್ದಾರೆ.

ಹೈದರಾಬಾದ್: ಹೃತಿಕ್ ರೋಷನ್, ದೀಪಿಕಾ ಪಡುಕೋಣೆ, ಅನಿಲ್​ ಕಪೂರ್, ಕರಣ್ ಸಿಂಗ್ ಗ್ರೋವರ್​ ಮತ್ತು ಅಕ್ಷಯ್ ಒಬೆರಾಯ್ ಸೇರಿದತೆ ದೊಡ್ಡ ತಾರಾ ಬಳಗ ಹೊಂದಿರುವ ಬಾಲಿವುಡ್​ನ ವರ್ಷದ ಬಹುನಿರೀಕ್ಷಿತ 'ಫೈಟರ್‌' ಚಿತ್ರದ ಟ್ರೈಲರ್ ಸೋಮವಾರ ಅನಾವರಣಗೊಂಡಿದೆ. 3 ನಿಮಿಷ 9 ಸೆಕೆಂಡು ಅವಧಿಯ ಟ್ರೈಲರ್ ಇದಾಗಿದ್ದು, ಸಿನಿ ರಸಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಭಯೋತ್ಪಾದನೆ ವಿರುದ್ಧ ಯುದ್ಧ ಸಾರುವ ಭಾರತೀಯ ವಾಯುಸೇನೆಯ ವೀರರ ಕಥೆ ಸಾರುವ ಚಿತ್ರ ಇದಾಗಿರಲಿದ್ದು, ಜಾಲತಾಣದಲ್ಲಿ ಟ್ರೆಂಡ್​ ಸೃಷ್ಟಿಸಿದೆ. ಯುದ್ಧ ವಿಮಾನಗಳ ಒಂದೊಂದು ಸಾಹಸ ದೃಶ್ಯಗಳು ಅದ್ಭುತವಾಗಿ ಮೂಡಿ ಬಂದಿವೆ.

  • Watched it on Big Screen (IMAX3D)
    This is some next level stuffs man.
    Aerial Action shots looks clean af 🤌
    Hand To Hand Combat Scenes 🔥🔥
    Dialogues 🥵
    And The Cinematography 🤌😍
    Hr,Sid and Action can never go wrong 🔥🔥#FighterTrailer is Perfection.pic.twitter.com/KuIOQSD1Es

    — 『AMAN』#FighterOn25thJan (@iluffy05) January 15, 2024 " class="align-text-top noRightClick twitterSection" data=" ">

ಐಮ್ಯಾಕ್ಸ್​ 3ಡಿ ವರ್ಷನ್​ನಲ್ಲೂ ಚಿತ್ರ ಬಿಡುಗಡೆಯಾಗಲಿದ್ದು, ಪ್ರೇಕ್ಷಕನ ಕುತೂಹಲ ಇಮ್ಮಡಿಗೊಳಿಸಿದೆ. ಮೂರು ನಿಮಿಷ ಈ ಟ್ರೈಲರ್​ನಲ್ಲಿ ಮೈನವಿರೇಳಿಸುವಂತಹ ಸಾಹಸ, ಯುದ್ಧ ವಿಮಾನಗಳ ಹಾರಾಟ, ಅವುಗಳ ನಡುವಿನ ಸೆಣೆಸಾಟ ಮತ್ತು ರೋಚಕ ಸನ್ನಿವೇಶಗಳು ಪ್ರೇಕ್ಷಕನನ್ನು ಸೀಟಿನ ತುದಿಗೆ ತಂದು ಕೂರಿಸುವಂತಿವೆ. ಪುಲ್ವಾಮಾ ದಾಳಿಯ ಸುತ್ತ ಹೆಣೆದಿರುವ ಚಿತ್ರ ಇದಾಗಿರಲಿದ್ದು, ಟ್ರೈಲರ್ ನೋಡಿದರೆ ದೇಶಾಭಿಮಾನ, ಸೈನಿಕರ ಸಾಧನೆ ಸಾರುವ ಕಥೆ ಎಂದು ಮನದಟ್ಟು ಮಾಡಿಕೊಳ್ಳಬಹುದು. ಸಂಭಾಷಣೆ, ಛಾಯಾಗ್ರಹಣ ಕೂಡ ಅದ್ಭುತವಾಗಿ ಮೂಡಿ ಬಂದಿದ್ದು, ನೆಟಿಜನ್​ಗಳು ಹೃತಿಕ್ ರೋಷನ್ ಮತ್ತು ಅವರ ಆ್ಯಕ್ಷನ್​​ ಸೀಕ್ವೆನ್ಸ್‌ಗಳನ್ನು ಶ್ಲಾಘಿಸಿದ್ದಾರೆ.

ಫೈಟರ್ ಟ್ರೈಲರ್ ಪರಿಪೂರ್ಣತೆಯಾಗಿದೆ. ರೋಚಕ ಸನ್ನಿವೇಶಗಳಲ್ಲಿ ಹೃತಿಕ್ ಅವರನ್ನು ಕಾಣುವುದೇ ಅದ್ಭುತ. ಪ್ರತಿ ಸೀನ್​ಗಳು ದೇಶಾಭಿಮಾನವನ್ನು ತುಂಬಿಸುತ್ತವೆ. ಚಿತ್ರದ ಬಿಡುಗಡೆಗಾಗಿ ಕಾಯುತ್ತಿದ್ದೇವೆ. ಸೈನಿಕರ ಕಥೆಯುಳ್ಳ ಇಂತಹ ಚಿತ್ರಗಳನ್ನು ಥಿಯೇಟರ್​​ನಲ್ಲಿ ಕಾಣಬೇಕು. ಚಿತ್ರಕ್ಕೆ ಶುಭವಾಗಲಿ ಅಂತೆಲ್ಲ ನೆಟಿಜನ್​ಗಳು ಕಾಮೆಂಟ್​ ಮಾಡಿದ್ದಾರೆ.

ವಯಕಾಂ18 ಸ್ಟುಡಿಯೋಸ್ ಹಾಗೂ ಮಾರ್‌ಫ್ಲಿಕ್ಸ್ ಪಿಕ್ಚರ್ಸ್ ಸಂಸ್ಥೆಗಳು ಜಂಟಿಯಾಗಿ 'ಫೈಟರ್' ಸಿನಿಮಾ ನಿರ್ಮಾಣ ಮಾಡಿದ್ದು ಚಿತ್ರದಲ್ಲಿ ವಾಯುಪಡೆಯ ಅಧಿಕಾರಿಗಳಾಗಿ ಹೃತಿಕ್ ರೋಷನ್, ದೀಪಿಕಾ ಪಡುಕೋಣೆ ಹಾಗೂ ಅನಿಲ್​ ಕಪೂರ್ ಮಿಂಚಿದ್ದಾರೆ. ಪಠಾಣ್​ ಖ್ಯಾತಿಯ ಸಿದ್ಧಾರ್ಥ್ ಆನಂದ್ ನಿರ್ದೇಶನ ಹೇಳಿದ್ದು ಜನವರಿ 25 ರಂದು ಚಿತ್ರ ಬಿಡುಗಡೆಯಾಗಲಿದೆ. ಮೊದಲ ಬಾರಿಗೆ ಹೃತಿಕ್ ಮತ್ತು ದೀಪಿಕಾ ಕಾಂಬಿನೇಷನ್​ನಲ್ಲಿ ಮೂಡಿ ಬರುತ್ತಿರುವ ಚಿತ್ರ ಇದಾಗಿದ್ದು ಅಭಿಮಾನಿಗಳು ಕೂಡ ಕಾದು ಕುಳಿತಿದ್ದಾರೆ. ಗ್ರೂಪ್ ಕ್ಯಾಪ್ಟನ್ ರಾಕೇಶ್ ಜೈ ಸಿಂಗ್ ಆಗಿ ಅನಿಲ್ ಕಪೂರ್, ಸ್ಕ್ವಾಡ್ರನ್ ಲೀಡರ್ ಶಂಷೇರ್ ಪಠಾನಿಯಾ ಆಗಿ ಹೃತಿಕ್ ರೋಷನ್, ಸ್ಕ್ವಾಡ್ರನ್ ಲೀಡರ್ ಮಿನಲ್ ರಾಥೋರ್ ಆಗಿ ದೀಪಿಕಾ ಪಡುಕೋಣೆ ಕಾಣಿಸಿಕೊಂಡಿದ್ದು ಒಟ್ಟಾಗಿ ಪುಲ್ವಾಮಾ ದಾಳಿಗೆ ಸೇಡು ತೀರಿಸಿಕೊಳ್ಳುವುದು ಟ್ರೈಲರ್​ನಲ್ಲಿ ಕಾಣಬಹುದು.

  • Any film looks deadlier when you choose a villain who can look more fierce & competitive to lead hero#FighterTrailer give us the glimpses of how we responded on PULWAMA ATTACK & showed pak d level of who's actual father
    Indian air force got tributed by
    Whole team pic.twitter.com/r8pDuTLYaL

    — A Y A N (@VijayDinanath20) January 15, 2024 " class="align-text-top noRightClick twitterSection" data=" ">

ಭಾರತದ ಮೊದಲ ವೈಮಾನಿಕ ಆ್ಯಕ್ಷನ್ ಚಿತ್ರ ಎಂದು ಬಿಂಬಿಸಿಕೊಂಡಿರುವ ಫೈಟರ್ ನೈಜ ಯುದ್ಧ ವಿಮಾನಗಳನ್ನು ಬಳಸಿಕೊಂಡು ಭಾರತದ ವಾಯುನೆಲೆಗಳಲ್ಲಿ ಇದನ್ನು ಪ್ರಧಾನವಾಗಿ ಚಿತ್ರೀಕರಿಸಲಾಗಿದೆ ಎಂದು ವರದಿಯಾಗಿದೆ. ಅಸ್ಸೋಂ, ಮುಂಬೈ, ಕಾಶ್ಮೀರ್, ಹೈದರಾಬಾದ್ ಸೇರಿದಂತೆ ಹಲವು ಭಾಗಗಳಲ್ಲಿ ಚಿತ್ರದ ಚಿತ್ರೀಕರಣ ನಡೆದಿದ್ದು, ಇದು ಈ ವರ್ಷದ ಬ್ಲಾಕ್​ ಬಸ್ಟರ್​ ಸಿನಿಮಾ ಆಗಲಿದೆ ಎಂದು ಸಿನಿಪ್ರಿಯರು ಭವಿಷ್ಯ ನುಡಿಯುತ್ತಿದ್ದಾರೆ.

ಇದನ್ನೂ ಓದಿ: ಮಾಲ್ಡೀವ್ಸ್‌ ಟಿಕೆಟ್‌ ರದ್ದುಗೊಳಿಸಿ, ಲಕ್ಷದ್ವೀಪ ಪ್ರವಾಸ ಕೈಗೊಂಡ ನಟ ನಾಗಾರ್ಜುನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.