ಬುರ್ಜ್ ಖಲೀಫಾದಲ್ಲಿ 'ಅನಿಮಲ್​' ಸ್ಪೆಷಲ್​ ವಿಡಿಯೋ ಪ್ರದರ್ಶನ - ನೋಡಿ

author img

By ETV Bharat Karnataka Desk

Published : Nov 18, 2023, 1:35 PM IST

Animal special video screening at Burj Khalifa

'Animal' special video screening at Burj Khalifa: ವಿಶ್ವದ ಅತ್ಯಂತ ಎತ್ತರದ ಕಟ್ಟಡ ಖ್ಯಾತಿಯ ಐಕಾನಿಕ್ ಬುರ್ಜ್ ಖಲೀಫಾದಲ್ಲಿ 'ಅನಿಮಲ್​' ಸ್ಪೆಷಲ್​ ವಿಡಿಯೋ ಪ್ರದರ್ಶನಗೊಂಡಿದೆ.

'ಅನಿಮಲ್​' ಬಿಡುಗಡೆಗೆ ಸಜ್ಜಾಗುತ್ತಿರುವ ಬಹುನಿರೀಕ್ಷಿತ ಚಿತ್ರಗಳಲ್ಲೊಂದು. ಇದೇ ಮೊದಲ ಬಾರಿಗೆ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಮತ್ತು ಬಾಲಿವುಡ್​ ಸ್ಟಾರ್​ ಹೀರೋ ರಣ್​ಬಿರ್​ ಕಪೂರ್​ ತೆರೆ ಹಂಚಿಕೊಂಡಿರುವ ಈ ಚಿತ್ರದಲ್ಲಿ ಅನಿಲ್ ಕಪೂರ್, ಬಾಬಿ ಡಿಯೋಲ್, ತ್ರಿಪ್ತಿ ಡಿಮ್ರಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಟೀಸರ್, ಹಾಡುಗಳ ಮೂಲಕ ಚಿತ್ರ ಈಗಾಗಲೇ ಸಾಕಷ್ಟು ಕ್ರೇಜ್​ ಕ್ರಿಯೇಟ್​ ಮಾಡಿದೆ.

ಬಿಡುಗಡೆ ದಿನಾಂಕ ಹತ್ತಿರವಾಗುತ್ತಿದ್ದಂತೆ ಚಿತ್ರತಂಡ ಪ್ರಚಾರವನ್ನು ತೀವ್ರಗೊಳಿಸಿದೆ. ಚಿತ್ರದ 60 ಸೆಕೆಂಡುಗಳ ಸ್ಪೆಷಲ್​ ವಿಡಿಯೋವೊಂದನ್ನು ದುಬೈನ ಐಕಾನಿಕ್​​ ಬುರ್ಜ್ ಖಲೀಫಾದಲ್ಲಿ ಪ್ರದರ್ಶಿಸಲಾಗುವುದು ಎಂಬ ಸುದ್ದಿ ಇತ್ತೀಚೆಗೆ ಬಹಿರಂಗಗೊಂಡಿತ್ತು. ಅಂತಿಮವಾಗಿ, ವಿಶ್ವದ ಅತ್ಯಂತ ಎತ್ತರದ ಕಟ್ಟಡ ಖ್ಯಾತಿಯ ಬುರ್ಜ್ ಖಲೀಫಾದಲ್ಲಿ ಅನಿಮಲ್‌ನ ವಿಶೇಷ ವಿಡಿಯೋ ಪ್ರದರ್ಶನವಾಗಿದ್ದು, ಸೊಷಿಯಲ್​ ಮೀಡಿಯಾದಲ್ಲಿ ಈ ಸಂಬಂಧ ಫೋಟೋ - ವಿಡಿಯೋಗಳು ಸಖತ್​ ಸದ್ದು ಮಾಡುತ್ತಿವೆ.

Animal special video screening at Burj Khalifa
ಬಾಬಿ ಡಿಯೋಲ್ ಇನ್​ಸ್ಟಾ ಸ್ಟೋರಿ

ಸಂದೀಪ್​ ರೆಡ್ಡಿ ವಂಗಾ ನಿರ್ದೇಶನದ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿರುವ ಬಾಬಿ ಡಿಯೋಲ್ ತಮ್ಮ ಇನ್​ಸ್ಟಾ ಸ್ಟೋರಿನಲ್ಲಿ ಬುರ್ಜ್ ಖಲೀಫಾ ಈವೆಂಟ್​ನ ವಿಡಿಯೋ ಹಂಚಿಕೊಂಡಿದ್ದಾರೆ. ರಣ್​​ಬೀರ್ ಕಪೂರ್ ಹಾಗೂ ಭೂಷಣ್ ಕುಮಾರ್ ಜೊತೆ ತಾವು ದುಬೈನಲ್ಲಿರುವ ಐಕಾನಿಕ್ ಬುರ್ಜ್ ಖಲೀಫಾದಲ್ಲಿ ಅನಿಮಲ್​ ಸ್ಪೆಷಲ್​ ವಿಡಿಯೋ ಪ್ರದರ್ಶನವಾಗುತ್ತಿರುವುದನ್ನು ವೀಕ್ಷಿಸಿರುವ ದೃಶ್ಯ ಇದಾಗಿತ್ತು. ಸಂತಸದ ಕ್ಷಣಗಳನ್ನು ಹಂಚಿಕೊಂಡ ಬಾಬಿ ಡಿಯೋಲ್, ''ದುಬೈನಲ್ಲಿ ಅನಿಮಲ್​" ಎಂದು ಬರೆದಿದ್ದಾರೆ.

ಇದನ್ನೂ ಓದಿ: ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಬರಗೂರು ರಾಮಚಂದ್ರಪ್ಪರ 'ಚಿಣ್ಣರ ಚಂದ್ರ' ಸಿನಿಮಾ ಸದ್ದು

ಬಾಬಿ ಡಿಯೋಲ್ ಅವರು ರಣ್​​ಬೀರ್ ಕಪೂರ್ ಮತ್ತು ನಿರ್ಮಾಪಕ ಭೂಷಣ್ ಕುಮಾರ್ ಸೇರಿದಂತೆ ಚಿತ್ರದ ಇತರೆ ಸದಸ್ಯರೊಂದಿಗೆ ಕ್ಲಿಕ್ಕಿಸಿಕೊಂಡಿರುವ ಫೋಟೋವನ್ನೂ ಸಹ ತಮ್ಮ ಇನ್​ಸ್ಟಾಗ್ರಾಮ್​​ ಸ್ಟೋರಿನಲ್ಲಿ ಪೋಸ್ಟ್ ಮಾಡಿದ್ದಾರೆ. ರಣ್​​ಬೀರ್ ಬ್ಲ್ಯಾಕ್​ ಫುಲ್​​ ಸ್ಲೀವ್ಸ್ ಜಾಕೆಟ್‌, ಬ್ಲ್ಯಾಕ್​ ಪ್ಯಾಂಟ್, ಬ್ರೌನ್​ ಶೂಸ್ ಧರಿಸಿ ಸಖತ್​ ಹ್ಯಾಂಡ್ಸಮ್​ ಆಗಿ ಕಾಣಿಸಿಕೊಂಡಿದ್ದಾರೆ. ಮತ್ತೊಂದೆಡೆ ಬಾಬಿ ಡಿಯೋಲ್ ಬೂದು ಬಣ್ಣದ ಪ್ಯಾಂಟ್, ವೈಟ್​ ಶರ್ಟ್, ವೈಟ್​ ಶೂಸ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರತಂಡದೊಂದಿಗೆ ಬುರ್ಜ್ ಖಲೀಫಾವನ್ನು ವೀಕ್ಷಿಸುತ್ತಿರುವುದು, ಐಕಾನಿಕ್ ಕಟ್ಟದ ಎದುರು ಚಿತ್ರತಂಡದೊಂದಿಗೆ ನಿಂತಿರುವ ದೃಶ್ಯಗಳನ್ನು ಬಾಬಿ ಡಿಯೋಲ್ ಹಂಚಿಕೊಂಡಿರುವ ಇನ್​ಸ್ಟಾಗ್ರಾಮ್​ ಸ್ಟೋರಿನಲ್ಲಿ ಕಾಣಬಹುದಾಗಿದೆ.

ಇದನ್ನೂ ಓದಿ: ಬುರ್ಜ್ ಖಲೀಫಾದಲ್ಲಿ 'ಅನಿಮಲ್'​​ ಸ್ಪೆಷಲ್​ ಪ್ರಮೋಶನ್​​ ವಿಡಿಯೋ ಪ್ರದರ್ಶನಕ್ಕೆ ಸಿದ್ಧತೆ!

ಭೂಷಣ್ ಕುಮಾರ್ ಮತ್ತು ಕ್ರಿಶನ್ ಕುಮಾರ್ ಅವರ ಟಿ-ಸೀರೀಸ್, ಮುರಾದ್ ಖೇತಾನಿಯವರ ಸಿನಿ1 ಸ್ಟುಡಿಯೋಸ್ ಮತ್ತು ಪ್ರಣಯ್ ರೆಡ್ಡಿ ವಂಗಾ ಅವರ ಭದ್ರಕಾಳಿ ಪಿಕ್ಚರ್ಸ್ ಸೇರಿ ಅನಿಮಲ್​ ಚಿತ್ರವನ್ನು ನಿರ್ಮಾಣ ಮಾಡಿದೆ. ಹಿಂದಿ, ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಡಿಸೆಂಬರ್ 1 ರಂದು ಸಿನಿಮಾ ಬಿಡುಗಡೆ ಆಗಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.