ETV Bharat / entertainment

ರೊಮ್ಯಾಂಟಿಕ್ ಮೂಡ್​ನಲ್ಲಿ ಧನ್ಯಾ ರಾಮ್ ಕುಮಾರ್ - ದೂದ್​ಪೇಡಾ ದಿಗಂತ್​

author img

By

Published : Aug 8, 2023, 7:52 PM IST

Dhanya Digant Dance: 'ದ ಜಡ್ಜ್​​ಮೆಂಟ್' ಚಿತ್ರದಲ್ಲಿ ಧನ್ಯಾ ದಿಗಂತ್ ಹೆಜ್ಜೆ ಹಾಕಿದ್ದಾರೆ.

Dhanya Digant Dance
ಧನ್ಯಾ ದಿಗಂತ್​ ಡ್ಯಾನ್ಸ್

ಕ್ರೇಜಿಸ್ಟಾರ್ ರವಿಚಂದ್ರನ್ ಹಾಗು ದೂದ್ ಪೇಡಾ ದಿಗಂತ್ ಮೊದಲ ಬಾರಿ ತೆರೆ ಹಂಚಿಕೊಳ್ಳುತ್ತಿರುವ ಸಿನಿಮಾ 'ದ ಜಡ್ಜ್​​ಮೆಂಟ್'. ಗುರುರಾಜ ಕುಲಕರ್ಣಿ ಆ್ಯಕ್ಷನ್​ ಕಟ್ ಹೇಳುತ್ತಿರುವ ದ ಜಡ್ಜ್​​ಮೆಂಟ್ ಚಿತ್ರದ ಶೂಟಿಂಗ್​​ ಬೆಂಗಳೂರಿನಲ್ಲಿ ಭರದಿಂದ ಸಾಗಿದೆ.

ಪ್ರಸ್ತುತ ಬೆಂಗಳೂರಿನ ಡೆಕ್ ಆಫ್ ಬ್ರೆವ್ಯುಸ್ ಪಬ್​ನಲ್ಲಿ ದಿಗಂತ್ ಹಾಗೂ ಧನ್ಯಾ ರಾಮ್ ಕುಮಾರ್ ಜೋಡಿಯ ರೊಮ್ಯಾಂಟಿಂಕ್ ಹಾಡನ್ನು ನಿರ್ದೇಶಕ ಗುರುರಾಜ್ ಚಿತ್ರೀಕರಿಸಿಕೊಂಡಿದ್ದಾರೆ. ಈ ಹಾಡಿನಲ್ಲಿ ದಿಗಂತ್ ಧನ್ಯಾ ಜೊತೆಯಾಗಿ ಬೊಂಬಾಟ್ ಸ್ಟೆಪ್ ಹಾಕಿದ್ದಾರೆ.

Dhanya Ram Kumar
'ದ ಜಡ್ಜ್​​ಮೆಂಟ್' ಶೂಟಿಂಗ್​ ಚುರುಕು

ಇವರ ಜೊತೆಗೆ ಕಲಾವಿದರಾದ ಅಶ್ವಿನ್, ಸುಶೀಲ್ ನಾಗ್ ಮತ್ತು ಸುವೀಷ್ ಸಾಥ್ ನೀಡಿದ್ದಾರೆ. ಈ ಹಾಡಿಗಾಗಿ ಸುಮಾರು 75 ನೃತ್ಯ ಕಲಾವಿದರು ಮತ್ತು 50 ಸಹ ಕಲಾವಿದರನ್ನು ಬಳಸಿಕೊಳ್ಳಲಾಗಿದೆ. ಹಾಡನ್ನು ಸಂಯೋಜಿಸಿದ ಅನೂಪ್ ಸೀಳಿನ್ ಮತ್ತು ಸಾಹಿತ್ಯ ರಚಿಸಿರುವ ಪ್ರಮೋದ್ ಮರವಂತೆ ಸಹ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ನಮ್ಮ ಹಾಡು ಈ ವರ್ಷದಲ್ಲಿ ಸೂಪರ್ ಹಿಟ್ ಆಗೋದು ಪಕ್ಕಾ ಅಂತಾರೆ ಚಿತ್ರತಂಡದವರು.

ಹೊಸತನದ ಬೀಟ್ಸ್ ಇರುವ ಈ ಹಾಡಿಗಾಗಿ, ಬಾಲಿವುಡ್​ನಿಂದ ಊರ್ವಶಿ ಮತ್ತು ಗೋವಾದಿಂದ ಸಾನಿಯಾ ಅವರನ್ನು ಚಿತ್ರತಂಡ ವಿಶೇಷವಾಗಿ ಆಹ್ವಾನಿಸಿತ್ತು. ನೃತ್ಯ ಸಂಯೋಜನೆಗೆ ಯುವ ನಿರ್ದೇಶಕ ರಾಮ್ ಕಿರಣ್ ಮತ್ತು ಅವರ ತಂಡ ಕೆಲಸ ಮಾಡಿದೆ.

Dhanya Digant Dance
ದೂದ್​ಪೇಡಾ ದಿಗಂತ್​ ಡ್ಯಾನ್ಸ್

ದ ಜಡ್ಜ್​ಮೆಂಟ್ ಸಿನಿಮಾ ಕಥೆ ಲೀಗಲ್ ಥ್ರಿಲ್ಲರ್ ಶೈಲಿಯಾಗಿದ್ದು, ಇಂದಿನ ಪ್ರಸ್ತುತ ವಿದ್ಯಮಾನಗಳನ್ನು, ಘಟನೆಗಳನ್ನು ಆಧಾರವಾಗಿ ಇಟ್ಟುಕೊಂಡು ಕಥೆ ಹೆಣೆಯಲಾಗಿದೆ. ಈ ಸಿನಿಮಾ ಪ್ರೇಕ್ಷಕರಿಗೆ ಹೊಸ ಅನುಭವ, ಮನರಂಜನೆ ಕೊಡೋದು ಪಕ್ಕಾ ಅನ್ನೋದು ಎಂದು ನಿರ್ದೇಶಕ ಗುರುರಾಜ ಕುಲಕರ್ಣಿ ಅವರ ವಿಶ್ವಾಸ.

ಕ್ರೇಜಿ ಸ್ಟಾರ್ ವಿ. ರವಿಚಂದ್ರನ್, ದಿಗಂತ್ ಮಂಚಾಲೆ, ಮೇಘನಾ ಗಾಂವ್ಕರ್, ಧನ್ಯಾ ರಾಮಕುಮಾರ್, ಲಕ್ಷ್ಮೀ ಗೋಪಾಲಸ್ವಾಮಿ, ಟಿ.ಎಸ್ ನಾಗಾಭರಣ, ಪ್ರಕಾಶ ಬೆಳವಾಡಿ, ಕೃಷ್ಣ ಹೆಬ್ಬಾಳೆ, ರಂಗಾಯಣ ರಘು, ರಾಜೇಂದ್ರ ಕಾರಂತ್, ಸುಜಯ್ ಶಾಸ್ತ್ರೀ, ರೂಪಾ ರಾಯಪ್ಪ, ರವಿಶಂಕರ ಗೌಡ ಸೇರಿದಂತೆ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Dhanya Digant Dance
ಧನ್ಯಾ ರಾಮ್ ಕುಮಾರ್ - ದೂದ್​ಪೇಡಾ ದಿಗಂತ್​ ಡ್ಯಾನ್ಸ್

ಇದನ್ನೂ ಓದಿ: DON 3: ಮುಂದಿನ ಡಾನ್​ ಶಾರುಖ್​ ಅಲ್ಲ ರಣ್​ವೀರ್! ಸಿಂಗ್​ ಜೊತೆ ಕಿಯಾರಾ ಅಭಿನಯ

ಕೆಂಪರಾಜು ಬಿ ಎಸ್ ಸಂಕಲನ, ಪ್ರಮೋದ್ ಮರವಂತೆ ಗೀತರಚನೆ, ರವಿವರ್ಮ ಸಾಹಸ ನಿರ್ದೇಶನ ಹಾಗೂ ರೂಪೇಂದ್ರ ಆಚಾರ್ ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿದೆ. ಎಂ ಎಸ್ ರಮೇಶ್ ಸಂಭಾಷಣೆ ಬರೆದಿದ್ದಾರೆ. ಸ್ಕ್ರಿಪ್ಟ್ ಸೂಪರ್​ವೈಸರ್ ಆಗಿ ಪಿ. ವಾಸುದೇವ ಮೂರ್ತಿ ಕಾರ್ಯ ನಿರ್ವಹಿಸಿದ್ದಾರೆ. ಗುರುರಾಜ ಕುಲಕರ್ಣಿ ರಚನೆ ಹಾಗೂ ನಿರ್ದೇಶನದ ಈ ಚಿತ್ರಕ್ಕೆ ಪಿ ಕೆ ಹೆಚ್ ದಾಸ್ ಛಾಯಾಗ್ರಹಣ, ಅನೂಪ್ ಸೀಳಿನ್ ಸಂಗೀತ ನೀಡಿದ್ದಾರೆ. ಬಹುತೇಕ ಮಾತಿನ ಭಾಗದ ಚಿತ್ರೀಕರಣ ಮುಗಿಸಿರೋ ದ ಜಡ್ಜ್​ಮೆಂಟ್​ ಸಿನಿಮಾ ಅದಷ್ಟು ಶೀಘ್ರ ಚಿತ್ರೀಕರಣ ಮುಗಿಸಿ ಪ್ರೇಕ್ಷಕರ ಮುಂದೆ ಬರಲಿದೆ.

ಇದನ್ನೂ ಓದಿ: Prakash Raj: ನಾನು ಹೋಮದಲ್ಲಿ ಭಾಗಿಯಾಗಿದ್ದು ನನಗೆ ಸಮಸ್ಯೆ ಇಲ್ಲ ಅಂದ್ಮೇಲೆ ನಿಮಗೇಕೆ?- ಪ್ರಕಾಶ್ ರಾಜ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.