ETV Bharat / entertainment

ಸಿನಿಮಾ ಬಹಿಷ್ಕರಿಸುವುದರಲ್ಲಿ ಅರ್ಥವಿಲ್ಲ: ನಟ ಅಕ್ಷಯ್ ಕುಮಾರ್

author img

By

Published : Aug 8, 2022, 7:58 PM IST

Updated : Aug 8, 2022, 9:59 PM IST

ಜನರು ಬಾಲಿವುಡ್ ಬಹಿಷ್ಕರಿಸಿ, ಅಮೀರ್ ಖಾನ್ ಅವರನ್ನು ಬಹಿಷ್ಕರಿಸಿ, ಲಾಲ್ ಸಿಂಗ್ ಚಡ್ಡಾ ಸಿನಿಮಾ ಬಹಿಷ್ಕರಿಸಿ ಎಂದು ಹೇಳುವುದಕ್ಕೆ ನನಗೆ ಬೇಸರವಿದೆ ಎಂದು ನಟ ಅಕ್ಷಯ್ ಕುಮಾರ್ ಹೇಳಿದರು.

Ahead of release clash, Akshay Kumar has this to say on boycott Laal Singh Chaddha trend
ಸಿನಿಮಾ ಬಹಿಷ್ಕರಿಸುವುದರಲ್ಲಿ ಅರ್ಥವಿಲ್ಲ: ನಟ ಅಕ್ಷಯ್ ಕುಮಾರ್

ಕೊಲ್ಕತ್ತಾ(ಪ.ಬಂಗಾಳ): ಬಾಲಿವುಡ್​ನಲ್ಲಿ ಮುಂದಿನ ವಾರ ಬಹುನಿರೀಕ್ಷಿತ ಎರಡು ಸಿನಿಮಾಗಳು ಒಂದೇ ದಿನ ತೆರೆ ಕಾಣಲಿವೆ. ಈಗಿನಿಂದಲೇ ಬಾಕ್ಸ್​ ಆಫೀಸ್​ ಕಲೆಕ್ಷನ್​ ಬಗ್ಗೆ ಚರ್ಚೆಯೂ ಶುರುವಾಗಿದೆ. ಶುಕ್ರವಾರ (ಆಗಸ್ಟ್ 11) ರಂದು ಅಕ್ಷಯ್ ಕುಮಾರ್ ನಟನೆಯ ರಕ್ಷಾ ಬಂಧನ್​ ಮತ್ತು ಅಮೀರ್ ಖಾನ್ ನಟನೆಯ ಲಾಲ್ ಸಿಂಗ್ ಚಡ್ಡಾ ಬಿಡುಗಡೆಗೆ ಅಣಿಯಾಗುತ್ತಿವೆ. ದೊಡ್ಡ ನಟರ ಈ ಚಿತ್ರಗಳು ಒಂದೇ ದಿನ ತೆರೆಗೆ ಬರುತ್ತಿದ್ದು ಕಲೆಕ್ಷನ್​ ವಿಚಾರದಲ್ಲಿ ಪೈಪೋಟಿ ಏರ್ಪಡಬಹುದು ಎನ್ನಲಾಗುತ್ತಿದೆ.

ಆದರೆ, ಲಾಲ್ ಸಿಂಗ್ ಚಡ್ಡಾ ಚಿತ್ರ ಬಾಯ್ಕಾಟ್ ಮಾಡುವಂತೆ ಸೋಷಿಯಲ್ ಮೀಡಿಯಾದಲ್ಲಿ ಆಂದೋಲನ ನಡೆಯುತ್ತಿದ್ದು ಈ ಬಗ್ಗೆ ಅಕ್ಷಯ್​ ಕುಮಾರ್ ಪ್ರತಿಕ್ರಿಯಿಸಿ, "ಭಾರತದಲ್ಲಿ ಎಲ್ಲರಿಗೂ ಮಾತನಾಡುವ ಸ್ವಾತಂತ್ರ್ಯವಿದೆ. ಹಾಗಂತ ನೀವು ಈ ಸಿನಿಮಾವನ್ನು ನೋಡಬೇಡಿ ಎಂದು ಹೇಳುವುದು ತಪ್ಪು. ನಿಮಗೆ ಸಿನಿಮಾವನ್ನು ನೋಡಲು ಇಷ್ಟವಿಲ್ಲದಿದ್ದರೆ ನೋಡಬೇಡಿ. ನೋಡಬೇಕೇ ಅಥವಾ ಬೇಡವೇ ಎಂಬ ವಿಚಾರ ಅವರವರಿಗೆ ಬಿಟ್ಟದ್ದು. ಆದರೆ, ನೋಡಬೇಡಿ ಎಂದು ಹೇಳುವುದು ನಮಗೆ ನಾವೇ ಮಾಡಿಕೊಂಡ ದ್ರೋಹ" ಎಂದರು.

ಅಕ್ಷಯ್​ ಕುಮಾರ್​ ಪ್ರತಿಕ್ರಿಯೆ

"ಉದ್ಯಮ ಯಾವುದೇ ಆಗಿರಲಿ. ಅವುಗಳೆಲ್ಲ ಆರ್ಥಿಕತೆಗೆ ಸಹಾಯ ಮಾಡುತ್ತವೆ. ಹಾಗಾಗಿ, ಸಿನಿಮಾಗಳನ್ನು ಬಹಿಷ್ಕರಿಸುವಂತಹ ಕೆಲಸಗಳಲ್ಲಿ ಅರ್ಥವಿಲ್ಲ. ಈ ವಿಚಾರದಲ್ಲಿ ಜನರು ಬಾಲಿವುಡ್ ಬಹಿಷ್ಕರಿಸಿ, ಅಮೀರ್ ಖಾನ್ ಬಹಿಷ್ಕರಿಸಿ, ಲಾಲ್ ಸಿಂಗ್ ಚಡ್ಡಾ ಬಹಿಷ್ಕರಿಸಿ ಎಂದು ಹೇಳುತ್ತಿರುವುದಕ್ಕೆ ನನಗೆ ಬೇಸರವಿದೆ" ಎಂದು ಅಭಿಪ್ರಾಯಿಸಿದರು.

ಇದನ್ನೂ ಓದಿ: ಚುಟು ಚುಟು ಅಂತೈತಿ ಹಾಡಿನ ನೃತ್ಯ ನಿರ್ದೇಶಕ ಭೂಷಣ್​​ ಈಗ‌ ಸಿನಿಮಾ‌ ಹೀರೋ!

Last Updated : Aug 8, 2022, 9:59 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.