ETV Bharat / city

ಪಿಎಸ್ಐ ನೇಮಕಾತಿ ಅಕ್ರಮ: ಕೆಎಸ್‌ಆರ್‌ಪಿ ಡಿಎಸ್​​​ಪಿ ಅಧಿಕಾರಿ ಸಿಐಡಿ ವಶಕ್ಕೆ

author img

By

Published : May 6, 2022, 9:16 PM IST

PSI recruitment scam, KSRP DSP officer detained by CID, PSI scam, Kalaburagi news, ಪಿಎಸ್ಐ ನೇಮಕಾತಿ ಅಕ್ರಮ, ಕೆಎಸ್‌ಆರ್‌ಪಿ ಡಿಎಸ್ಪಿ ಅಧಿಕಾರಿ ಸಿಐಡಿ ವಶಕ್ಕೆ, ಪಿಎಸ್​ಐ ಹಗರಣ, ಕಲಬುರಗಿ ಸುದ್ದಿ,
ಕೆಎಸ್‌ಆರ್‌ಪಿ ಡಿಎಸ್ಪಿ ಅಧಿಕಾರಿ ಸಿಐಡಿ ವಶಕ್ಕೆ

ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣ ದಿನದಿಂದ ದಿನಕ್ಕೆ ಕುತೂಹಲ ಮೂಡಿಸುತ್ತಿದೆ. ಕಲಬುರಗಿಯಲ್ಲಿ ಕೆಎಸ್‌ಆರ್‌ಪಿ ಡಿಎಸ್​ಪಿ ಅಧಿಕಾರಿಯನ್ನು ವಶಕ್ಕೆ ಪಡೆದ ಸಿಐಡಿ ತಂಡ ವಿಚಾರಣೆ ನಡೆಸುತ್ತಿದೆ.

ಕಲಬುರಗಿ: ಪಿಎಸ್‌ಐ ಹುದ್ದೆಗಳ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಮತ್ತೋರ್ವ ಪೊಲೀಸ್ ಅಧಿಕಾರಿಯನ್ನು ಸಿಐಡಿ ವಶಕ್ಕೆ ಪಡೆದಿದೆ. ಕಲಬುರಗಿಯ ಕೆಎಸ್‌ಆರ್‌ಪಿ ಅಸಿಸ್ಟೆಂಟ್ ಕಮಾಂಡೆಂಟ್ (ಡಿಎಸ್​ಪಿ) ಅನ್ನು ವಶಕ್ಕೆ ಪಡೆದ ಸಿಐಡಿ ಪೊಲೀಸರು ಐವಾನ್ ಏ ಶಾಹಿ ಸರ್ಕ್ಯೂಟ್​ ಹೌಸ್‌ ಆವರಣದಲ್ಲಿರುವ ಸಿಐಡಿ ಕಚೇರಿಗೆ ವಿಚಾರಣೆಗಾಗಿ ಕರೆ ತಂದಿದ್ದಾರೆ.

ಓದಿ: ಪಿಎಸ್​ಐ ನೇಮಕಾತಿ ಹಗರಣ: ಪ್ರಕರಣ ರದ್ದುಕೋರಿ ಹೈಕೋರ್ಟ್ ಮೆಟ್ಟಿಲೇರಿದ ಆರೋಪಿಗಳು

ಅಕ್ರಮದಲ್ಲಿ ಈ ಅಧಿಕಾರಿಯ ಪಾತ್ರ ಏನು ಅನ್ನೋದು ಇನ್ನೂ ಖಚಿತವಾಗಿ ತಿಳಿದು ಬಂದಿಲ್ಲ. ಆದರೆ ಮೂಲಗಳ ಪ್ರಕಾರ ಈ ಅಧಿಕಾರಿ ಪಿಎಸ್ಐ ಪರೀಕ್ಷಾರ್ಥ ಅಭ್ಯರ್ಥಿಗಳು ಹಾಗೂ ಕಿಂಗ್‌ಪಿನ್‌ ನಡುವೆ ಸಂಪರ್ಕ ಸೇತುವೆಯಾಗಿ ಕೆಲಸ ಮಾಡುತ್ತಿದ್ದರೆಂಬ ಶಂಕೆ ವ್ಯಕ್ತವಾಗಿದೆ.

ಓದಿ: PSI ಪರೀಕ್ಷಾ ಅಕ್ರಮ: ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದ ನಾಗೇಶ್​ ಗೌಡ ತಂದೆ!

ನಿನ್ನೆಯಷ್ಟೇ ಡಿವೈಎಸ್​ಪಿ ಮತ್ತು ಸಿಪಿಐ ಬಂಧನವಾಗಿತ್ತು. ಇವರ ಬಂಧನದ ಬೆನ್ನಲ್ಲೇ ಇಂದು ಕೆಎಸ್​ಆರ್​ಪಿ ಅಧಿಕಾರಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಪೊಲೀಸ್ ಅಧಿಕಾರಿಗಳು ಬಲೆಗೆ ಬೀಳುವ ಸಾಧ್ಯತೆ ಇದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.