ETV Bharat / city

ಕೋವಿಡ್‌​ ಕಠಿಣ ನಿಯಮ ಕಾಂಗ್ರೆಸ್​​ಗೂ ಅನ್ವಯ : ಗೃಹ ಸಚಿವ ಆರಗ ಜ್ಞಾನೇಂದ್ರ

author img

By

Published : Jan 5, 2022, 12:30 PM IST

ರಾಜ್ಯದಲ್ಲಿ ದಿನೇದಿನೆ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆ ನೈಟ್​ ಕರ್ಫ್ಯೂ ಜತೆಗೆ ಈಗ ವೀಕ್ ಎಂಡ್ ಕರ್ಫ್ಯೂ ಜಾರಿ ಮಾಡಲಾಗಿದೆ. ಸರ್ಕಾರದ ನಿರ್ಧಾರವನ್ನು ಎಲ್ಲರೂ ಪಾಲಿಸಬೇಕು. ಕಾಂಗ್ರೆಸ್​​ನವರಿಗಾಗಿಯೇ ಪ್ರತ್ಯೇಕ ನಿಯಮ ರೂಪಿಸಿಲ್ಲ..

Home Minister Araga Jnanendra
ಗೃಹ ಸಚಿವ ಆರಗ ಜ್ಞಾನೇಂದ್ರ

ಶಿವಮೊಗ್ಗ : ಕೊರೊನಾ ಟಫ್ ರೂಲ್ಸ್ ಜನ ಸಾಮಾನ್ಯರಿಗೆ ಅನ್ವಯವಾಗುವಂತೆ ಕಾಂಗ್ರೆಸ್ ಪಕ್ಷಕ್ಕೂ ಅನ್ವಯವಾಗುತ್ತದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಕಾಂಗ್ರೆಸ್​​ನ ಮೇಕೆದಾಟು ಪಾದಯಾತ್ರೆಗೆ ಟಾಂಗ್ ನೀಡಿದ್ದಾರೆ.

ಕೋವಿಡ್‌​​ ಕಠಿಣ ನಿಯಮಗಳ ಬಗ್ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ ನೀಡಿರುವುದು..

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ದಿನೇದಿನೆ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿವೆ. ಬೆಂಗಳೂರಿನಲ್ಲಿ ಸಹ ಪ್ರತಿ ದಿನ ಸಾವಿರಾರ ಪಾಸಿಟಿವ್ ಪ್ರಕರಣ ಪತ್ತೆಯಾಗುತ್ತಿವೆ.

ಇದರಿಂದ ರಾಜ್ಯ ಸರ್ಕಾರ ತಜ್ಞರ ಸಲಹೆ ಪಡೆದು ನಿನ್ನೆ (ಮಂಗಳವಾರ) ರಾತ್ರಿಯಿಂದ ಕಠಿಣ ನಿಯಮ ಜಾರಿ ಮಾಡಿದೆ. ನೈಟ್​ ಕರ್ಫ್ಯೂ ಜತೆಗೆ ಈಗ ವೀಕ್ ಎಂಡ್ ಕರ್ಫ್ಯೂ ಜಾರಿ ಮಾಡಿದೆ ಎಂದರು.

ಬೆಂಗಳೂರು ಈಗ ರೆಡ್ ಝೋನ್​​ನಲ್ಲಿದೆ. ಹೀಗಾಗಿ, ನಿಗಾ ವಹಿಸಲಾಗಿದೆ. ಹಿಂದೆ ಎರಡನೇ ಅಲೆ ಬಂದಾಗ ಸ್ವಲ್ಪ ನಿರ್ಲಕ್ಷ್ಯ ವಹಿಸಿದ್ದಕ್ಕೆ ಬೆಲೆ ತೆತ್ತಿದ್ದೇೆವೆ. ಈಗ ಎಲ್ಲರೂ ಈ ಬಗ್ಗೆ ಗಮನ ಹರಿಸದಿದರೆ ಮತ್ತೆ ಬೆಲೆ ತೆರಬೇಕಾಗುತ್ತದೆ ಎಂದು ಸಚಿವರು ಎಚ್ಚರಿಸಿದರು.

ಕಾಂಗ್ರೆಸ್​​ನವರಿಗಾಗಿಯೇ ಪ್ರತ್ಯೇಕ ನಿಯಮ ರೂಪಿಸಿಲ್ಲ: ಸರ್ಕಾರ ಗಮನ ಹರಿಸುತ್ತದೆ, ಪೊಲೀಸರು ನೋಡಿಕೊಳ್ಳುತ್ತಾರೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗುತ್ತದೆ ಎಂದುಕೊಂಡರೆ ಪರಿಸ್ಥಿತಿ ಹದಗೆಡುತ್ತದೆ. ಹಾಗಾಗಿ, ಸರ್ಕಾರದ ಕ್ರಮಕ್ಕೆ ಎಲ್ಲರೂ ಸಹಕಾರ ನೀಡಬೇಕು.

ಈ ಎಲ್ಲಾ ಕ್ರಮಗಳನ್ನು ತಜ್ಞರೊಂದಿಗೆ ಸೇರಿ ಚರ್ಚಿಸಿ ತೆಗೆದುಕೊಳ್ಳಲಾಗಿದೆ. ಸರ್ಕಾರದ ನಿರ್ಧಾರವನ್ನು ಎಲ್ಲರೂ ಪಾಲಿಸಬೇಕು. ಸಭೆ, ಸಮಾರಂಭ ಮಾಡದಂತೆ ನಿರ್ಬಂಧ ಹೇರಲಾಗಿದೆ. ಹಾಗಾಗಿ, ಕಾಂಗ್ರೆಸ್​​ನವರಿಗಾಗಿಯೇ ಪ್ರತ್ಯೇಕ ನಿಯಮ ರೂಪಿಸಿಲ್ಲ ಎಂದು ಸ್ಪಷ್ಟಪಡಿಸಿದರು.

ತೋಳ್ಬಲದ ರಾಜಕಾರಣ ಅವನತಿಗೆ ಕಾರಣ : ರಾಮನಗರ ಭಾಗದಲ್ಲಿ ತೋಳ್ಬಲದ ರಾಜಕಾರಣ ನಡೆಯುತ್ತಿದೆ ಎಂದರೆ ಅದು ಅವರ ಅವನತಿಯ ಪ್ರತೀಕ. ಅಭಿವೃದ್ದಿಯ ಬಗ್ಗೆ ಮಾತನಾಡುವುದು ಬಿಟ್ಟು ತೋಳೇರಿಸಿಕೊಂಡು ಹೋಗುವುದೇನಿತ್ತು?. ತೋಳ್ಬಲದ ರಾಜಕಾರಣ ಬಿದ್ದು ಹೋಗಿರುವುದು ಹಿಂದೆ ಸಾಬೀತಾಗಿದೆ ಎಂದರು.

ಡಿ.ಕೆ ಸುರೇಶ್​​ ಅವರಿಗೂ ಮಾತನಾಡಲು ಅವಕಾಶ ಇತ್ತು. ಹಾಗಾದರೆ, ಇವರ ಪ್ರಕಾರ ವಿಧಾನಸಭೆಯಲ್ಲೂ ಹೊಡೆದಾಡಬೇಕೆ?. ಪ್ರಚೋದನೆಗೊಳ್ಳುವಂತಹ ಯಾವುದೇ ರೀತಿ ಸಚಿವ ಅಶ್ವತ್ಥ್​​ ನಾರಾಯಣ ಮಾತನಾಡಿಲ್ಲ.

ಇಲ್ಲಿ ಅವರ ತಪ್ಪು ಕಾಣುತ್ತಿಲ್ಲ ಎಂದು ತಮ್ಮ ಪಕ್ಷದ ಸಚಿವರನ್ನು ಸಮರ್ಥಿಸಿಕೊಂಡರು.‌ ಇನ್ನು ಕಾರ್ಯಕ್ರಮಕ್ಕೆ ಎಲ್ಲರೂ ಮನೆ ಮನೆಗೆ ಹೋಗಿ ಕರೆಯಲು ಆಗಲ್ಲ. ಇದು ಮದುವೆ ಕಾರ್ಯಕ್ರಮ ಅಲ್ಲ ಎಂದು ಕಾಂಗ್ರೆಸ್​​ ನಾಯಕರಿಗೆ ತಿರುಗೇಟು ನೀಡಿದರು.

ಇದನ್ನೂ ಓದಿ: ರಾಜ್ಯ ವ್ಯಾಪಿ ಕೋವಿಡ್ ನಿರ್ವಹಣೆ: 11 ವಿಶೇಷ ಕಾರ್ಯಪಡೆ ರಚಿಸಿ ಆದೇಶ

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.