ETV Bharat / entertainment

ಅಭಿಮಾನಿಗಳಲ್ಲಿ ಕ್ಷಮೆಯಾಚಿಸಿದ ರಣಬೀರ್ ಕಪೂರ್.. ಯಾವ ಕಾರಣಕ್ಕಾಗಿ ಗೊತ್ತಾ

author img

By

Published : Aug 24, 2022, 6:02 PM IST

ನಾನು ಯಾರ ಮನಸ್ಸನ್ನಾದರು ನೋಯಿಸಿದ್ದರೆ, ಯಾರನ್ನಾದರೂ ಪ್ರಚೋದಿಸಿದ್ದರೆ, ನಾನು ನಿಜವಾಗಿಯೂ ಕ್ಷಮೆಯಾಚಿಸಲು ಬಯಸುತ್ತೇನೆ. ನೋಯಿಸುವುದು ನನ್ನ ಉದ್ದೇಶವಲ್ಲ ಎಂದು ರಣ್​ಬೀರ್​ ಕಪೂರ್ ತಿಳಿಸಿದ್ದಾರೆ.

Brahmastra promotions
ಬ್ರಹ್ಮಾಸ್ತ್ರ ​ಸಿನಿಮಾ ಪ್ರಚಾರ

ಬಾಲಿವುಡ್​ ನಟಿ ಆಲಿಯಾ ಭಟ್ ಮತ್ತು ನಟ ರಣಬೀರ್ ಕಪೂರ್ ಜೋಡಿಯಾಗಿ ನಟಿಸಿರುವ ಬಹು ನಿರೀಕ್ಷಿತ ಬ್ರಹ್ಮಾಸ್ತ್ರ ​ಸಿನಿಮಾ ಸೆಪ್ಟೆಂಬರ್​ 9ರಂದು ಬಿಡುಗಡೆ ಆಗಲಿದೆ. ಈ ನಿಟ್ಟಿನಲ್ಲಿ ಇಂದು ಚೆನ್ನೈನಲ್ಲಿ ಬ್ರಹ್ಮಾಸ್ತ್ರ ​ಸಿನಿಮಾ ಪ್ರಚಾರ ಕಾರ್ಯಕ್ರಮ ನಡೆಯಿತು. ರಣ್​ಬೀರ್​ ಕಪೂರ್​, ನಿರ್ದೇಶಕ ಎಸ್ ಎಸ್ ರಾಜಮೌಳಿ ಮತ್ತು ನಟ ನಾಗಾರ್ಜುನ ಮಾಧ್ಯಮಗಳ ಮುಂದೆ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ತಮ್ಮ ಕಾಮೆಂಟ್​ವೊಂದರ ಸಲುವಾಗಿ ರಣಬೀರ್ ಕಪೂರ್ ಅಭಿಮಾನಿಗಳಲ್ಲಿ ಕ್ಷಮೆ ಯಾಚಿಸಿದರು.

ಏ.14, 2022ರಂದು ಮುಂಬೈನ ಬಾಂದ್ರಾದಲ್ಲಿರುವ ರಣ್​​​ಬೀರ್ ಕಪೂರ್ ನಿವಾಸದಲ್ಲಿ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಜೂನ್​ 27 ರಂದು ಈ ದಂಪತಿ ತಾವು ಶೀಘ್ರದಲ್ಲೇ ಪೋಷಕರಾಗುತ್ತಿದ್ದೇವೆ ಎಂದು ಘೋಷಿಸಿ ಅಭಿಮಾನಿಗಳಿಗೆ ಸಿಹಿ ಸುದ್ದಿಯನ್ನು ಸಹ ನೀಡಿದ್ದರು.

ಆದರೆ ಇತ್ತೀಚೆಗೆ ಗರ್ಭಾವಸ್ಥೆಯಲ್ಲಿರುವ ಆಲಿಯಾ ಭಟ್ ತೂಕ ಹೆಚ್ಚಿಕೊಳ್ಳುತ್ತಿರುವ ಬಗ್ಗೆ ರಣ್​​​ಬೀರ್ ಕಪೂರ್ ಹೇಳಿಕೆ ನೀಡಿದ್ದರು. ಈ ಹೇಳಿಕೆಯನ್ನು ಕೆಲವರು ಜೋಕ್ ಆಗಿ ಸ್ವೀಕರಿಸಿದ್ದರೆ ಮತ್ತೆ ಹಲವರಿಗೆ ಹಿಡಿಸಿಲ್ಲ. ರಣ್​​​ಬೀರ್ ಕಪೂರ್ ಹೇಳಿಕೆಯನ್ನು ಸಾಕಷ್ಟು ನೆಟಿಜೆನ್​ಗಳು ವಿರೋಧಿಸಿದ್ದರು. ಈ ಬಗ್ಗೆ ಇಂದಿನ ಕಾರ್ಯಕ್ರಮದಲ್ಲಿ ನಟ ರಣಬೀರ್ ಕಪೂರ್ ಪ್ರತಿಕ್ರಿಯೆ ನೀಡಿದ್ದಾರೆ.

ನಟ ರಣಬೀರ್ ಕಪೂರ್

ನಾನು ನನ್ನ ಪತ್ನಿಯನ್ನು ತುಂಬಾ ಇಷ್ಟ ಪಡುತ್ತೇನೆಂದು ಮಾತು ಶುರು ಮಾಡಿದ ರಣ್​ಬೀರ್​ ಕಪೂರ್, ನಾನು ಯಾರ ಮನಸ್ಸನ್ನಾದರು ನೋಯಿಸಿದ್ದರೆ, ಯಾರನ್ನಾದರೂ ಪ್ರಚೋದಿಸಿದ್ದರೆ, ನಾನು ನಿಜವಾಗಿಯೂ ಕ್ಷಮೆಯಾಚಿಸಲು ಬಯಸುತ್ತೇನೆ. ನೋಯಿಸುವುದು ನನ್ನ ಉದ್ದೇಶವಲ್ಲ. ಯಾರೇ ಪ್ರಚೋದನೆಗೊಳಗಾಗಿದ್ದರೂ ಅಥವಾ ಮನನೊಂದಿದ್ದರೂ ಕ್ಷಮಿಸಿ ಎಂದು ರಣ್​ಬೀರ್​ ಕ್ಷಮೆಯಾಚಿಸಿದರು. ಮಾತು ಮುಂದುವರಿಸಿದ ನಟ, ನಾನು ಈ ಬಗ್ಗೆ ಆಲಿಯಾ ಅವರಲ್ಲಿ ಮಾತನಾಡಿದೆ. ಆಲಿಯಾ ಪರವಾಗಿಲ್ಲ ಎಂದು ಹೇಳಿ ನಕ್ಕರು. ನಾನು ಕೆಟ್ಟ ಹಾಸ್ಯಪ್ರಜ್ಞೆಯನ್ನು ಹೊಂದಿದ್ದೇನೆ. ಕೆಲವೊಮ್ಮೆ ಹೀಗೆ ಆಗುತ್ತದೆ. ನನ್ನನ್ನು ಕ್ಷಮಿಸಿ ಎಂದು ಕೇಳಿಕೊಂಡರು.

ಇದನ್ನೂ ಓದಿ: ಚೆನ್ನೈನಲ್ಲಿ ಬ್ರಹ್ಮಾಸ್ತ್ರ ​ಸಿನಿಮಾ ಪ್ರಚಾರ - ದಕ್ಷಿಣ ಭಾರತದ ಆಹಾರ ಸವಿದ ರಣ್​​ಬೀರ್ ಕಪೂರ್

ಇತ್ತೀಚೆಗೆ ಯೂಟ್ಯೂಬ್ ಲೈವ್ ಸೆಷನ್​ನಲ್ಲಿ, ನೀವ್ಯಾಕೆ ಒಟ್ಟಿಗೆ ಸಿನಿಮಾ ಪ್ರಚಾರಕ್ಕೆ ಮುಂದಾಗುತ್ತಿಲ್ಲ ಎಂದು ಕೇಳಿದ ಪ್ರಶ್ನೆಗೆ ರಣ್​ಬೀರ್​ ಕಪೂರ್​ ಆಲಿಯಾ ಭಟ್ ಬೇಬಿ ಬಂಪ್ ತೋರಿಸಿದ್ದರು. ಇದು ಟೀಕೆಗೆ ಒಳಗಾಗಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.