ETV Bharat / city

ಧಾರವಾಡ : ಪರಿಷತ್ ಚುನಾವಣೆ ಕಾವು-ಮಾಜಿ ಸಿಎಂ ಹೆಚ್​ಡಿಕೆ ಭೇಟಿಯಾದ ಸ್ಥಳೀಯ ನಾಯಕರು

author img

By

Published : Nov 16, 2021, 3:58 PM IST

Local leaders met former CM Kumaraswamy at bangalore
ಪರಿಷತ್ ಚುನಾವಣೆ ಕಾವು-ಮಾಜಿ ಸಿಎಂ ಹೆಚ್​ಡಿಕೆಯನ್ನು ಭೇಟಿಯಾದ ಸ್ಥಳೀಯ ನಾಯಕರು

ಪರಿಷತ್ ಚುನಾವಣೆ (Legislative Council Election) ಕಾವು ಏರುತ್ತಿದೆ. ಬಿಜೆಪಿ ಹಾಗೂ ಕಾಂಗ್ರೆಸ್ಸೇತರ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಇಂದು ಬೆಂಗಳೂರಿನಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿಯವರನ್ನು ಕೆಲ ಸಂಘಟನೆಯ ನಾಯಕರು ಭೇಟಿಯಾಗಿ ಚರ್ಚೆ ನಡೆಸಿದರು..

ಹುಬ್ಬಳ್ಳಿ : ರಾಜ್ಯದಲ್ಲಿ ವಿಧಾನ ಪರಿಷತ್ ಚುನಾವಣೆ (Legislative Council Election) ಕಾವು ಏರುತ್ತಿದೆ. ಅದರಲ್ಲೂ ರಾಷ್ಟ್ರೀಯ ಪಕ್ಷಗಳು ತಮ್ಮ ತಮ್ಮ ಅಭ್ಯರ್ಥಿಗಳ ಆಯ್ಕೆಯಲ್ಲಿ ಬ್ಯುಸಿಯಾಗಿದ್ದಾರೆ.

ಇತ್ತ ಧಾರವಾಡ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ಸೇತರ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಇಂದು ಬೆಂಗಳೂರಿನಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿಯವರನ್ನು(HD Kumaraswamy) ಕೆಲ ಸಂಘಟನೆಯ ನಾಯಕರು ಭೇಟಿಯಾಗಿ ಚರ್ಚೆ ನಡೆಸಿದರು.

Local leaders who met former CM Kumaraswamy
ಮಾಜಿ ಸಿಎಂ ಕುಮಾರಸ್ವಾಮಿ ಅವರನ್ನು ಭೇಟಿಯಾದ ಸ್ಥಳೀಯ ನಾಯಕರು

ಸಭೆಯಲ್ಲಿ ಶಿವಸೇನಾ ರಾಜ್ಯಾಧ್ಯಕ್ಷ ಕುಮಾರ ಹಕಾರಿ, ಕಳಸಾ ಬಂಡೂರಿ ರೈತ‌ ಹೋರಾಟ ಸಮಿತಿ ಅಧ್ಯಕ್ಷ ಸಿದ್ದಣ್ಣ ತೇಜಿ, ಆಪ್ ಪಕ್ಷದ ಜಿಲ್ಲಾಧ್ಯಕ್ಷ ಗೋಪಾಲ ಕುಲಕರ್ಣಿ ಹಾಗೂ ನ್ಯಾಷನಲ್ ಆಪ್ ಪಾರ್ಟಿ ರಾಜ್ಯಾಧಕ್ಷ ಈರಣ್ಣ ಎಮ್ಮಿ ಮತ್ತು ರಾಜ್ಯ ಕಾರ್ಯದರ್ಶಿ ಬಸವಂತಪ್ಪ ಎಮ್ ಅವರು ಭೇಟಿಯಾಗಿ ಧಾರವಾಡ ವಿಧಾನ ಪರಿಷತ್ ಚುಣಾವಣೆ ಕುರಿತು ಹಾಗೂ ಚುಣಾವಣೆಯಲ್ಲಿ‌ ಕಾಂಗ್ರೆಸ್, ಬಿಜೆಪಿಯೇತರ ಒಮ್ಮತದ ಅಭ್ಯರ್ಥಿಯನ್ನು ಹಾಕಲು ನಿರ್ಧರಿಸಲಾಯಿತು.

ಇದನ್ನೂ ಓದಿ: ಸ್ಪರ್ಧಾತ್ಮಕ ಪರೀಕ್ಷೆ ತಯಾರಿ ಕುರಿತು ಕಾರ್ಯಾಗಾರ.. ವಿದ್ಯಾರ್ಥಿಗಳಿಗೆ ಮೇಷ್ಟ್ರು ಆದ ವಿಜಯಪುರದ ಸಿಇಒ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.