ETV Bharat / entertainment

3 ಈಡಿಯಟ್ಸ್‌ ಸೀಕ್ವೆಲ್ ಸುಳಿವು ಕೊಟ್ಟ ಸ್ಟಾರ್ಸ್​... All is Well ಎಂದ ಫ್ಯಾನ್ಸ್

author img

By

Published : Mar 24, 2023, 5:12 PM IST

3 ಈಡಿಯಟ್ಸ್‌ ತಾರೆಯರು ತಮ್ಮ ಚಿತ್ರದ ಸೀಕ್ವೆಲ್ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದ್ದಾರೆ.

3 idiots sequel
3 ಈಡಿಯಟ್ಸ್‌ ಸೀಕ್ವೆಲ್

ರಾಜ್‌ಕುಮಾರ್ ಹಿರಾನಿ ಅವರ ಬ್ಲಾಕ್‌ಬಸ್ಟರ್ ಚಿತ್ರ '3 ಈಡಿಯಟ್ಸ್‌' ತಾರೆಯರು ಅಭಿಮಾನಿಗಳ ತಲೆಗೆ ಹುಳ ಬಿಟ್ಟಿದ್ದಾರೆ. ಇಂದು ನಟಿ ಕರೀನಾ ಕಪೂರ್ ಖಾನ್, ನಟ ಬೊಮನ್ ಇರಾನಿ ಮತ್ತು ನಟ ಜಾವೇದ್ ಜಾಫೆರಿ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಕೆಲ ವಿಡಿಯೋ ಹಂಚಿಕೊಂಡಿದ್ದಾರೆ. ಅದರಲ್ಲಿ 3 ಈಡಿಯಟ್ಸ್‌ನ ಸೀಕ್ವೆಲ್​​ ಬಗ್ಗೆ ಸುಳಿವು ನೀಡಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ಇಂದು ವಿಡಿಯೋವೊಂದನ್ನು ಹಂಚಿಕೊಂಡಿರುವ ನಟಿ ಕರೀನಾ ಕಪೂರ್ ಖಾನ್​, 3 ಈಡಿಯಟ್ಸ್‌ ಸೀಕ್ವೆಲ್ ಬಗ್ಗೆ ಸುಳಿವು ಬಿಟ್ಟುಕೊಟ್ಟಿದ್ದಾರೆ. ಅವರು ಆಫ್ರಿಕಾದಲ್ಲಿ ಪತಿ ಸೈಫ್ ಅಲಿ ಖಾನ್, ಪುತ್ರರಾದ ಜೆಹ್ ಅಲಿ ಖಾನ್ ಮತ್ತು ತೈಮೂರ್ ಅಲಿ ಖಾನ್ ಜೊತೆ ಸಮಯ ಕಳೆಯುತ್ತಿರುವಾಗ, ಅಮೀರ್ ಖಾನ್, ಶರ್ಮಾನ್ ಜೋಶಿ ಮತ್ತು ಆರ್ ಮಾಧವನ್ ಪತ್ರಿಕಾಗೋಷ್ಠಿಗಾಗಿ ಒಟ್ಟಿಗೆ ಬರುತ್ತಿರುವ ಬಗ್ಗೆ ಮಾತನಾಡಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ನನ್ನಿಂದ ಯಾವುದಾದರು ರಹಸ್ಯವನ್ನು ಮುಚ್ಚಿಡುತ್ತಿದ್ದಾರೋ, ಹೇಗೆ?. ಹಾಗಂತ ಅವರು ಶರ್ಮಾನ್ ಜೋಶಿ ಅವರ ಸಿನಿಮಾ ಪ್ರಚಾರಕ್ಕೆ ಬರುತ್ತಿದ್ದಾರೆಂದು ನೀವು ಹೇಳಬೇಡಿ. ಇದು ಖಂಡಿತವಾಗಿ ಸೀಕ್ವೆಲ್​ ಬಗ್ಗೆ. ಬೊಮನ್ ಇರಾನಿ ಅವರಿಗೆ ಕರೆ ಮಾಡುತ್ತಿದ್ದೇನೆ ಎಂದು ಹೇಳುವ ಮೂಲಕ ಈ ವಿಡಿಯೋ ಕೊನೆಗೊಳಿಸಿದ್ದಾರೆ.

ಫೆಬ್ರವರಿಯಲ್ಲಿ, ಅಮೀರ್ ಖಾನ್​​, ಆರ್ ಮಾಧವನ್ ಮತ್ತು ಶರ್ಮಾನ್ ಅವರು 'ಕಂಗ್ರಾಜುಲೇಶನ್ಸ್​' ಸಿನಿಮಾ ಪ್ರಚಾರದ ವಿಡಿಯೋವೊಂದಕ್ಕೆ ಸೇರಿದ್ದರು. ಇದೀಗ ಕರೀನಾ ಕಪೂರ್​ ಖಾನ್​ ವಿಡಿಯೋವನ್ನು ಹಂಚಿಕೊಂಡ ಕೂಡಲೇ, ನಟ ಬೊಮನ್ ಇರಾನಿ ಕೂಡ ತಮ್ಮ ಇನ್‌ಸ್ಟಾಗ್ರಾಮ್​ನಲ್ಲಿ ತಮ್ಮ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. "ನೀವು ಏನು ಮಾಡಿದ್ದೀರೋ ಅದು ಈಗಾಗಲೇ ಹೊರಬಂದಿದೆ ಮತ್ತು ವಿಡಿಯೋ ಕ್ಲಿಪ್ ವೈರಲ್ ಆಗಿದೆ. ನೀವು ವೈರಸ್ (ಬೋಮನ್ ನಟಿಸಿದ ಪಾತ್ರ) ಇಲ್ಲದ 3 ಈಡಿಯಟ್ಸ್ ಸೀಕ್ವೆಲ್ ಅನ್ನು ಹೇಗೆ ಯೋಚಿಸಬಹುದು?. ಕರೀನಾ ನನಗೆ ಕರೆ ಮಾಡಿ ಮಾಹಿತಿ ನೀಡಿದ್ದು ಒಳ್ಳೆಯದಾಯಿತು. ನನಗೆ ಈ ಬಗ್ಗೆ ಏನೂ ಗೊತ್ತಿಲ್ಲ. ನೀವು ಹೀಗೆ ಮಾಡೋದು ಒಳ್ಳೆಯದಲ್ಲ. ನಮಗೆ ಯಾವುದೇ ಮಾಹಿತಿ ನೀಡದೇ ನೀವು ಯಾವುದಕ್ಕೆ ಮುಂದಾಗಿದ್ದೀರಿ?. ಇದು ಶಿಸ್ತುಬದ್ಧವಲ್ಲ. ನಮ್ಮ ಸ್ನೇಹ ಏನಾಯಿತು? ನಾವು ಸ್ನೇಹಿತರೆಂದು ನಾನು ಭಾವಿಸಿದ್ದೆ'' ಎಂದು ಹೇಳಿ, ನಟ ಜಾವೇದ್ ಜಾಫೆರಿ ಅವರಿಗೆ ಕರೆ ಮಾಡುತ್ತಿದ್ದೇನೆ ಎಂದು ಹೇಳುವ ಮೂಲಕ ಈ ವಿಡಿಯೋ ಕೊನೆಗೊಳಿಸಿದ್ದಾರೆ.

ಇದನ್ನೂ ಓದಿ: ಇಂಡಿಯನ್ ಸ್ಪೋರ್ಟ್ಸ್ ಹಾನರ್ಸ್‌ ಸಮಾರಂಭ: ದೀಪ್​ವೀರ್​, ವಿರುಷ್ಕಾ ಭಾಗಿ

ಕರೀನಾ ಕಪೂರ್​ ಖಾನ್ ಮತ್ತು ಬೊಮನ್ ಇರಾನಿ ನಂತರ, ಜಾವೇದ್ ಜಾಫೆರಿ ಕೂಡ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ವಿಡಿಯೋ ಕ್ಲಿಪ್ ಅನ್ನು ಹಂಚಿಕೊಂಡಿದ್ದಾರೆ. ವಿಡಿಯೋ ಕ್ಲಿಪ್​ನಲ್ಲಿ ತಮ್ಮ ನಿರಾಶೆ ವ್ಯಕ್ತಪಡಿಸಿರುವ ಅವರು, "ನೀವು ಇತ್ತೀಚಿನ ಸುದ್ದಿಗಳನ್ನು ನೋಡಿದ್ದೀರಾ?. ರಾಂಚೋ ಇಲ್ಲದೇ 3 ಈಡಿಯಟ್ಸ್ ಭಾಗ 2ರ ಮೇಕಿಂಗ್ ಆಗಿದೆ. ನಾನು ರಾಂಚೋ, ಅವನು ಚೋಟೆ. ಇದರ ಬಗ್ಗೆ ಏನಾದರೂ ತಿಳಿದಿದೆಯೇ ಅಥವಾ ಇಲ್ಲವೇ ಎಂಬುದನ್ನು ಅರಿಯಲು ನಟಿ ಮೋನಾ ಸಿಂಗ್ ಅವರಿಗೆ ಕೇಳುತ್ತೇನೆ ಎಂದು ಹೇಳುವ ಮೂಲಕ ಈ ವಿಡಿಯೋ ಕೊನೆಗೊಳಿಸಿದ್ದಾರೆ.

ಇದನ್ನೂ ಓದಿ: 'ಎಲ್ಲಾ ಗೇಲಿಗೂ ಹೊಡಿ ಗೋಲಿ, ನೀನು ನೀನಾಗಿರು': ಪೆಪ್ಸಿ ಜಾಹೀರಾತಿನಲ್ಲಿ ರಾಕಿಂಗ್​ ಸ್ಟಾರ್​ ಯಶ್

ರಾಜ್‌ಕುಮಾರ್ ಹಿರಾನಿ ನಿರ್ದೇಶನದ '3 ಈಡಿಯಟ್ಸ್' 2009ರಲ್ಲಿ ಬಿಡುಗಡೆ ಆಗಿದೆ. ಅಭಿಮಾನಿಗಳು ಮತ್ತು ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆದು ಸೂಪರ್​ ಹಿಟ್ ಆಗಿತ್ತು. ನಟರು ತಮ್ಮ ಈ ವಿಡೀಯೋಗಳನ್ನು ಕೈಬಿಟ್ಟ ನಂತರ, ಅಭಿಮಾನಿಗಳು ರೆಡ್​ ಹಾರ್ಟ್​ ಎಮೋಜಿಗಳಿಂದ ಕಾಮೆಂಟ್ ವಿಭಾಗದಲ್ಲಿ ಬ್ಯುಸಿಯಾದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.