ETV Bharat / crime

ಅತಿ ವೇಗ ತಂದ ಆಪತ್ತು.. ಸಾವಿನ ಕ್ಷಣಕ್ಕೆ ವಿಡಿಯೋ ಸಾಕ್ಷಿ ಬಿಟ್ಟೋದ ಯುವಕರು

author img

By

Published : Dec 3, 2022, 7:29 AM IST

ಅತಿ ವೇಗವಾಗಿ ಬೈಕ್​ ಓಡಿಸಿಕೊಂಡು ಬಂದ ಯುವಕರಿಬ್ಬರು ಆಟೋಗೆ ರಭಸವಾಗಿ ಡಿಕ್ಕಿ ಹೊಡೆದು ಸಾವನ್ನಪ್ಪಿದ ಭೀಕರ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

Two Youths Killed in Road accident
ಅತಿ ವೇಗ ತಂದ ಆಪತ್ತು

ಚೆನ್ನೈ(ತಮಿಳುನಾಡು): ವ್ಹೀಲಿಂಗ್​ ಮಾಡುವುದು, ಅತಿ ವೇಗವಾಗಿ ಬೈಕ್ ಚಲಾಯಿಸುವುದು ಕೆಲವರಿಗೆ ಹುಮ್ಮಸ್ಸಿನ ವಿಷಯವಾಗಿರುತ್ತೆ. ಆದ್ರೆ ಅದು ತಮ್ಮ ಪ್ರಾಣಕ್ಕೆ ಕುತ್ತು ಎಂದು ಗೊತ್ತಿದ್ದರೂ ಅತಿವೇಗವಾಗಿ ಬೈಕ್​ ಓಡಿಸಿದ ಯುವಕರಿಬ್ಬರು ರಸ್ತೆ ಅಪಘಾತದಲ್ಲಿ ದಾರುಣವಾಗಿ ಸಾವನ್ನಪ್ಪಿದ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಬೈಕ್​ ಓಡಿಸುವಾಗ ಯುವಕರೇ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.

ಪ್ರವೀಣ್(19), ಹರಿ(17) ಮೃತರು. ಕಾಲೇಜು ಬಳಿಕ ಬೈಕ್​ನಲ್ಲಿ ಇಬ್ಬರು ಹೊರಟಿದ್ದಾರೆ. ಸ್ವಲ್ಪ ಖಾಲಿ ಇದ್ದ ರಸ್ತೆ ಮೇಲೆ ಬೈಕ್​ ಓಡಿಸುತ್ತಿದ್ದ ಪ್ರವೀಣ್​ ರೇಸ್​ ಹೆಚ್ಚಿಸುತ್ತಾನೆ. ಇದನ್ನು ಹಿಂದೆ ಕುಳಿತಿದ್ದ ಹರಿ ವಿಡಿಯೋ ಮಾಡಿದ್ದಾರೆ. ಜನರು ಓಡಾಡುವ ರಸ್ತೆಯಲ್ಲಿ ಇಬ್ಬರೂ ಸೇರಿ ಗಂಟೆಗೆ 115 ಕಿಮೀ ವೇಗದಲ್ಲಿ ಸಾಗಿದ್ದಾರೆ.

110 ರ ವೇಗದಲ್ಲಿ ಆಟೋಗೆ ಬೈಕ್​ ಗುದ್ದಿ ಯುವಕರಿಬ್ಬರ ದುರ್ಮರಣ

ಈ ವೇಳೆ ತಿರುವೊಂದರಲ್ಲಿ ಏಕಾಏಕಿ ಆಟೋವೊಂದು ಎದುರು ಬಂದಿದೆ. 100 ಕ್ಕೂ ಅಧಿಕ ವೇಗದಲ್ಲಿ ಬೈಕ್​ ಡಿಕ್ಕಿ ರಭಸವಾಗಿ ಡಿಕ್ಕಿಯಾಗಿದೆ. ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದಾರೆ. ಬಳಿಕ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ತೀವ್ರ ರಕ್ತಸ್ರಾವದಿಂದ ಯುವಕರಿಬ್ಬರು ಆಸ್ಪತ್ರೆಯಲ್ಲಿ ಉಸಿರು ಚೆಲ್ಲಿದ್ದಾರೆ.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆಟೋ ಚಾಲಕನನ್ನು ಬಂಧಿಸಿದ್ದಾರೆ. ಬೈಕ್​ ಓಡಿಸುತ್ತಿದ್ದ ವಿದ್ಯಾರ್ಥಿಗಳು ವಾಹನ ಪರವಾನಗಿ ಕೂಡ ಹೊಂದಿರಲಿಲ್ಲ ಎಂದು ತನಿಖೆಯಲ್ಲಿ ಗೊತ್ತಾಗಿದೆ.

ಓದಿ: ಗ್ಯಾಂಗ್​ವಾರ್​ನಲ್ಲಿ ಗುಂಡೇಟಿಗೆ ಐವರು ರೌಡಿಗಳು ಖತಂ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.