ETV Bharat / entertainment

ಗ್ಯಾಂಗ್​​ಸ್ಟರ್ ಪಾತ್ರದಲ್ಲಿ ದುಲ್ಕರ್​ ಸಲ್ಮಾನ್​ ಅಬ್ಬರ - 'ಕಿಂಗ್​ ಆಫ್​ ಕೋಥಾ' ಯಶಸ್ಸಿಗೆ ಶಾರುಖ್ ಶುಭ ಹಾರೈಕೆ

author img

By

Published : Aug 10, 2023, 2:07 PM IST

King of Kotha Trailer: ದುಲ್ಕರ್​ ಸಲ್ಮಾನ್ ನಟನೆಯ 'ಕಿಂಗ್​ ಆಫ್​ ಕೋಥಾ' ಟ್ರೇಲರ್​ ಅನಾವರಣಗೊಂಡಿದೆ.

King of Kotha
ಕಿಂಗ್​ ಆಫ್​ ಕೋಥಾ

ದುಲ್ಕರ್​ ಸಲ್ಮಾನ್​​ ದಕ್ಷಿಣ ಚಿತ್ರರಂಗದ ಬಹುಬೇಡಿಕೆಯ ನಟ. 'ಕಿಂಗ್​ ಆಫ್​ ಕೋಥಾ' ನಟನ ಮುಂದಿನ ಸಿನಿಮಾ. ಬಹುನಿರೀಕ್ಷಿತ ಸಿನಿಮಾ ವೀಕ್ಷಣೆಗೆ ಅಭಿಮಾನಿಗಳು ಕಾತರರಾಗಿದ್ದಾರೆ. ಇದೀಗ ಚಿತ್ರದ ಟ್ರೇಲರ್​​ ಅನಾವರಣಗೊಂಡು, ಸಿನಿಪ್ರಿಯರ ಕುತೂಹಲ ಹೆಚ್ಚಿಸಿದೆ. ಬಾಲಿವುಡ್​​ ಕಿಂಗ್​ ಖಾನ್​ ಶಾರುಖ್ ಅವರು ಇಂದು ಆ್ಯಕ್ಷನ್​ ಥ್ರಿಲ್ಲರ್ ಸಿನಿಮಾ 'ಕಿಂಗ್​ ಆಫ್​ ಕೋಥಾ'ದ ಅಧಿಕೃತ ಟ್ರೇಲರ್ ಅನಾವರಣಗೊಳಿಸಿದ್ದಾರೆ.

ದುಲ್ಕರ್​ ಸಲ್ಮಾನ್​​ ಕಿಂಗ್​ ಆಫ್​ ಕೋಥಾ: ಟ್ವಿಟರ್​ನಲ್ಲಿ ಕಿಂಗ್​ ಆಫ್​ ಕೋಥಾ ಟ್ರೇಲರ್​ ಶೇರ್ ಮಾಡಿದ ಸೂಪರ್​ ಸ್ಟಾರ್​ ಶಾರುಖ್​ ಖಾನ್​​, ''ಮನಮುಟ್ಟುವ ಕಿಂಗ್​ ಆಫ್​ ಕೋಥಾ ಟ್ರೇಲರ್​, ಅಭಿನಂದನೆಗಳು ದುಲ್ಕರ್ ಸಲ್ಮಾನ್​​, ಸಿನಿಮಾಗಾಗಿ ಎದುರು ನೋಡುತ್ತಿದ್ದೇನೆ, ನಿಮಗೆ ನನ್ನ ದೊಡ್ಡ ಅಪ್ಪುಗೆ, ಸಿನಿಮಾ ದೊಡ್ಡ ಯಶಸ್ಸು ಕಾಣಲಿ ಎಂದು ಚಿತ್ರತಂಡಕ್ಕೆ ಶುಭ ಹಾರೈಸುತ್ತೇನೆ'' ಎಂದು ತಿಳಿಸಿದ್ದಾರೆ. ಎಸ್​​ಆರ್​ಕೆ ಜೊತೆಗೆ ಸೌತ್​ ಸಿನಿಮಾ ಇಂಡಸ್ಟ್ರಿಯ ಸೂಪರ್​ ಸ್ಟಾರ್​ಗಳಾದ ಮೋಹನ್​ಲಾಲ್​​, ಸೂರ್ಯ, ನಾಗಾರ್ಜುನ ಕೂಡ ಟ್ರೇಲರ್​ ಲಾಂಚ್​ ಮಾಡಿದರು.

ಗ್ಯಾಂಗ್​ಸ್ಟರ್ ಪಾತ್ರದಲ್ಲಿ ದುಲ್ಕರ್​ ಸಲ್ಮಾನ್: ಹೆಚ್ಚಾಗಿ ಕ್ಲಾಸಿ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಸೀತಾ ರಾಮಮ್​​ ನಟ ದುಲ್ಕರ್​ ಸಲ್ಮಾನ್ ​'ಕಿಂಗ್​ ಆಫ್​ ಕೋಥಾ' ಚಿತ್ರದಲ್ಲಿ ಗ್ಯಾಂಗ್​ಸ್ಟರ್ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾಗೆ ಅಭಿಲಾಷ್ ಜೋಶಿ ಆ್ಯಕ್ಷನ್​ ಕಟ್​ ಹೇಳಿದ್ದಾರೆ. ಇದೇ ಆಗಸ್ಟ್ 24 ರಂದು ಸಿನಿಮಾ ಬಿಡುಗಡೆ ಆಗಲಿದೆ. ಪ್ಯಾನ್​ ಇಂಡಿಯಾ ಮಟ್ಟದಲ್ಲಿ ರೆಡಿಯಾಗಿರುವ ಈ ಚಿತ್ರ ಓಣಂ ಸಂದರ್ಭ ತೆರೆಕಾಣಲು ಸಜ್ಜಾಗಿದ್ದು, ಚಿತ್ರತಂಡ ಪ್ರಚಾರ ಪ್ರಾರಂಭಿಸಿದೆ. 'ಕಿಂಗ್​ ಆಫ್​ ಕೋಥಾ' ಪ್ರಮೋಶನ್​ ಭಾಗವಾಗಿ ಇದೀಗ ಟ್ರೇಲರ್​ ಅನಾವರಣಗೊಂಡಿದೆ. ಸ್ಟಾರ್ ನಟರು ಸಾಥ್ ನೀಡಿರುವ ಈ ಸಿನಿಮಾ ಇದೇ ಆಗಸ್ಟ್ 24 ರಂದು ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಭಾಷೆಗಳಲ್ಲಿ ಚಿತ್ರಮಂದಿಗಲಲ್ಲಿ ತೆರೆಕಾಣಲಿದೆ. ಸಿನಿಪ್ರಿಯರು ಸಿನಿಮಾ ವೀಕ್ಷಿಸಲು ಉತ್ಸುಕರಾಗಿದ್ದಾರೆ. ಚಿತ್ರಕಥೆ ಬಗ್ಗೆ ಫ್ಯಾನ್ಸ್​ ಕುತೂಹಲ ಹೊಂದಿದ್ದಾರೆ.

  • " class="align-text-top noRightClick twitterSection" data="">

ಇದನ್ನೂ ಓದಿ: Kushi: ಕುಶಿ ಟ್ರೇಲರ್ ಅನಾವರಣ - ಅದ್ಭುತ ಪ್ರೇಮಕಥೆ ಹೇಳಲು ಸಜ್ಜಾದ ಸಮಂತಾ, ವಿಜಯ್​ ದೇವರಕೊಂಡ

ದುಲ್ಕರ್​ ಸಲ್ಮಾನ್ ಅವರು ರಾಜ್​ಕುಮಾರ್​ ರಾವ್​​ ಮತ್ತು ಗುಲ್ಶನ್​​ ದೇವಯ್ಯ ಪ್ರಮುಖ ಪಾತ್ರಗಳಲ್ಲಿರುವ 'ಗನ್ಸ್ ಆ್ಯಂಡ್​ ಗುಲಾಬ್ಸ್' ಸೀರಿಸ್​ ಮೂಲಕ ಡಿಜಿಟಲ್​ಗೆ ಪ್ರವೇಶಿಸಲಿದ್ದಾರೆ. ಇದು ನಟನ ಚೊಚ್ಚಲ ವೆಬ್​ ಸೀರಿಸ್​. ರಾಜ್​ ಮತ್ತು ಡಿಕೆ ಜೋಡಿಯ ನಿರ್ದೇಶನದಲ್ಲಿ ತಯಾರಾಗಿರುವ ಈ ಸರಣಿ ಆಗಸ್ಟ್ 18 ರಿಂದ ಒಟಿಟಿ ಪ್ಲಾಟ್​ಫಾರ್ಮ್​​ ನೆಟ್​ಫ್ಲಿಕ್ಸ್​ನಲ್ಲಿ ಸ್ಟ್ರೀಮ್​ ಆಗಲಿದೆ. 90ರ ದಶಕದಲ್ಲಿ ಗುಲಾಬ್​​ಗಂಜ್​​ ಎಂಬ ಪಟ್ಟಣದಲ್ಲಿ ನಡೆಯುವ ಕಥೆ ಇದು. 'ಕಿಂಗ್​ ಆಫ್​ ಕೋಥಾ' ಬಿಡುಗಡೆಗೂ ಮುನ್ನ 'ಗನ್ಸ್ ಆ್ಯಂಡ್​ ಗುಲಾಬ್ಸ್' ಸರಣಿ ಪ್ರಸಾರ ಪ್ರಾರಂಭಿಸಲಿದೆ.

ಇದನ್ನೂ ಓದಿ: Kiara Advani: ಕಣ್ಣಲ್ಲೇ ಕೊಲ್ತಾರೆ ಕಿಯಾರಾ ಅಡ್ವಾಣಿ ಅಂದಕ್ಕೆ ಹುಬ್ಬೇರಿಸಿದ ಅಭಿಮಾನಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.