ಬುರ್ಜ್ ಖಲೀಫಾದಲ್ಲಿ 'ಅನಿಮಲ್'​​ ಸ್ಪೆಷಲ್​ ಪ್ರಮೋಶನ್​​ ವಿಡಿಯೋ ಪ್ರದರ್ಶನಕ್ಕೆ ಸಿದ್ಧತೆ!

author img

By ETV Bharat Karnataka Team

Published : Nov 17, 2023, 8:00 PM IST

animal movie

ಪ್ರಸಿದ್ಧ ಬುರ್ಜ್ ಖಲೀಫಾದಲ್ಲಿ ಸ್ಪೆಷಲ್​ ಪ್ರಮೋಶನ್​​ ವಿಡಿಯೋವನ್ನು ಅನಾವರಣಗೊಳಿಸಲು ಅನಿಮಲ್ ಚಿತ್ರತಂಡ ತಯಾರಿ ನಡೆಸಿದೆ.

ಬಾಲಿವುಡ್​ ನಟ ರಣ್​​ಬೀರ್ ಕಪೂರ್, ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಅಭಿನಯದ 'ಅನಿಮಲ್' ಸಿನಿಮಾ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಸಿನಿಮಾ ಪ್ರಮೋಶನ್​ ಜೋರಾಗೇ ನಡೆಯುತ್ತಿದೆ. ಚಿತ್ರತಂಡ ಪ್ರಸಿದ್ಧ ಬುರ್ಜ್ ಖಲೀಫಾದಲ್ಲಿ ಸ್ಪೆಷಲ್​ ಪ್ರಮೋಶನ್​​ ವಿಡಿಯೋವನ್ನು ಪ್ರದರ್ಶಿಸಲು ಸಜ್ಜಾಗುತ್ತಿದೆ.

  • " class="align-text-top noRightClick twitterSection" data="">

ಅನಿಮಲ್ ಸ್ಪೆಷಲ್​ ವಿಡಿಯೋ: ಸಿನಿಮಾದ ಬಿಡುಗಡೆ ದಿನಾಂಕ ಹತ್ತಿರವಾಗುತ್ತಿದ್ದಂತೆ ಚಿತ್ರ ನಿರ್ಮಾಪಕರು ಬಿರುಸಿನ ಪ್ರಚಾರ ಕೈಗೊಳ್ಳುತ್ತಿದ್ದಾರೆ. ಬುರ್ಜ್ ಖಲೀಫಾದ ರಂಗೇರಿಸಲು, ಸಿನಿಮಾ ಸುತ್ತಲಿನ ಕ್ರೇಜ್​​ ಹೆಚ್ಚಿಸಲು ರಣ್​​ಬೀರ್, ರಶ್ಮಿಕಾ ಮಂದಣ್ಣ, ಅನಿಲ್ ಕಪೂರ್ ಮತ್ತು ಬಾಬಿ ಡಿಯೋಲ್ ಅವರನ್ನೊಳಗೊಂಡ 60 ಸೆಕೆಂಡ್ಸ್​ನ ವಿಶೇಷ ವಿಡಿಯೋವನ್ನು ಪ್ರದರ್ಶಿಸಲು ಸಿದ್ಧತೆ ನಡೆದಿದೆ.

  • " class="align-text-top noRightClick twitterSection" data="">

ಅನಿಮಲ್​ ಪ್ರಮೋಶನಲ್ ಈವೆಂಟ್: ಇನ್ನೆರಡು ವಾರದಲ್ಲಿ ಅನಿಮಲ್‌ ಸಿನಿಮಾ ಬಿಡುಗಡೆ ಆಗಲಿದೆ. ಹೀಗಿರುವಾಗ ಚಿತ್ರತಂಡ ತಮ್ಮ ಬಹುನಿರೀಕ್ಷಿತ ಸಿನಿಮಾ ಪ್ರಚಾರವನ್ನು ಹೆಚ್ಚಿಸುತ್ತಿದ್ದಾರೆ. ಚಿತ್ರದ ಟೀಸರ್, ಹಾಡುಗಳು ಬಿಡುಗಡೆ ಆಗಿದ್ದು ಸಿನಿಮಾ ಮೇಲಿನ ಅಭಿಮಾನಿಗಳ ಕುತೂಹಲವನ್ನು ಹೆಚ್ಚಿಸಿದೆ. ಇದೀಗ 60 ಸೆಕೆಂಡ್​ಗಳ ಸ್ಪೆಷಲ್​ ವಿಡಿಯೋವನ್ನು ಐಕಾನಿಕ್ ಬುರ್ಜ್ ಖಲೀಫಾದಲ್ಲಿ ಪ್ರದರ್ಶಿಸಲು ಸಿದ್ಧತೆ ನಡೆಯುತ್ತಿದೆ. ದುಬೈನ ಐಕಾನಿಕ್ ಬುರ್ಜ್ ಖಲೀಫಾದಲ್ಲಿ ನಡೆಯಲಿರುವ ಅನಿಮಲ್​ ಪ್ರಮೋಶನಲ್ ಈವೆಂಟ್​ನಲ್ಲಿ​​ ನಿರ್ಮಾಪಕ ಭೂಷಣ್ ಕುಮಾರ್ ಅವರೊಂದಿಗೆ ನಾಯಕ ನಟ ರಣ್​​ಬೀರ್ ಕಪೂರ್ ಮತ್ತು ಬಾಬಿ ಡಿಯೋಲ್ ಭಾಗವಹಿಸಲಿದ್ದಾರೆ ಎಂದು ವರದಿಗಳು ಸೂಚಿಸಿವೆ. ಈವೆಂಟ್​ನ ಅಧಿಕೃತ ದಿನಾಂಕವನ್ನುಚಿತ್ರತಂಡ ಇನ್ನಷ್ಟೇ ಘೋಷಿಸಬೇಕಿದೆ.

  • " class="align-text-top noRightClick twitterSection" data="">

ಬಾಲಿವುಡ್‌ಗೆ ದುಬೈ ಕೂಡ ಪ್ರಮುಖ ಮಾರುಕಟ್ಟೆಯಾಗಿರುವುದರಿಂದ ಈ ಪ್ರಮೋಶನಲ್​ ಈವೆಂಟ್​ ಸಾಕಷ್ಟು ಮಹತ್ವ ಪಡೆದುಕೊಂಡಿದೆ. ಶಾರುಖ್ ಖಾನ್ ಅವರು ಬುರ್ಜ್ ಖಲೀಫಾದಲ್ಲಿ ತಮ್ಮ ಕೆಲ ಚಲನಚಿತ್ರಗಳ ಗ್ಲಿಂಪ್ಸ್​ ಅನ್ನು ಪ್ರದರ್ಶಿಸೋ ಮೂಲಕ ಟ್ರೆಂಡ್​ ಕ್ರಿಯೇಟ್​ ಮಾಡಿದ್ದಾರೆ. ವಿಶ್ವದಾದ್ಯಂತ ಪ್ರೇಕ್ಷಕರನ್ನು ಆಕರ್ಷಿಸುವ ಸರದಿ ಸದ್ಯ ರಣ್​​ಬೀರ್ ಕಪೂರ್​ ಅವರದ್ದು.

ಇದನ್ನೂ ಓದಿ: ಭಾರತದ ಸೌಂದರ್ಯ ಪಸರಿಸಿದ ಶ್ವೇತಾ ಶಾರ್ದಾ: ಆಕರ್ಷಕ ವೇಷಭೂಷಣದಲ್ಲಿ ಭುವನ ಸುಂದರಿ ಸ್ಪರ್ಧಿಗಳು

ಅನಿಮಲ್ ಒಂದು ಕ್ರೈಮ್ ಥ್ರಿಲ್ಲರ್ ಸಿನಿಮಾ. ಆ್ಯಕ್ಷನ್​ ಥ್ರಿಲ್ಲರ್ ಕಥೆ ಜೊತೆ ತಂದೆ-ಮಗನ ಸಂಬಂಧದಲ್ಲಿನ ಅಂತರ, ಪ್ರೇಮ್​ಕಹಾನಿಯಂತಹ ಹೃದಯಸ್ಪರ್ಶಿ ಕಂಟೆಂಟ್​ಗಳನ್ನು ಒಳಗೊಂಡಿದೆ. ಪಾಪಾ ಮೇರಿ ಜಾನ್ ಸಾಂಗ್​ ಇತ್ತೀಚೆಗಷ್ಟೇ ಬಿಡುಗಡೆ ಆಗಿದೆ. ರಣ್​​ಬೀರ್ ಕಪೂರ್ ಮತ್ತು ಅನಿಲ್ ಕಪೂರ್ ಅವರ ಅಭಿನಯ ತಂದೆ ಮಗನ ಕುರಿತಾದ ಕಥೆಯ ಒಂದು ಸಣ್ಣ ನೋಟವನ್ನು ಒದಗಿಸಿದೆ. ಇದಕ್ಕೂ ಮೊದಲು ಅನಾವರಣಗೊಂಡ ಹುವಾ ಮೈನ್ ಮತ್ತು ಸತ್ರಂಗಾ ಹಾಡುಗಳು ರಣ್​​ಬೀರ್ ಮತ್ತು ರಶ್ಮಿಕಾ ನಡುವಿನ ಕೆಮಿಸ್ಟ್ರಿಯನ್ನು ಎತ್ತಿ ಹಿಡಿದಿದೆ.

ಇದನ್ನೂ ಓದಿ: ಯುರೋಪ್​ನಿಂದ ಮರಳಿದ ದೀಪ್​ವೀರ್​: ಏರ್​ಪೋರ್ಟ್​​ನಲ್ಲಿ ಕಾಣಿಸಿಕೊಂಡ ರಣ್​​ಬೀರ್ ಕಪೂರ್

ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಅನಿಮಲ್​ ಸಿನಿಮಾ ಡಿಸೆಂಬರ್ 1 ರಂದು ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. ಮೇಘನಾ ಗುಲ್ಜಾರ್ ನಿರ್ದೇಶನದ ಸ್ಯಾಮ್ ಬಹದ್ದೂರ್‌ ಸಹ ಅಂದೇ ಬಿಡುಗಡೆಯಾಗಲಿದ್ದು, ಬಾಕ್ಸ್ ಆಫೀಸ್‌ ಪೈಪೋಟಿ ಏರ್ಪಡಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.