ETV Bharat / city

ಧ್ವಜಾರೋಹಣ ವೇಳೆ ಕುಸಿದು ಬಿದ್ದು ಮಾಜಿ ಸೈನಿಕ ಸಾವು... ವಿಡಿಯೋ

author img

By

Published : Aug 15, 2022, 11:34 AM IST

Updated : Aug 15, 2022, 12:59 PM IST

75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಧ್ವಜಾರೋಹಣ ವೇಳೆ ಮಾಜಿ ಸೈನಿಕರೊಬ್ಬರು ಮೃತಪಟ್ಟಿದ್ದಾರೆ.

ಧ್ವಜಾರೋಹಣ ವೇಳೆ ಕುಸಿದು ಬಿದ್ದು ಮಾಜಿ ಸೈನಿಕ ಸಾವು

ಕಡಬ(ದಕ್ಷಿಣ): ಕಡಬ ತಾಲೂಕಿನ ಕುಟ್ರುಪಾಡಿ ಗ್ರಾಮ ಪಂಚಾಯತ್ ವತಿಯಿಂದ ಹಳೆ ಸ್ಟೇಷನ್ ಅಮೃತ ಸರೋವರದ ಬಳಿ ಸ್ವಾತಂತ್ರ್ಯ ಅಮೃತ ಮಹೋತ್ಸವದ ಧ್ವಜಾರೋಹಣ ವೇಳೆ ಓರ್ವ ನಿವೃತ್ತ ಸೈನಿಕ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಗಂಗಾಧರ ಗೌಡ ಮೃತ ನಿವೃತ್ತ ಸೈನಿಕ.

ಧ್ವಜಾರೋಹಣ ನೆರವೇರಿಸಲಿದ್ದ ಹೊಸಮಠ ಸಿ.ಎ.ಬ್ಯಾಂಕಿನ ಮಾಜಿ ಅಧ್ಯಕ್ಷ ಎನ್. ಕರುಣಾಕರ ಗೋಗಟೆ ಅವರಿಗೆ ನಿವೃತ್ತ ಸೈನಿಕ ಗಂಗಾಧರ ಗೌಡ ಅವರು ಧ್ವಜ ವಂದನೆಯ ಮಾಹಿತಿ ನೀಡಿದರು. ಆ ಬಳಿಕ ಧ್ವಜಾರೋಹಣ ಮಾಡಲು ಗೋಗಟೆ ಅವರು ತೆರಳುತ್ತಿದ್ದಂತೆ ಗಂಗಾಧರ ಗೌಡ ಕುಸಿದು ಬಿದ್ದು ಅಸ್ವಸ್ಥಗೊಂಡಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ಕೊಂಡೊಯ್ಯುತ್ತಿದ್ದ ವೇಳೆ ದಾರಿ ಮಧ್ಯೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಮಾಜಿ ಸೈನಿಕ ಕುಸಿದು ಬಿದ್ದಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

ನಿವೃತ್ತ ಯೋಧ ಗಂಗಾಧರ ಅವರ ಪಾರ್ಥಿವ ಶರೀರವನ್ನು ಕಡಬದ ಎಪಿಎಂಸಿಯಿಂದ ಮೆರವಣಿಗೆಯಲ್ಲಿ ಅವರ ಮನೆಗೆ ಕೊಂಡೊಯ್ಯಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

(ಇದನ್ನೂ ಓದಿ: ಸ್ವಾತಂತ್ರ್ಯ ಅಮೃತ​ ಮಹೋತ್ಸವ: ಹುತಾತ್ಮ ಸೈನಿಕರಿಗೆ ಹೊಸ ಯೋಜನೆ ಘೋಷಿಸಿದ ಸಿಎಂ ಬೊಮ್ಮಾಯಿ)

Last Updated : Aug 15, 2022, 12:59 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.