ETV Bharat / entertainment

'Powder': ದಿಗಂತ್ ಅಭಿನಯದ ಪೌಡರ್ - ಮೊದಲ ಹಂತದ ಚಿತ್ರೀಕರಣ ಪೂರ್ಣ

author img

By ETV Bharat Karnataka Team

Published : Dec 5, 2023, 7:28 PM IST

ಸ್ಯಾಂಡಲ್​ವುಡ್​ನ ದೂದ್ ಪೇಡಾ ಖ್ಯಾತಿಯ ದಿಗಂತ್ ಅಭಿನಯಿಸುತ್ತಿರುವ ಪೌಡರ್ ಚಿತ್ರದ ಮೊದಲ ಹಂತದ ಚಿತ್ರೀಕರಣ ಪೂರ್ಣಗೊಂಡಿದೆ.

Diganth starrer Powder
ದಿಗಂತ್ ಅಭಿನಯದ ಪೌಡರ್ ಚಿತ್ರೀಕರಣ

ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಚಿತ್ರಗಳ‌ ಮೂಲಕ ಗುರುತಿಸಿಕೊಂಡಿರುವ ನಟ‌ ದಿಗಂತ್. ಸ್ಯಾಂಡಲ್​ವುಡ್​ನ ದೂದ್ ಪೇಡಾ ಅಂತಾನೇ ಫೇಮಸ್. ಕ್ಯೂಟ್​ ಹೀರೋ ದಿಗಂತ್ ಸದ್ಯ 'ಪೌಡರ್' ಅಂತಿದ್ದಾರೆ. ಹೌದು, 'ಪೌಡರ್' ಎಂಬ ವಿಭಿನ್ನ ಶೀರ್ಷಿಕೆಯ ಚಿತ್ರದಲ್ಲಿ ದಿಗಂತ್​ ಅಭಿನಯಿಸುತ್ತಿದ್ದಾರೆ. ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ನಟನ ಹೊಸ ಚಿತ್ರವಿದು.

ಪೌಡರ್ ಮೊದಲ ಹಂತದ ಚಿತ್ರೀಕರಣ; ಮೈಸೂರಿನಲ್ಲಿ ಈ 'ಪೌಡರ್' ಚಿತ್ರದ ಮೊದಲ ಹಂತದ ಚಿತ್ರೀಕರಣ ಪೂರ್ಣಗೊಂಡಿದೆ. 30 ದಿನಗಳ ಕಾಲ ನಡೆದ ಚಿತ್ರೀಕರಣದಲ್ಲಿ ದಿಗಂತ್‍, ಧನ್ಯಾ ರಾಮ್‍ ಕುಮಾರ್, ಶರ್ಮಿಳಾ ಮಾಂಡ್ರೆ, ರಂಗಾಯಣ ರಘು, ಅಚ್ಯುತ್ ಕುಮಾರ್, ಅನಿರುದ್ಧ್ ಆಚಾರ್ಯ, ರವಿಶಂಕರ್ ಗೌಡ ಸೇರಿದಂತೆ ಮೊದಲಾದ ಪ್ರತಿಭಾವಂತ ಕಲಾವಿದರು ಭಾಗಿ ಆಗಿದ್ದರು. ಮೊದಲ ಹಂತದ ಚಿತ್ರೀಕರಣ ಮುಗಿಸಿರುವ ಚಿತ್ರತಂಡ, ಶೀಘ್ರದಲ್ಲೇ ಬೆಂಗಳೂರಿನಲ್ಲಿ ಎರಡನೇ ಹಂತದ ಚಿತ್ರೀಕರಣ ಪ್ರಾರಂಭಿಸಲು ಸಜ್ಜಾಗುತ್ತಿದೆ.

'ಪೌಡರ್' ಒಂದು ಹಾಸ್ಯಮಯ ಚಿತ್ರ. ಒಂದು ಸಣ್ಣ ಊರಿನ ಯುವಕರಿಗೆ ದೊಡ್ಡ ಪ್ರಮಾಣದ ಕೊಕೇನ್ ಸಿಗುತ್ತದೆ. ಒಂದು ಕಡೆ ಆ ಕೊಕೇನ್​​ ಹುಡುಕಾಟದಲ್ಲಿ ದುಷ್ಟರ ಗುಂಪು. ಇನ್ನೊಂದು ಕಡೆ ಆ ಕೊಕೇನ್ ಮಾರಿ ದಿಢೀರ್ ಶ್ರೀಮಂತರಾಗಬೇಕೆಂದು ಅಂದುಕೊಳ್ಳುವ ಯುವಕರ ಗುಂಪು. ಅಲ್ಲದೇ, ತನ್ನ ಅಧಿಪತ್ಯ ಸ್ಥಾಪಿಸಲು ಪ್ರಯತ್ನಿಸುತ್ತಿರುವ ಓರ್ವ ಮಾಸ್ಟರ್ ಮೈಂಡ್ ಪರ್ಸನಾಲಿಟಿ. ಈ ಹಾವು ಏಣಿ ಆಟದಲ್ಲಿ ಗೆಲ್ಲೋರು ಯಾರು? ಎಂಬುದನ್ನು ಮನರಂಜನಾತ್ಮಕವಾಗಿ ಹೇಳುವ ಪ್ರಯತ್ನವನ್ನು ಈ ಚಿತ್ರದಲ್ಲಿ ಮಾಡಲಾಗುತ್ತಿದೆ. ಜನಾರ್ದನ್‍ ಚಿಕ್ಕಣ್ಣ ಕಥೆ ಬರೆದು, ಆ್ಯಕ್ಷನ್​ ಕಟ್ ಹೇಳುತ್ತಿದ್ದಾರೆ.

Diganth starrer Powder
ನಟ ದಿಗಂತ್

ಈ ಚಿತ್ರದಲ್ಲಿ ದಿಗಂತ್, ಧನ್ಯಾ ರಾಮ್​​ಕುಮಾರ್, ಶರ್ಮಿಳಾ ಮಾಂಡ್ರೆ, ಅನಿರುದ್ಧ್ ಆಚಾರ್ಯ, ರಂಗಾಯಣ ರಘು, ಅಚ್ಯುತ್ ಕುಮಾರ್, ರವಿಶಂಕರ್ ಗೌಡ ಸೇರಿದಂತೆ ಹಲವರು ನಟಿಸಿದ್ದಾರೆ. ಸಂಗೀತ ನಿರ್ದೇಶಕ ಸೀನ್ ರೋಲ್ಡನ್ ಚಿತ್ರಕ್ಕೆ ಸಂಗೀತ ಸಂಯೋಜಿಸುತ್ತಿದ್ದಾರೆ. ದೀಪಕ್ ವೆಂಕಟೇಶನ್ ಕಥೆ-ಚಿತ್ರಕಥೆ ಬರೆದಿರುವ ಈ ಚಿತ್ರಕ್ಕೆ ಶಾಂತಿ ಸಾಗರ್ ಅವರ ಛಾಯಾಗ್ರಹಣವಿದೆ. ಕೆ.ಆರ್.ಜಿ ಸ್ಟುಡಿಯೋಸ್‍ ಮತ್ತು ಟಿ.ವಿ.ಎಫ್‍ ಮೋಷನ್‍ ಪಿಕ್ಚರ್ಸ್ ಅಡಿ ಸಿನಿಮಾ ನಿರ್ಮಾಣಗೊಳ್ಳುತ್ತಿದೆ. 2024ರ ಏಪ್ರಿಲ್‍ನಲ್ಲಿ 'ಪೌಡರ್' ಅನ್ನು ರಾಜ್ಯಾದ್ಯಂತ ಬಿಡುಗಡೆ ಮಾಡುವ ಯೋಜನೆಯನ್ನು ಚಿತ್ರತಂಡ ಹಾಕಿಕೊಂಡಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ 'ಹಾಯ್ ನಾನ್ನ' ಪ್ರಚಾರ: ಶಿವಣ್ಣನನ್ನು ಭೇಟಿಯಾದ ನ್ಯಾಚುರಲ್​​​ ಸ್ಟಾರ್ ನಾನಿ

ದಿಗಂತ್ ಅವರ ಮತ್ತೊಂದು ಬಹುನಿರೀಕ್ಷಿತ ಸಿನಿಮಾ 'ದಿ ಜಡ್ಜ್​​ಮೆಂಟ್'. ಸಿನಿಮಾ ಸದ್ಯ ಪೋಸ್ಟ್ ಪ್ರೊಡಕ್ಷನ್​ ಹಂತದಲ್ಲಿದೆ. ಡಬ್ಬಿಂಗ್​​ ಬಹುತೇಕ ಪೂರ್ಣಗೊಂಡಿದೆ. ದಿಗಂತ್​ ಜೊತೆ ಕ್ರೇಜಿಸ್ಟಾರ್ ರವಿಚಂದ್ರನ್, ಧನ್ಯಾ ರಾಮ್​ಕುಮಾರ್, ಮೇಘನಾ ಗಾಂವ್ಕರ್ ಸೇರಿದಂತೆ ಹಲವರು ನಟಿಸಿದ್ದಾರೆ. ಗುರುರಾಜ ಕುಲಕರ್ಣಿ ಚಿತ್ರಕ್ಕೆ ಆ್ಯಕ್ಷನ್​ ಕಟ್​​ ಹೇಳಿದ್ದಾರೆ. ಅತಿ ಶೀಘ್ರದಲ್ಲೇ ಸಿನಿಮಾ ಬಿಡುಗಡೆಗೊಳಿಸುವ ಹಾದಿಯಲ್ಲಿ ಚಿತ್ರತಂಡವಿದೆ.

ಇದನ್ನೂ ಓದಿ: ಕೆಜಿಎಫ್​ ಸ್ಟಾರ್​ ಸಿನಿಮಾ ಮೇಲೆ ಬೆಟ್ಟದಷ್ಟು ನಿರೀಕ್ಷೆ; 'ಯಶ್​​ 19' ಅನೌನ್ಸ್​ಮೆಂಟ್​ಗೆ ಕಾತರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.