ETV Bharat / entertainment

ಮಕ್ಕಳೊಂದಿಗೆ ಮಗುವಾದ ಆಲಿಯಾ.. ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂತಸ

author img

By

Published : Apr 25, 2023, 1:03 PM IST

ಮುಂಬೈ ವಿಮಾನ ನಿಲ್ದಾಣದಲ್ಲಿ ನಟಿ ಆಲಿಯಾ ಭಟ್​ ಅನೇಕ ಪುಟಾಣಿ ಅಭಿಮಾನಿಗಳನ್ನು ಭೇಟಿಯಾದರು.

Alia Bhatt
ಮಕ್ಕಳೊಂದಿಗೆ ಮಗುವಾದ ಆಲಿಯಾ

ಬಾಲಿವುಡ್​ ನಟಿ ಆಲಿಯಾ ಭಟ್​ ಅವರಿಗೆ ಮಕ್ಕಳ ಮೇಲೆ ವಿಶೇಷವಾಗಿಯೇ ಪ್ರೀತಿ ಇದೆ. ತಮ್ಮ ಶೂಟಿಂಗ್​ ಸಮಯದಲ್ಲಿ ಅಥವಾ ಹೊರಗಡೆ ತೆರಳಿದಾಗ ಮಕ್ಕಳನ್ನು ಭೇಟಿಯಾದಾಗ ನಟಿ ಅವರೊಂದಿಗೆ ಸೇರಿ ಕುಣಿದು ಕುಪ್ಪಳಿಸುತ್ತಾರೆ. ಸೋಮವಾರ ರಾತ್ರಿ ಆಲಿಯಾ ಭಟ್​ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು. ಅಲ್ಲಿ ಅನೇಕ ಪುಟಾಣಿ ಅಭಿಮಾನಿಗಳನ್ನು ಭೇಟಿಯಾದರು. ಅವರ ಜೊತೆ ತುಂಬಾ ಪ್ರೀತಿಯಿಂದ ಮಾತನಾಡಿಸಿದರು. ಇದೇ ವೇಳೆ, ಅನೇಕ ಫ್ಯಾನ್ಸ್​ ಜೊತೆ ಸೆಲ್ಫಿ ತೆಗೆಸಿಕೊಂಡರು.

Alia Bhatt
ಅಭಿಮಾನಿಗಳೊಂದಿಗೆ ಸೆಲ್ಫಿಗೆ ಪೋಸ್​ ನೀಡಿದ ಆಲಿಯಾ ಭಟ್​

ಮುಂಬೈ ಮೂಲದ ಪಾಪರಾಜಿಗಳು ಈ ವಿಡಿಯೋವನ್ನು ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ. ನಟಿ ಕ್ರೀಮ್​ ಕಲರ್​ ಸ್ಟೈಲಿಶ್​ ಡ್ರೆಸ್​ನಲ್ಲಿ ಕಾಣಿಸಿಕೊಂಡರು. ಕಪ್ಪು ಹ್ಯಾಂಡ್​ ಬ್ಯಾಗ್​ನೊಂದಿಗೆ ತಮ್ಮ ನೋಟವನ್ನು ಪೂರ್ಣಗೊಳಿಸಿದರು. ಅವರು ಆರಾಮದಾಯಕವಾಗಿ ಅಭಿಮಾನಿಗಳೊಂದಿಗೆ ಬೆರೆತರು. ಮಕ್ಕಳ ಜೊತೆ ಪ್ರೀತಿಯಿಂದ ಮಾತನಾಡಿಸುತ್ತಾ ಫೋಟೋಗೆ ಪೋಸ್​ ನೀಡಿದರು. ಅವರ ಇಂತಹ ಒಳ್ಳೆ ಗುಣಕ್ಕೆ ಸೋಷಿಯಲ್​ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

Alia Bhatt
ಆಲಿಯಾ ಪುಟಾಣಿ ಅಭಿಮಾನಿ

ಇನ್ನೂ ಆಲಿಯಾ ಭಟ್​ ರಾಕಿ ಔರ್​ ರಾಣಿ ಕಿ ಪ್ರೇಮ್ ಕಹಾನಿ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾದಲ್ಲಿ ಆಲಿಯಾ ಭಟ್​ ಜೊತೆ ರಣವೀರ್​ ಸಿಂಗ್​ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಜೊತೆಗೆ ಧರ್ಮೇಂದ್ರ, ಜಯಾ ಬಚ್ಚನ್​ ಮತ್ತು ಶಬಾನಾ ಅಜ್ಮಿ ಸಹ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾವು ರಾಕಿ ಮತ್ತು ರಾಣಿಯ ಪ್ರೇಮ ಕಹಾನಿ ಹೇಳುತ್ತದೆ. ಈಗಾಗಲೇ ಸಿನಿಮಾವನ್ನು ಫೆಬ್ರವರಿ 14, ಪ್ರೇಮಿಗಳ ದಿನದಂದು ಬಿಡುಗಡೆಗೊಳಿಸಲು ನಿರ್ಧರಿಸಲಾಗಿತ್ತು. ಆದರೆ, ಕಾರಣಾಂತರಗಳಿಂದ ಮುಂದೂಡಲಾಗಿದ್ದು, ಬರುವ ಜುಲೈ 28 ರಂದು ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.

ಇದನ್ನೂ ಓದಿ: ಬ್ಯೂಟಿಫುಲ್​​ ಡ್ರೆಸ್​ನಲ್ಲಿ ಮಹೇಶ್​ ಪುತ್ರಿ; ಆಲಿಯಾಗೆ ಥ್ಯಾಂಕ್ಸ್​ ಹೇಳಿದ ಸಿತಾರಾ​!

ಮಗಳ ಆರೈಕೆಯಲ್ಲಿ ಬ್ಯುಸಿಯಾಗಿದ್ದ ನಟಿ: ಆಲಿಯಾ ಮತ್ತು ರಣಬೀರ್​ 2018 ರಲ್ಲಿ ತೆರೆಕಂಡ ಹಿಟ್​ ಚಿತ್ರ ಬ್ರಹ್ಮಾಸ್ತ್ರ ಸೆಟ್​ನಿಂದ ಡೇಟಿಂಗ್​ ಮಾಡಲು ಪ್ರಾರಂಭಿಸಿದ್ದರು. 5 ವರ್ಷಗಳಿಂದ ಪ್ರೀತಿಯಲ್ಲಿದ್ದ ಈ ಜೋಡಿ ಕಳೆದ ವರ್ಷ ಏಪ್ರಿಲ್​ 14 ರಂದು ದಾಂಪತ್ಯಕ್ಕೆ ಕಾಲಿರಿಸಿದರು. ಮುಂಬೈನಲ್ಲಿರುವ ರಣಬೀರ್​ ನಿವಾಸದಲ್ಲಿ ಕುಟುಂಬಸ್ಥರು ಮತ್ತು ಆಪ್ತ ಸ್ನೇಹಿತರ ಸಮ್ಮುಖದಲ್ಲಿ ವಿವಾಹ ಸಮಾರಂಭ ನಡೆಯಿತು.

ರಣಬೀರ್​ - ಆಲಿಯಾ ಮದುವೆ ಸಮಾರಂಭದಲ್ಲಿ​ ಅಯಾನ್ ಮುಖರ್ಜಿ, ಕರೀನಾ ಕಪೂರ್, ಪೂಜಾ ಭಟ್, ಶಾಹೀನ್ ಭಟ್, ಕರಿಷ್ಮಾ ಕಪೂರ್, ಸೈಫ್ ಅಲಿ ಖಾನ್, ನತಾಶಾ ನಂದಾ, ರೀಮಾ ಜೈನ್ ಸೇರಿದಂತೆ ಇತರ ಆಪ್ತರು ಭಾಗಿಯಾಗಿದ್ದರು. ಕೆಲವು ತಿಂಗಳ ನಂತರ ನವೆಂಬರ್​ 6 ರಂದು ಈ ದಂಪತಿ ಹೆಣ್ಣು ಮಗುವನ್ನು ಸ್ವಾಗತಿಸಿದರು. ಅವಳಿಗೆ ರಾಹಾ ಎಂಬುದಾಗಿ ನಾಮಕರಣ ಮಾಡಿದರು.

ಆದರೆ ಇಲ್ಲಿಯವರೆಗೂ ಮಗಳ ಮುಖವನ್ನು ಕ್ಯಾಮರಾ ಮುಂದೆ ದಂಪತಿ ಬಹಿರಂಗಪಡಿಸಿಲ್ಲ. ಕೆಲ ಸಮಯ ಆಲಿಯಾ ಭಟ್​ ಮಗುವಿನ ಆರೈಕೆಯಲ್ಲಿ ಬ್ಯುಸಿಯಾಗಿ ಬಿಟ್ಟಿದ್ದರು. ಇದೀಗ ಮತ್ತೆ ತಮ್ಮ ಸಿನಿಮಾಗಳೆಡೆಗೆ ಗಮನ ಹರಿಸಿದ್ದಾರೆ. ಜೊತೆಗೆ ಕೆಲವೊಂದು ಕಾರ್ಯಕ್ರಮಗಳಲ್ಲೂ ಆಲಿಯಾ ತಮ್ಮ ಪತಿ ಜೊತೆ ಭಾಗಿಯಾಗುತ್ತಿದ್ದಾರೆ.

ಇದನ್ನೂ ಓದಿ: ಹೆಂಡತಿಯ ಚಪ್ಪಲಿ ಎತ್ತಿಟ್ಟ ರಣಬೀರ್ ಕಪೂರ್​​: ನೆಟ್ಟಿಗರಿಂದ ಮೆಚ್ಚುಗೆ ಪಡೆದ ವಿಡಿಯೋ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.