ETV Bharat / entertainment

ಪ್ರಭಾಸ್​ ನಟನೆಯ 'ಆದಿಪುರುಷ್​' ಚಿತ್ರದ ಟ್ರೇಲರ್​ ಔಟ್​

author img

By

Published : May 9, 2023, 5:01 PM IST

Updated : May 9, 2023, 6:05 PM IST

ನಟ ಪ್ರಭಾಸ್​ ಅಭಿನಯದ ಬಹುನಿರೀಕ್ಷಿತ ಸಿನಿಮಾ 'ಆದಿಪುರುಷ್​' ಟ್ರೇಲರ್​ ಇದೀಗ ಬಿಡುಗಡೆಯಾಗಿದೆ.

Adipurush trailer
'ಆದಿಪುರುಷ್​'

ಪ್ಯಾನ್​ ಇಂಡಿಯಾ ಸ್ಟಾರ್​ ಪ್ರಭಾಸ್​ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಬಹುನಿರೀಕ್ಷಿತ ಸಿನಿಮಾ 'ಆದಿಪುರುಷ್​' ಟ್ರೇಲರ್​ ಇದೀಗ ಬಿಡುಗಡೆಯಾಗಿದೆ. ಓಂ ರಾವುತ್​ ನಿರ್ದೇಶಿಸಿದ ಆದಿಪುರುಷ್​​ ಸಿನಿಮಾ ಮಹಾಕಾವ್ಯ ರಾಮಾಯಣ ಆಧರಿಸಿದ ಪೌರಾಣಿಕ ನಾಟಕವಾಗಿದೆ. ಪ್ರಭಾಸ್​ ರಾಮನಾಗಿ, ಕೃತಿ ಸನನ್ ಸೀತೆಯಾಗಿ ಮತ್ತು ಸನ್ನಿ ಸಿಂಗ್​ ಲಕ್ಷ್ಮಣನಾಗಿ ನಟಿಸಿದ್ದಾರೆ. ರಾವಣನ ಪಾತ್ರಕ್ಕೆ ಸೈಫ್​ ಅಲಿ ಖಾನ್ ಬಣ್ಣ ಹಚ್ಚಿದ್ದಾರೆ. 'ಆದಿಪುರುಷ್'​ ಚಿತ್ರವನ್ನು ಟಿ ಸೀರಿಸ್​ನ ಭೂಷಣ್​ ಕುಮಾರ್​, ಕೃಷ್ಣ ಕುಮಾರ್​, ರಾವುತ್​, ಪ್ರಸಾದ್​ ಸುತಾರ್​​ ಮತ್ತು ರಾಜೇಶ್​ ನಾಯರ್​ ನಿರ್ಮಿಸಿದ್ದಾರೆ.

70 ದೇಶಗಳಲ್ಲಿ ಟ್ರೇಲರ್​ ಬಿಡುಗಡೆ: ಆದಿಪುರುಷ್​​ ಚಿತ್ರವು ಭಾರಿ ವೆಚ್ಚದಲ್ಲಿ ನಿರ್ಮಾಣವಾಗಿದೆ. ಹೀಗಾಗಿಯೇ ಸಿನಿಮಾದ ಟ್ರೇಲರ್​ ಅದ್ದೂರಿಯಾಗಿಯೇ ರಿಲೀಸ್​ ಆಗಿದೆ. ಹೌದು. ಭಾರತ ಮಾತ್ರವಲ್ಲದೇ ಕೆನಡಾ, ಆಸ್ಟ್ರೇಲಿಯಾ, ಯುನೈಟೆಡ್​ ಸ್ಟೇಟ್ಸ್​, ಯುನೈಟೆಡ್​ ಕಿಂಗ್​ಡಮ್​, ಮಲೇಷ್ಯಾ, ನ್ಯೂಜಿಲ್ಯಾಂಡ್​​, ಸಿಂಗಾಪುರ್​, ರಷ್ಯಾ ಸೇರಿದಂತೆ 70 ದೇಶಗಳಲ್ಲಿ ಬಿಡುಗಡೆ ಆಗಿದೆ. ಈ ಮೂಲಕ ಆದಿಪುರುಷ್​ ಟ್ರೇಲರ್​ ಜಾಗತಿಕ ಮಟ್ಟದಲ್ಲಿ ಮೆಚ್ಚುಗೆ ಗಳಿಸಿದೆ.

'ಆದಿಪುರುಷ್​' ಟ್ರೇಲರ್​ನಲ್ಲೇನಿದೆ?: 'ಮನುಷ್ಯನಾಗಿ ಹುಟ್ಟಿ ದೇವನಾದ. ಅವನ ಜೀವನವೇ ಸದಾಚಾರಕ್ಕೆ, ಸನ್ಮಾರ್ಗಕ್ಕೆ ಸಾಕ್ಷಿ. ಅವನ ಹೆಸರೇ ರಾಘವ. ಅವನು ಅಧರ್ಮದ ಗರ್ವವನ್ನು ಕೊನೆಗಾಣಿಸಿದ' ಎಂದು ಹನುಮಂತ ಹೇಳುವ ಮೂಲಕ ಆದಿಪುರುಷ್​ ಟ್ರೇಲರ್​ ಪ್ರಾರಂಭವಾಗುತ್ತದೆ. ರಾಮ, ಸೀತೆ ವನವಾಸಕ್ಕೆ ಎಂದು ಕಾಡಿಗೆ ತೆರಳುವುದು, ಸೀತೆಯ ಅಪಹರಣ, ಹನುಮಂತನ ಭೇಟಿ ಹೀಗೆ ಇಡೀ ರಾಮಾಯಣದ ಕಥೆಯನ್ನು ಚಿಕ್ಕದಾಗಿ 30 ನಿಮಿಷದ ಟ್ರೇಲರ್​ನಲ್ಲಿ ತೋರಿಸಲಾಗಿದೆ. ಚಿತ್ರದ ಪ್ರತಿಯೊಂದು ದೃಶ್ಯವೂ ಅದ್ಭುತವಾಗಿದೆ. ಮಾತ್ರವಲ್ಲದೇ ಜೈ ಶ್ರೀ ರಾಮ್​ ಚಿತ್ರದ ಹಿನ್ನೆಲೆ ಸಂಗೀತ ಹೈಲೈಟ್​ ಆಗಿತ್ತು.

ಇದನ್ನೂ ಓದಿ: ಅರಿಜಿತ್​​ ಸಿಂಗ್ ಕೈ ಹಿಡಿದೆಳೆದ ಮಹಿಳಾ ಅಭಿಮಾನಿ: ಸ್ಟಾರ್​ ಸಿಂಗರ್‌ಗೆ ಗಾಯ

ಇನ್ನೊಂದೆಡೆ, ಆದಿಪುರುಷ್​ ಬಿಡುಗಡೆಗೆ ದಿನ ಸಮೀಪಿಸುತ್ತಿದೆ. ಆದರೂ ಸದ್ಯ ನಿರ್ಮಾಪಕರು ವಿಶುವಲ್​ ಎಫೆಕ್ಟ್​ಗಳ ಕೆಲಸದಲ್ಲಿ ತೊಡಗಿದ್ದಾರೆ. ಹೀಗಾಗಿ ಅಂತಿಮ ಔಟ್​ಪುಟ್​ ಮತ್ತಷ್ಟು ಉತ್ತಮವಾಗಿರಲಿದೆ ಎಂದು ನಿರೀಕ್ಷಿಸಲಾಗಿದೆ. ನಿರ್ಮಾಪಕರು ಇನ್ನೂ ಸಿನಿಮಾ ವಿಚಾರವಾಗಿ ಕೆಲಸ ಮಾಡುತ್ತಿರುವುದರಿಂದ, ಚಿತ್ರದ ಬಿಡುಗಡೆ ದಿನಾಂಕ ಮುಂದೂಡಲ್ಪಡುತ್ತದೆ ಎಂಬ ಸುದ್ದಿಗಳು ಸೋಷಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿದೆ. ಆದರೆ ನಿರ್ಮಾಪಕರು ಚಿತ್ರದ ಬಿಡುಗಡೆಯ ವೇಳೆಗೆ ಅಂತಿಮ ಆವೃತ್ತಿ ಸಿದ್ಧವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.​

  • " class="align-text-top noRightClick twitterSection" data="">

ಇದಲ್ಲದೇ ನ್ಯೂಯಾರ್ಕ್​ನಲ್ಲಿ ಜೂನ್​ 7ರಿಂದ ಜೂನ್​ 18 ರವರೆಗೆ ನಡೆಯಲಿರುವ 2023ರ ಆವೃತ್ತಿಯ ಎಸ್ಕೇಪ್​ ಫ್ರಾಂ ಟ್ರೆಬೆಕಾ ಸೆಕ್ಷನ್​ ಅಡಿ ಈ ಚಿತ್ರ ವರ್ಲ್ಡ್​​ ಪ್ರಿಮೀಯರ್​ ಕಾಣಲಿದೆ. ಚಿತ್ರವು ಪ್ಯಾನ್​ ಇಂಡಿಯಾ ಮಟ್ಟದಲ್ಲಿ ತಯಾರಾಗುತ್ತಿದ್ದು, ಜೂನ್​ 16 ರಂದು ವಿಶ್ವಾದ್ಯಂತ ಬಿಡುಗಡೆಯಾಗಲು ಸಿದ್ಧಗೊಳ್ಳುತ್ತಿದೆ. ಈ ಕ್ರಮದಲ್ಲಿ ಚಿತ್ರತಂಡ ಸಿನಿಮಾ ಪ್ರಮೋಷನ್​ ಆರಂಭಿಸಿದೆ. ಹೀಗಾಗಿಯೇ ಚಿತ್ರತಂಡ ಒಂದೊಂದಾಗಿ ಹೊಸ ಪೋಸ್ಟರ್​ ಮತ್ತು ನ್ಯೂ ಅಪ್​ಡೇಟ್​ ಅನ್ನು ಪ್ರೇಕ್ಷಕರ ಮುಂದೆ ತರುತ್ತಿದೆ.

ಇದನ್ನೂ ಓದಿ: ಕೇರಳ ಸ್ಟೋರಿ ಬ್ಯಾನ್​ 'ರಾಜಕೀಯ ಪ್ರೇರಿತ': ಸಿನಿಮಾ ವೀಕ್ಷಿಸಿ ನಿರ್ಧಾರ ಕೈಗೊಳ್ಳಿ ಎಂದ ನಿರ್ದೇಶಕ

Last Updated :May 9, 2023, 6:05 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.