ETV Bharat / city

ಮೈಸೂರು: ಬಡತನದಿಂದ ಬೇಸತ್ತು ಹೆತ್ತ ಮಗು‌ವನ್ನೇ ಮಾರಾಟ ಮಾಡಿದ ತಾಯಿ!

author img

By

Published : Apr 10, 2022, 8:52 AM IST

Mysore
ಮೈಸೂರು

ಬಡತನದ ಕಾರಣದಿಂದಾಗಿ ಮಗುವನ್ನು ಮಹಿಳೆಯೊಬ್ಬಳು ಬಸ್​​ ನಿಲ್ದಾಣದಲ್ಲಿ ಮಾರಾಟ ಮಾಡಿರುವ ಪ್ರಕರಣ ಮೈಸೂರು ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

ಮೈಸೂರು: ಬಡತನದಿಂದ ಬೇಸತ್ತು, ಹೆತ್ತ ತಾಯಿಯೇ ತನ್ನ ಮಗುವನ್ನು ಮಾರಾಟ ಮಾಡಿರುವ ಮನಕಲಕುವ ಘಟನೆ ಜಿಲ್ಲೆಯ ಹೆಚ್.ಡಿ ಕೋಟೆ ತಾಲೂಕಿನ ವಿಶ್ವನಾಥ ಕಾಲೋನಿಯಲ್ಲಿ ನಡೆದಿದೆ. ಎಲ್ಲಮ್ಮ ಎಂಬುವವರು ಮಗು ಮಾರಾಟ ಮಾಡಿದ ಮಹಿಳೆ ಎಂದು ತಿಳಿದುಬಂದಿದೆ. ಆಸ್ಪತ್ರೆಯಲ್ಲಿ ಮಾರಾಟ ಮಾಡಿದರೆ, ಗೊತ್ತಾಗುತ್ತದೆ ಎಂಬ ಕಾರಣಕ್ಕೆ ಮಹಿಳೆ ಬಸ್ ನಿಲ್ದಾಣದಲ್ಲಿ ಮಕ್ಕಳಿಲ್ಲದ ದಂಪತಿಗೆ ಮಗುವನ್ನು ಮಾರಾಟ ಮಾಡಿದ್ದಾಳೆ ಎಂದು ತಿಳಿದು ಬಂದಿದೆ.

ಮಗು ಮಾರಾಟ ಮಾಡಿ, ನಂತರ ಮನೆಗೆ ಹೋದಾಗ ಮಗುವಿನ ಬಗ್ಗೆ ಅಕ್ಕಪಕ್ಕದ ಮನೆಯವರು ವಿಚಾರಿಸಿದ್ದಾರೆ. ಇದಕ್ಕೆ ಉತ್ತರಿಸಲು ತಡಬಡಿಸಿದಾಗ, ಸ್ಥಳೀಯರು ಮಕ್ಕಳ ಕಲ್ಯಾಣ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಅಧಿಕಾರಿಗಳು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸದ್ಯ ಪೊಲೀಸರು ಎಲ್ಲಮ್ಮ ಅವರಿಂದ ಮಾಹಿತಿ ಕಲೆ ಹಾಕುತ್ತಿದ್ದಾರೆ.

ಇದನ್ನೂ ಓದಿ: ಮೈಸೂರು: ನ್ಯಾಯಾಧೀಶರ ಮುಂದೆ ವಿಷ ಕುಡಿದು ಆತ್ಮಹತ್ಯೆಗೆ ಯತ್ನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.