ETV Bharat / entertainment

ಚಿತ್ರ ನಿರ್ಮಾಪಕ ಭರತ್​ಗೆ ಬೆದರಿಕೆ ಆರೋಪ.. ನಟ‌ ದರ್ಶನ್ ವಿರುದ್ಧ ದೂರು

author img

By

Published : Aug 9, 2022, 12:21 PM IST

Updated : Aug 9, 2022, 9:09 PM IST

ನಿರ್ಮಾಪಕ ಭರತ್ ಅವರು ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ವಿರುದ್ಧ ದೂರು ನೀಡಿದ್ದಾರೆ.

Producer Bharat  Actor Darshan
ನಿರ್ಮಾಪರಕ ಭರತ್​ ನಟ ದರ್ಶನ್​

ಕನ್ನಡ ಚಿತ್ರರಂಗದಲ್ಲಿ ನಟ‌ ದರ್ಶನ್, ತಮ್ಮ‌ ಸಿನಿಮಾಗಳು ಮತ್ತು ಹೆಚ್ಚಾಗಿ ವೈಯಕ್ತಿಕ ವಿಚಾರಗಳಿಗೆ ಹೆಚ್ಚು ಸುದ್ದಿಯಲ್ಲಿ ಇರ್ತಾರೆ. ಈಗ ಸಿನಿಮಾ ನಿರ್ಮಾಪಕನಿಗೆ ಬೆದರಿಕೆ ಹಾಕಿದ ಆರೋಪ ದರ್ಶನ್ ವಿರುದ್ಧ ಕೇಳಿಬಂದಿದೆ. ನಟ ದರ್ಶನ್ ಬೆದರಿಕೆ ಹಾಕಿರುವುದಾಗಿ ಆರೋಪಿಸಿ ನಿರ್ಮಾಪಕ ಭರತ್ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ವಿವಾದದ ಹಿನ್ನೆಲೆ.. ಕೊರೊನಾ ಸಂದರ್ಭದಲ್ಲಿ ದರ್ಶನ್ ಸಂಬಂಧಿಯಾಗಿರುವ, ಧ್ರುವನ್​ಗೆ ಸಿನಿಮಾ ಮಾಡಬೇಕು ಎಂದು ನಿರ್ಮಾಪಕ ಭರತ್, 'ಭಗವಾನ್ ಶ್ರೀಕೃಷ್ಣ ಪರಮಾತ್ಮ' ಹೆಸರಿನ ಸಿನಿಮಾವನ್ನು ಎರಡು ವರ್ಷದ ಹಿಂದೆ ಮುಹೂರ್ತ ನೆರವೇರಿಸಿ, ಶೂಟಿಂಗ್ ಶುರು ಮಾಡಿದ್ದರು. ಆದರೆ ಹಣಕಾಸಿನ ತೊಂದರೆಯಿಂದ ಆ ಸಿನಿಮಾ ಚಿತ್ರೀಕರಣ ನಿಂತು ಹೋಗಿತ್ತು. ಆಗ ನಿರ್ಮಾಪಕ ಭರತ್ ಹಣಕಾಸಿನ ಸಮಸ್ಯೆ ಆಗಿದೆ. ಅದಕ್ಕೆ ಚಿತ್ರೀಕರಣ ತಡವಾಗಿದೆ ಅಂತಾ ನಟ ಧ್ರುವನ್ ಬಳಿ ಹೇಳಿದ್ದರು. ಆಗ ಧ್ರುವನ್ ಅವರು ದರ್ಶನ್ ಅವರಿಂದ ನಿರ್ಮಾಪಕರಿಗೆ ಕರೆ ಮಾಡಿಸಿದ್ದರು. ಆ ಸಮಯದಲ್ಲಿ ದರ್ಶನ್, ನಿರ್ಮಾಪಕರಿಗೆ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಕೆಂಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಎನ್‌ಸಿಆರ್ ಮಾಡಿಕೊಳ್ಳಲಾಗಿದೆ. ದೂರಿನ ಸಂಬಂಧ ನಾಯಕ ನಟ ಧ್ರುವನ್ ಭಗವಾನ್ ಶ್ರೀ ಕೃಷ್ಣ ಪರಮಾತ್ಮ ಸಿನಿಮಾದ ನಿರ್ದೇಶಕ ಅಂಥೊನಿ, ಸಿನಿಮಾದ ಕ್ಯಾಮರಾಮ್ಯಾನ್ ಅವರ ಜೊತೆ ಠಾಣೆಗೆ ಹೋಗಿ ಹೇಳಿಕೆ ನೀಡಿದ್ದಾರೆ.

ದೂರಿಗೆ ಸಂಬಂಧಿಸಿದಂತೆ ದರ್ಶನ್ ಅವರದ್ದು ಎನ್ನಲಾಗುತ್ತಿರುವ ಆಡಿಯೋ ಒಂದು ಹರಿದಾಡುತ್ತಿದೆ. ಈ ಆಡಿಯೋ ಆಧಾರದ ಮೇಲೆ ಪೊಲೀಸ್ ಠಾಣೆಯಲ್ಲಿ ಚಾಲೆಂಜಿಂಗ್​​ ಸ್ಟಾರ್​ ವಿರುದ್ಧ ದೂರು ದಾಖಲಾಗಿದೆ.

ಇದನ್ನೂ ಓದಿ : ಸಿನಿಮಾ ಬಹಿಷ್ಕರಿಸುವುದರಲ್ಲಿ ಅರ್ಥವಿಲ್ಲ: ನಟ ಅಕ್ಷಯ್ ಕುಮಾರ್

Last Updated :Aug 9, 2022, 9:09 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.