ETV Bharat / entertainment

54th IFFI: ಗೋವಾದಲ್ಲಿ ನಡೆಯಲಿರುವ ಪ್ರತಿಷ್ಠಿತ ಚಲನಚಿತ್ರೋತ್ಸವದ ಮಾಹಿತಿ ನಿಮಗಾಗಿ

author img

By ETV Bharat Karnataka Team

Published : Nov 14, 2023, 1:13 PM IST

International Film Festival of India: ನವೆಂಬರ್ 20 ರಿಂದ 28ರ ವರೆಗೆ ಗೋವಾದಲ್ಲಿ 'ಇಂಟರ್​ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಆಫ್ ಇಂಡಿಯಾ' ನಡೆಯಲಿದೆ.

54th International Film Festival of India
ಇಂಟರ್​ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಆಫ್ ಇಂಡಿಯಾ

ಇದೇ ನವೆಂಬರ್ 20 ರಿಂದ 28ರ ವರೆಗೆ ಗೋವಾದಲ್ಲಿ ನಡೆಯಲಿರುವ 54ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (International Film Festival of India) ಪ್ರೇಕ್ಷಕರನ್ನು ಆಕರ್ಷಿಸಲು ಸಜ್ಜಾಗಿದೆ. ನ್ಯಾಷನಲ್ ಫಿಲ್ಮ್ ಡೆವಲಪ್‌ಮೆಂಟ್ ಕಾರ್ಪೊರೇಷನ್ ಲಿಮಿಟೆಡ್ ಈ ಬಹುನಿರೀಕ್ಷಿತ ಚಲನಚಿತ್ರೋತ್ಸವವನ್ನು ಆಯೋಜಿಸುತ್ತಿದೆ. ಇಲ್ಲಿ ಹಲವು ಸಿನಿಮಾಗಳನ್ನು ಪ್ರದರ್ಶಿಸಲಾಗುತ್ತದೆ. ಈ ಮೂಲಕ ತಾರೆಯರು ಮತ್ತು ಸಿನಿಪ್ರಿಯರ ನಡುವೆ ಸಂಪರ್ಕ ಸೃಷ್ಟಿಸುವ ಉದ್ದೇಶವನ್ನು ಈ ಪ್ರತಿಷ್ಠಿತ ಕಾರ್ಯಕ್ರಮ ಹೊಂದಿದೆ.

  • Immerse yourself in the mesmerizing allure of 'Farrey' as they grace the red carpet at #IFFI54 in Goa! Be there on Nov 21st to share in the thrill and catch a glimpse of this extraordinary team. Don't miss out on this cinematic celebration!
    Register now at https://t.co/JZISyPm1zS pic.twitter.com/UBcpQNjcS3

    — International Film Festival of India (@IFFIGoa) November 14, 2023 " class="align-text-top noRightClick twitterSection" data=" ">

2023ರ ''ಇಂಟರ್​ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಆಫ್ ಇಂಡಿಯಾ'' ಹೊಸ ಸಿನಿಮಾಗಳನ್ನು ಪ್ರದರ್ಶಿಸಲಿದೆ. ಹಾಲಿವುಡ್ ನಟ ಮೈಕೆಲ್ ಡೌಗ್ಲಾಸ್ ಭಾಗಿ ಆಗಲಿದ್ದಾರೆ. ಸಿನಿಮಾಗಳು ಮತ್ತು ಟೆಲಿವಿಷನ್​​ ಸೀರಿಸ್​​​ಗಳನ್ನು "ಗಾಲಾ ಪ್ರೀಮಿಯರ್ಸ್"ನ ಭಾಗವಾಗಿ ಪ್ರದರ್ಶಿಸಲಾಗುತ್ತದೆ. ಇದೊಂದು ಸಿನಿಮಾ ಸ್ಟಾರ್ಸ್ - ಸಾರ್ವಜನಿಕರ ನಡುವಿನ ಸಂಬಂಧವನ್ನು ಬೆಳೆಸಲು ಹೊಸದಾಗಿ ಪರಿಚಯಿಸಲಾಗಿರುವ ಕಾರ್ಯಕ್ರಮ. ಸಲ್ಮಾನ್ ಖಾನ್ ಸಂಬಂಧಿ ಅಲಿಜೆ ಅಗ್ನಿಹೋತ್ರಿ ನಟಿಸಿರುವ ಫಾರೆ (Farrey) ಜೊತೆ ಹಲವು ಸಿನಿಮಾಗಳು ಗೋವಾದಲ್ಲಿ ನಡೆಯಲಿರುವ ಪ್ರತಿಷ್ಠಿತ ಚಲನಚಿತ್ರೋತ್ಸವದ ಭಾಗವಾಗಿ ಪ್ರದರ್ಶನಗೊಳ್ಳಲಿದೆ. ಚಿತ್ರೋತ್ಸವದಲ್ಲಿ, ಪಂಕಜ್ ತ್ರಿಪಾಠಿ ಅವರ 'ಕಡಕ್ ಸಿಂಗ್' ಮತ್ತು ವಿಜಯ್ ಸೇತುಪತಿ, ಅರವಿಂದ್ ಸ್ವಾಮಿ ಮತ್ತು ಅದಿತಿ ರಾವ್ ಹೈದರಿ ನಟಿಸಿರುವ, ಎ.ಆರ್ ರೆಹಮಾನ್ ಸಂಗೀತವಿರುವ 'ಗಾಂಧಿ ಟಾಕ್ಸ್‌' ಪ್ರೀಮಿಯರ್ (world premiere) ನಡೆಯಲಿದೆ.

  • Join us on Wednesday, 22 November at 12:30 PM for a captivating session – “Living the Character” with the versatile actor Vijay Sethupathy in conversation with the renowned Kushboo Sundar only at the #iffi54 pic.twitter.com/NNrRUtDUxP

    — International Film Festival of India (@IFFIGoa) November 13, 2023 " class="align-text-top noRightClick twitterSection" data=" ">

ಕಿಶೋರ್ ಪಾಡುರಂಗ್ ಬೇಲೇಕರ್ ಅವರ ಗಾಂಧಿ ಟಾಕ್ಸ್ ಬಂಡವಾಳಶಾಹಿ, ವರ್ಣಭೇದ ನೀತಿ ಸೇರಿದಂತೆ ಹಲವು ವಿಚಾರಗಳ ಸುತ್ತ ಸುತ್ತುತ್ತದೆ. ಸೌಮೇಂದ್ರ ಪಾಧಿ ಅವರ ಫಾರೆ ಸಿನಿಮಾ ಒಂದು ರೋಮಾಂಚನಕಾರಿ ಪ್ರಯಾಣವನ್ನು ಒಳಗೊಂಡಿರಲಿದೆ. ಅನಿರುದ್ಧ ರಾಯ್ ಚೌಧರಿ ಅವರ ಕಡಕ್ ಸಿಂಗ್, ಸಮಸ್ಯೆಯೊಂದರಿಂದ (retrograde amnesia) ಬಳಲುತ್ತಿರುವ ಇನ್ಸ್‌ಪೆಕ್ಟರ್ ಎ.ಕೆ ಶ್ರೀವಾಸ್ತವ ಅವರ ಕಥೆಯನ್ನು ಹೇಳಲಿದೆ. ಅನಾರೋಗ್ಯದ ಹೊರತಾಗಿಯೂ, ಅವರು ಚಿಟ್ ಫಂಡ್ ಹಗರಣದ ಸಂಪೂರ್ಣ ರಹಸ್ಯವನ್ನು ಬಿಚ್ಚಿಡಲು ಶ್ರಮ ವಹಿಸಿರೋದು ಈ ಸಿನಿಮಾದಲ್ಲಿ ತೋರಿಸಲಾಗಿದೆ. ಮಿಲಿಂದ್ ರಾವ್ ಅವರ 'ದಿ ವಿಲೇಜ್' ಚಿತ್ರವನ್ನೂ ಕೂಡ ಈ ಉತ್ಸವದಲ್ಲಿ ಪ್ರದರ್ಶಿಸಲಾಗುತ್ತದೆ.

ಇದನ್ನೂ ಓದಿ: 'ಗೇಮ್​ ಸ್ಟಾರ್ಟ್': ಬಿಗ್​ ಬಾಸ್​ ಮನೆಯಲ್ಲಿ ಉಳಿಯಲು ವರ್ತೂರು ಸಂತೋಷ್​​ ನಿರ್ಧಾರ

ಡಿಯರ್ ಜಸ್ಸಿ, ಹರ್ರಿ ಓಂ ಹರ್ರಿ, ರೌತು ಕಿ ಬೆಲಿ, ಧೂತ, ದಿಲ್ ಹೈ ಗ್ರೇ ಮತ್ತು ಗ್ರೇ ಗೇಮ್ಸ್‌ನಂತಹ ಸಿನಿಮಾಗಳ ಮೂಲಕ 'ಗಾಲಾ ಪ್ರೀಮಿಯರ್‌' ವಿಭಾಗವು ಅದ್ಭುತ ಸಿನಿಮೀಯ ಅನುಭವ ನೀಡಲು ಸಜ್ಜಾಗಿದೆ. ಅತಿದೊಡ್ಡ ಚಲನಚಿತ್ರೋತ್ಸವಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿರುವ 'ಐಎಫ್‌ಎಫ್‌ಐ' ಅಂತಾರಾಷ್ಟ್ರೀಯ ಚಲನಚಿತ್ರೋವಗಳ ಪೈಕಿ ಮಹತ್ವದ ಕಾರ್ಯಕ್ರಮ. ಈ ಉತ್ಸವ ಅನುಭವಿ ಮತ್ತು ಉದಯೋನ್ಮುಖ ಚಲನಚಿತ್ರ ನಿರ್ದೇಶಕರಿಗೆ ತಮ್ಮ ಅತ್ಯುತ್ತಮ ಕೆಲಸ, ಪ್ರತಿಭೆಯನ್ನು ವಿಶ್ವದಾದ್ಯಂತ ಪ್ರೇಕ್ಷಕರಿಗೆ ಪ್ರಸ್ತುತಪಡಿಸಲು ಒಂದು ವೇದಿಕೆ.

  • We are thrilled to present our official selection of 15 International and Indian fiction feature films which will compete for the Golden Peacock Award for Best Film!
    Join us in celebrating the joy cinema. Watch this space for updates, and mark your calendars! #IFFI54 pic.twitter.com/6BCWOpYmZa

    — International Film Festival of India (@IFFIGoa) November 8, 2023 " class="align-text-top noRightClick twitterSection" data=" ">

ಇದನ್ನೂ ಓದಿ: ಸಾಲು ಸಾಲು ಸಿನಿಮಾಗಳಲ್ಲಿ ಶ್ರೀಲೀಲಾ ಬ್ಯುಸಿ: ಹೊಸ ಚಿತ್ತಾರಗಳಲ್ಲಿ ಚೆಲುವೆ ಮಿಂಚಿಂಗ್​

ಇಂಟರ್​ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಆಫ್ ಇಂಡಿಯಾ 2023ರ ಕೊನೆಯ ದಿನ ಹಾಲಿವುಡ್ ನಟ ಮೈಕೆಲ್ ಡೌಗ್ಲಾಸ್ ಅವರು 'ಸತ್ಯಜಿತ್ ರೇ ಎಕ್ಸಲೆನ್ಸ್ ಇನ್ ಫಿಲ್ಮ್ ಲೈಫ್ಟೈಮ್ ಅವಾರ್ಡ್' ಸ್ವೀಕರಿಸಲಿದ್ದಾರೆ. ನಟ ಮೈಕೆಲ್ ಡೌಗ್ಲಾಸ್ ಅವರು ಸೂಪರ್​ ಸ್ಟಾರ್ಸ್​ಗಳನ್ನು ಭೇಟಿಯಾಗಲು ಹೈದರಾಬಾದ್‌ಗೆ ಭೇಟಿ ಕೊಡಲಿದ್ದಾರೆಂದು ಸಹ ಹೇಳಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.